ETV Bharat / state

7 ಮಂದಿಗೆ ಕೊಕ್​​.. ಐವರು ಹೊಸ ಮುಖಗಳಿಗೆ ಮಣೆ: ಬಿಎಸ್​​ವೈ ಮುಂದೆ ಮಂಡಿಯೂರಿತೆ ಹೈಕಮಾಂಡ್!?

author img

By

Published : Aug 4, 2021, 1:41 PM IST

ಬೊಮ್ಮಾಯಿ ಸಂಪುಟದಲ್ಲಿ ಐವರು ಹೊಸಬರಿಗೆ ಮಣೆ ಹಾಕಲಾಗಿದ್ದು, 7 ಮಂದಿಗೆ ಕೊಕ್ ನೀಡಲಾಗಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಿಗೂ ನಿರಾಸೆಯಾಗಿದ್ದು, ಯಡಿಯೂರಪ್ಪ ಪ್ರಯತ್ನ ಇಲ್ಲಿ ಫಲ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

5-new-face-for-cabinet-and-7-ministers-name-out-of-list
ಬಿಎಸ್​​ವೈ ಮುಂದೆ ಮಂಡಿಯೂರಿತೆ ಹೈಕಮಾಂಡ್..?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿದ್ದ 7 ಸಚಿವರಿಗೆ ಕೊಕ್ ನೀಡಲಾಗಿದ್ದು, ಐವರು ಹೊಸ ಮುಖಗಳಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಳೆದು ತೂಗಿದರೂ ಯಡಿಯೂರಪ್ಪ ಸಂಪುಟದಲ್ಲಿ ಭಾರಿ ಬದಲಾವಣೆ ಮಾಡುವ ಹೈಕಮಾಂಡ್ ಪ್ರಯತ್ನ ಸಫಲವಾಗಿಲ್ಲ ಎನ್ನಲಾಗ್ತಿದೆ.

ಬಹುತೇಕ ಯಡಿಯೂರಪ್ಪ ಸಂಪುಟವನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು, ಕೆಲ ಅಚ್ಚರಿಯ ಸೇರ್ಪಡೆಯೊಂದಿಗೆ ಕೆಲ ಪ್ರಭಾವಿಗಳಿಗೆ ಮಂತ್ರಿಗಿರಿ ಕೈತಪ್ಪಿದೆ. ಜೊತೆಗೆ ಯಡಿಯೂರಪ್ಪ ನಿರ್ಧಾರವೇ ಅಂತಿಮ ಎಂದು ಸಾಬೀತಾಗಿದೆ. ಸಿಎಂ ಆಯ್ಕೆ ಹಾಗೂ ಸಂಪುಟ ರಚನೆಯಲ್ಲಿ ಯಡಿಯೂರಪ್ಪ ಅವರದ್ದೇ ನಿರ್ಣಾಯಕ ಪಾತ್ರವಾಗಿದೆ. ಆ ಮೂಲಕ 2011ರಲ್ಲಿ ಹೈಕಮಾಂಡ್ ಮುಂದೆ ಗೆದ್ದಂತೆ 2021ರಲ್ಲಿಯೂ ಬಿಎಸ್​​​​ವೈ ಗೆದ್ದಂತಾಗಿದೆ.

ಅಲ್ಲದೆ ತಮ್ಮ ರಾಜಕೀಯ ವಿರೋಧಿಗಳಾಗಿರುವ ಯತ್ನಾಳ್, ಬೆಲ್ಲದ್, ಯೋಗೇಶ್ವರ್​​​ಗೆ ಸಂಪುಟದಲ್ಲಿ ಸ್ಥಾನ ಸಿಗದಂತೆ ನೋಡಿಕೊಳ್ಳುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಕಣ್ಣಿಟ್ಟಿದ್ದ ಯತ್ನಾಳ್, ಬೆಲ್ಲದ್​​ಗೆ ಕನಿಷ್ಠ ಸಚಿವ ಸ್ಥಾನವೂ ಸಿಗಲಿಲ್ಲ, ಸಚಿವರಾಗಿದ್ದ ಯೋಗೇಶ್ವರ್​​ಗೆ ಆ ಸ್ಥಾನವೂ ಉಳಿಯದಂತಾಗಿದೆ.

ಹೊಸದಾಗಿ ಸೇರ್ಪಡೆ:

ಸುನೀಲ್ ಕುಮಾರ್
ಆರಗ ಜ್ಞಾನೇಂದ್ರ
ಮುನಿರತ್ನ
ಹಾಲಪ್ಪ ಆಚಾರ್
ಶಂಕರ್ ಪಾಟೀಲ್ ಮುನೇನಕೊಪ್ಪ

ಮಂತ್ರಿಗಿರಿ ಕೈತಪ್ಪಿದ ಪ್ರಮುಖರು
ಆರ್. ಶಂಕರ್
ಸಿ.ಪಿ ಯೋಗೇಶ್ವರ್
ಅರವಿಂದ್ ಲಿಂಬಾವಳಿ
ಶ್ರೀಮಂತ ಪಾಟೀಲ್
ಸುರೇಶ್ ಕುಮಾರ್
ಜಗದೀಶ್ ಶೆಟ್ಟರ್
ಲಕ್ಷಣ ಸವದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.