ಬೆಂಗಳೂರು : ಕರ್ನಾಟಕ ಸರ್ಕಾರದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹೊರಡಿಸಿರುವ ಇತ್ತೀಚಿನ ಆದೇಶದಂತೆ ಸನ್ನಡತೆ ತೋರಿದ ಅವಧಿಪೂರ್ವ 161 ಕೈದಿಗಳನ್ನು ರಾಜ್ಯದ ವಿವಿಧ ಕಾರಾಗೃಹಗಳಿಂದ ಬಿಡುಗಡೆಗೊಳಿಸಲಾಗಿದೆ.
166 ಜೀವಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರ ಶಿಫಾರಸು ಮಾಡಿತ್ತು. ಅದರಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಎಸಗಿದ 5 ಅಪರಾಧಿಗಳ ಬಿಡುಗಡೆಯನ್ನು ತಡೆಹಿಡಿದು ಒಟ್ಟು 161 ಕೈದಿಗಳನ್ನು ಬಿಡುಗಡೆಗೊಳಿಸಲು ಅನುಮತಿ ದೊರೆತಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 50 ಕೈದಿಗಳನ್ನು ಬಿಡುಗಡೆಗೊಳಿಸಿ ಜೈಲಿನ ಅಧಿಕಾರಿ ವರ್ಗ ಬಂಧಿಗಳನ್ನ ಬೀಳ್ಕೊಟ್ಟು ಶುಭ ಹಾರೈಸಿದ್ದಾರೆ.