ETV Bharat / state

53 ಹೊಸ ಯೋಜನೆಗಳಿಗೆ ಅನುಮೋದನೆ.. 8619 ಉದ್ಯೋಗ ಸೃಷ್ಟಿ ನಿರೀಕ್ಷೆ: ಸಚಿವ ನಿರಾಣಿ - Etv Bharat Kannada

ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ 134ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 53 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

53-new-projects-approved-by-karnataka-industries-department
53 ಹೊಸ ಯೋಜನೆಗಳಿಗೆ ಅನುಮೋದನೆ, 8619 ಉದ್ಯೋಗ ಸೃಷ್ಟಿ ನಿರೀಕ್ಷೆ: ಸಚಿವ ನಿರಾಣಿ
author img

By

Published : Sep 3, 2022, 10:26 PM IST

ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯಮಿದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಒಟ್ಟು 2750.55 ಕೋಟಿ ರೂ. ಮೊತ್ತದ 53 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಕರ್ನಾಟಕ ಉದ್ಯೋಗ ಮಿತ್ರ ಕಚೇರಿಯಲ್ಲಿ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ 134ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

ಒಟ್ಟು 53 ಯೋಜನೆಗಳಿಂದ 2750.55 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಇವುಗಳಿಂದ 8,619 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ. 50 ಕೋಟಿ ರೂ. ಗೂ ಹೆಚ್ಚು ಬಂಡವಾಳ ಹೂಡಿಕೆಯ ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ರೂ. 1670.69 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 4000 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.

ಇದೇ ರೀತಿ 15 ಕೋಟಿ ರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 41 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದ 1062.01 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಅಂದಾಜು 4311 ಜನರಿಗೆ ಉದ್ಯೋಗಗಳು ಸೃಜನೆಯಾಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗೆ ಅನುಮೋದನೆ ನೀಡಿದ್ದು, ಇದರಿಂದ 17.85 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಕಂಪನಿ ಮತ್ತು ಹೂಡಿಕೆ ಹಾಗೂ ಉದ್ಯೋಗಗಳು
  • ಉಕೇಮ್ ಅಗ್ರೀ ಇನ್ಪಾ ಲಿಮಿಟೆಡ್ ​- 497.95 ಕೋಟಿ ರೂ., ಉದ್ಯೋಗ - 425
  • ಸುಂದರಿ ಶುಗರ್ಸ್ ಲಿಮಿಟೆಡ್ - 402.24 ಕೋಟಿ ರೂ., ಉದ್ಯೋಗ - 270
  • ಎವರೆಸ್ಟ್ ಇಂಡಸ್ಟ್ರೀಸ್ ಲಿಮಿಟೆಡ್ 187 ಕೋಟಿ ರೂ. ಹೂಡಿಕೆ, ಉದ್ಯೋಗ - 120
  • ಕೊಪ್ಪಳ ಟಾಯ್ಸ್ ಮೋಲ್ಡಿಂಗ್ ಕೋ ಪ್ರೈವೇಟ್ ಲಿಮಿಟೆಡ್- 131.94 ಕೋಟಿ ರೂ., ಉದ್ಯೋಗ - 800
  • ಅಕ್ವೀಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ - 118.27 ಕೋಟಿ ರೂ., ಉದ್ಯೋಗ - 485
  • ಕೆಆರ್ ಬಿಎಲ್ ಲಿಮಿಟೆಡ್ - 110.25 ಕೋಟಿ ರೂ., ಉದ್ಯೋಗ - 140
  • ಅಕ್ವೀಸ್ ಟಾಯ್ಸ್ ಪ್ರೈವೇಟ್ ಲಿಮಿಟೆಡ್ ಡಿಟಿಎ ಯುನಿಟ್ - 72.58 ಕೋಟಿ ರೂ., ಉದ್ಯೋಗ - 550
  • ಹೆಲ್ಲಾ ಇನ್ಫ್ರಾ ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್ - 71.66 ಕೋಟಿ ರೂ., ಉದ್ಯೋಗ - 1,500
  • ಸಾವಿತ್ರಿ ಪ್ಲೈಬೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ - 49.86 ಕೋಟಿ ರೂ., ಉದ್ಯೋಗ - 515

ಇದನ್ನೂ ಓದಿ: ಮೂಲಸೌಕರ್ಯ ಸುಧಾರಿಸದಿದ್ದಲ್ಲಿ ಬೆಂಗಳೂರು ಬಿಡುತ್ತೇವೆ: ಸಿಎಂಗೆ ಐಟಿ ಕಂಪನಿಗಳಿಂದ ಪತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.