ETV Bharat / state

ಹೆಚ್ಚುವರಿ 10 ರೂಪಾಯಿ ಪಡೆದ ಟೋಲ್​ ಪ್ಲಾಜಾಕ್ಕೆ 5 ಸಾವಿರ ರೂಪಾಯಿ ದಂಡ - consumer forum

ಹೆಚ್ಚುವರಿಯಾಗಿ ಹತ್ತು ರೂ.ಗಳನ್ನು ಪಡೆದುಕೊಂಡಿದ್ದ ಟೋಲ್​ ಪ್ಲಾಜಾವೊಂದಕ್ಕೆ ಬೆಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.

consumer forum
ಗ್ರಾಹಕರ ಕೋರ್ಟ್​
author img

By

Published : Apr 21, 2023, 9:30 PM IST

ಬೆಂಗಳೂರು: ತುಮಕೂರು-ಬೆಂಗಳೂರು ರಸ್ತೆ ಮಾರ್ಗದ ಟೋಲ್​ ಪ್ಲಾಜಾದಲ್ಲಿ ಹೆಚ್ಚುವರಿಯಾಗಿ ಹತ್ತು ರೂ.ಗಳನ್ನು ಪಡೆದುಕೊಂಡಿದ್ದ ಟೋಲ್​ ಪ್ಲಾಜಾವೊಂದಕ್ಕೆ ಬೆಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಬೆಂಗಳೂರಿನ ಗಾಂಧಿ ನಗರದ ನಿವಾಸಿಯಾಗಿರುವ ಸಂತೋಷ್​ ಕುಮಾರ್​ ಎಂಬವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಬಿ.ನಾರಾಯಣಪ್ಪ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ನ್ಯಾಯಾಂಗ ಹೋರಾಟ ನಡೆಸಿದ್ದಕ್ಕೆ ಪರಿಹಾರವಾಗಿ 3 ಸಾವಿರ ರೂಪಾಯಿ ಪಾವತಿಸಬೇಕು. ಮುಂದಿನ ಎರಡು ತಿಂಗಳಲ್ಲಿ ಆದೇಶ ಜಾರಿಯಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಪಾಸ್ಟ್​ ಟ್ಯಾಗ್​ ವ್ಯವಸ್ಥೆಯಿಂದ ಭ್ರಷ್ಟಾಚಾರ ಕಡಿಮೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕೆಲ ಸಂದರ್ಭಗಳಲ್ಲಿ ತಪ್ಪುಗಳಾಗುತ್ತವೆ. ಕೆಲ ಸಂದರ್ಭಗಳಲ್ಲಿ ಹಣ ಕಡಿತವಾದ ಸಾಕಷ್ಟು ಸಮಯದ ಬಳಿಕ ಮೊಬೈಲ್​ಗೆ ಸಂದೇಶ ರವಾನೆಯಾಗಲಿದೆ. ಈ ಎಲ್ಲ ಗೊಂದಲಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಪರಿಹಾರ ಕಂಡುಕೊಳ್ಳಬೇಕು ಎಂದು ಪೀಠ ತಿಳಿಸಿದೆ.

ಇದನ್ನೂ ಓದಿ: ಶಿಯೋಮಿ 5,551.21 ಕೋಟಿ ವಶಪಡಿಸಿಕೊಂಡಿದ್ದ ಇಡಿ ಕ್ರಮ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪ್ರಕರಣ ಹಿನ್ನೆಲೆ: ದೂರುದಾರ ಸಂತೋಶ್​ ಕುಮಾರ್​ ಬೆಂಗಳೂರು- ತುಮಕೂರು ಮಾರ್ಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ನಾಗಪುರ ಮೂಲದ ಜೆಎಎಸ್​ ಟೋಲ್​ ರೋಡ್​ ರಸ್ತೆ ಕಂಪನಿ ಲಿಮಿಟೆಡ್​ ನಿರ್ವಹಣೆ ಮಾಡುತ್ತಿರುವ ರಸ್ತೆಯಲ್ಲಿ 2020ರ ಫೆಬ್ರವರಿ 20 ಮತ್ತು 2020ರ ಮೇ 16 ರಂದು ವಾಹನದಲ್ಲಿ ಸಂಚರಿಸಿದ್ದರು. ಟೋಲ್​ ಪ್ಲಾಜಾ ಮೂಲಕ ಒಮ್ಮೆ ಪ್ರವೇಶಿಸಿದರೆ, 35 ರೂಪಾಯಿಗಳನ್ನು ನಿಗದಿ ಮಾಡಲಾಗಿತ್ತು. ಆದರೆ, ದೂರುದಾರರು ಎರಡು ಬಾರಿ ಈ ಮಾರ್ಗದಲ್ಲಿ ಸಂಚರಿಸಿದ್ದು, 40 ರೂ.ಗಳಂತೆ ಹೆಚ್ಚುವರಿಯಾಗಿ ಪಾಸ್ಟ್​ ಟ್ಯಾಗ್ ಖಾತೆಯಿಂದ ಕಡಿತವಾಗಿತ್ತು. ಈ ಬಗ್ಗೆ ಟೋಲ್​ ಪ್ಲಾಜಾದ ಅಧಿಕಾರಿಯನ್ನು ಪ್ರಶ್ನಿಸಿದರೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಸಂತೋಷ್​ ತಮ್ಮ ವಕೀಲರ ಮೂಲಕ ಲೀಗಲ್​ ನೋಟಿಸ್​ ಜಾರಿ ಮಾಡಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಬೆಂಗಳೂರಿನ ಮೊದಲನೇ ಹೆಚ್ಚುವರಿ ಗ್ರಾಹಕರ ನ್ಯಾಯಾಲಯದಲ್ಲಿ 2021ರ ಜುಲೈ 29ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಬೆಳಗಾವಿ: ಹೊಲಕ್ಕೆ ಹೊರಟಾಗ ವಾಹನ ಹರಿದು ಮೂವರು ರೈತರ ದುರ್ಮರಣ

ಅರ್ಜಿದಾರರ ವಾದವೇನು?: ರಾಜ್ಯದ ಪ್ರತಿಯೊಂದು ಟೋಲ್​ ಪ್ಲಾಜಾಗಳ ಮೂಲಕ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರತಿ ವಾಹನದಿಂದ 5 ರೂ.ಗಳಂತೆ ಕೊಟ್ಯಂತರ ರೂ.ಗಳು ಸಂಗ್ರಹವಾಗುತ್ತಿದೆ. 5 ರೂ.ಗಳಿಗಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾದರೆ ಅದಕ್ಕಿಂತಲೂ ಹೆಚ್ಚು ಪ್ರಮಾಣ ಹಣ ಖರ್ಚಾಗಲಿದೆ ಎಂದು ಯಾರೂ ನ್ಯಾಯಾಂಗ ಹೋರಾಟಕ್ಕೆ ಮುಂದಾಗುತ್ತಿಲ್ಲ.
ಹೀಗಾಗಿ ಮಾನಸಿಕವಾಗಿ ನೊಂದು ಪ್ರತಿವಾದಿಯಾಗಿರುವ ಜೆಎಎಸ್​ ಟೋಲ್​ ರೋಡ್​ ಕಂಪನಿಯಿಂದ 25 ಸಾವಿರ ರೂ.ಗಳ ಪರಿಹಾರ ಮತ್ತು ನ್ಯಾಯಾಂಗ ಹೋರಾಟಕ್ಕಾಗಿ 15 ಸಾವಿರ ರೂ.ಗಳ ಪರಿಹಾರ ನೀಡುವಂತೆ ಸೂಚನೆ ನೀಡಬೇಕು ಎಂದು ದೂರಿನಲ್ಲಿ ಕೋರಿದ್ದರು.

ಇದನ್ನೂ ಓದಿ: ಬೆಂಗಳೂರು: ಕೋರ್ಟ್ ಆವರಣದಲ್ಲೇ ವಕೀಲನಿಗೆ ಚಾಕುವಿನಿಂದ ಇರಿದ ಮಹಿಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.