ETV Bharat / state

ಬೆಂಗಳೂರಿಗೆ ಕೊರೊನಾಘಾತ: ಇಂದು 5,066 ಕೋವಿಡ್ ಕೇಸ್ ಪತ್ತೆ​! - ಬೆಂಗಳೂರಿಗೆ ಕೊರೊನಾಘಾತ,

ರಾಜ್ಯ ರಾಜಧಾನಿ ಬೆಂಗಳೂರಿನ ಮೇಲೆ ಮಹಾಮಾರಿ ಕೊರೊನಾ ಕೆಂಗಣ್ಣು ಬೀರಿದೆ. ಒಂದೇ ದಿನ 5,066 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದು, ಜನರನ್ನು ಬೆಚ್ಚಿಬೀಳಿಸಿದೆ.

bengaluru
ಬೆಂಗಳೂರಿನಲ್ಲಿ ಕೊರೊನಾ
author img

By

Published : Apr 7, 2021, 9:58 AM IST

ಬೆಂಗಳೂರು: ನಗರದಲ್ಲಿ ಒಂದೇ ದಿನ 5,066 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಏಪ್ರಿಲ್ 20ರ ವೇಳೆಗೆ ದಿನವೊಂದಕ್ಕೆ 6,500 ಕೇಸ್​ಗಳನ್ನು ದಾಟಬಹುದು ಎಂದು ತಜ್ಞರ ಸಮಿತಿ ಅಂದಾಜಿಸಿದೆ.

ಸದ್ಯ ಏಪ್ರಿಲ್ 7 ರ ವೇಳೆಗೆ 5 ಸಾವಿರ ಪ್ರಕರಣ ದಾಟಿರುವುದು ಆತಂಕ ಮೂಡಿಸಿದೆ. ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿಹೆಚ್ಚು ಜನರಿಗೆ ಕೋವಿಡ್ ಹರಡಿದ್ದು, 983 ಪ್ರಕರಣಗಳು ಕಂಡುಬಂದಿವೆ. ಪೂರ್ವದಲ್ಲಿ 735, ಪಶ್ಚಿಮದಲ್ಲಿ 635, ಮಹದೇವಪುರ 606, ಆರ್​ಆರ್ ನಗರ 389, ದಾಸರಹಳ್ಳಿ 120, ಬೊಮ್ಮನಹಳ್ಳಿಯಲ್ಲಿ 488 ಕೇಸ್​ಗಳು ದೃಢಪಟ್ಟಿವೆ.

ಮಂಗಳವಾರವೂ ನಗರದಲ್ಲಿ 26 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 4,266 ಜನರಲ್ಲಿ ಪಾಸಿಟಿವ್ ದೃಢಪಟ್ಟಿತ್ತು. ನಗರದಲ್ಲಿ ಒಟ್ಟು 119 ಕಂಟೈನ್​ಮೆಂಟ್ ವಲಯಗಳಿವೆ. ಪಾಸಿಟಿವಿಟಿ ಪ್ರಮಾಣ 5.79% ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.