ETV Bharat / state

ಲಾಕ್​ಡೌನ್​ನಲ್ಲಿ​ ಟೆಂಡರ್ ಕರೆದು 5 ಕೋಟಿ ಮೊತ್ತದ ಕಾಮಗಾರಿಗೆ ಕಾರ್ಯಾದೇಶ ಆರೋಪ : ತನಿಖೆಗೆ ಹೈಕೋರ್ಟ್​ ಅನುಮತಿ

ಕೊರೋನಾ ಲಾಕ್​ಡೌನ್​ ಸಂದರ್ಭದಲ್ಲಿ ಟೆಂಡರ್​ ಕರೆಯದೆ ಕಾಮಗಾರಿ ಕಾರ್ಯಾದೇಶ ನೀಡಿ ಬಿಲ್​ ಪಾವತಿಸಿದ ಆರೋಪ ಹಿನ್ನೆಲೆ ಹೇಮಾವತಿ ಎಡದಂಡೆ ಕಾಲುವೆ ವಿಭಾಗದ ನಿವೃತ್ತ ಇಂಜಿನಿಯರ್​ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ.

5-crores-work-order-allegation-investigation-against-retired-engineer
ನಿವೃತ್ತ ಎಂಜಿನಿಯರ್ ವಿರುದ್ಧ ತನಿಖೆಗೆ ಅನುಮತಿ
author img

By

Published : Apr 25, 2023, 9:43 PM IST

ಬೆಂಗಳೂರು : ಕೊರೋನಾ ಕಾರಣದಿಂದ ಇಡೀ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿತ್ತು. ಈ ಸಂದರ್ಭದಲ್ಲಿ ಟೆಂಡರ್ ಆಹ್ವಾನಿಸದೆ ಐದು ಕೋಟಿ ಮೊತ್ತದ ಕಾಮಗಾರಿಗೆ ಕಾರ್ಯಾದೇಶ ನೀಡಿದ್ದಲ್ಲದೆ ಮೂರೇ ದಿನದಲ್ಲಿ ಕೆಲಸ ಮಾಡಿಸಿ ಬಿಲ್ ಪಾವತಿಸಲಾಗಿತ್ತು. ಈ ಪ್ರಕರಣ ಸಂಬಂಧ ಹೇಮಾವತಿ ಎಡದಂಡೆ ಕಾಲುವೆ ವಿಭಾಗದ ನಿವೃತ್ತ ಕಾರ್ಯಕಾರಿ ಇಂಜಿನಿಯರ್ ಕೆ. ಶ್ರೀನಿವಾಸ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಅಡಿ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರ ಅನುಮತಿ ನೀಡಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಪ್ರಕರಣ ಸಂಬಂಧ ಈ ಹಿಂದೆ ಕೆ. ಶ್ರೀನಿವಾಸ್ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಆಕ್ಷೇಪಿಸಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ನಾಗೇಗೌಡ ಎಂಬವರು ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ಧ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲರು, ನಿವೃತ್ತ ಕಾರ್ಯಕಾರಿ ಇಂಜಿನಿಯರ್​ ಶ್ರೀನಿವಾಸ್ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ 2023ರ ಏ.11ರಂದು ಸಕ್ಷಮ ಪ್ರಾಧಿಕಾರ (ಸರ್ಕಾರ) ಅನುಮತಿ ನೀಡಿದೆ ಎಂದು ಹೇಳಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ಪ್ರಕರಣದ ಹಿನ್ನೆಲೆ : ಹೇಮಾವತಿ ಎಡದಂಡೆ ಕಾಲುವೆ ತ್ಯಾಜ್ಯ ಘಟಕದ ತಡೆ ಗೋಡೆಯ ದುರಸ್ತಿ, ತೂಬು ಕಾಲುವೆಯ ರಿಪೇರಿ ಸೇರಿ ಮತ್ತಿತರ ಕೆಲಸಕ್ಕಾಗಿ 2020ರ ಮಾ.27ರಂದು ಗುತ್ತಿಗೆದಾರ ಪಿ.ಕೆ. ಶಿವರಾಮುಗೆ ಅಂದಿನ ಕಾರ್ಯಕಾರಿ ಎಂಜಿನಿಯರ್ ಕೆ.ಶ್ರೀನಿವಾಸ್ (ಸದ್ಯ ನಿವೃತ್ತ) ಕಾರ್ಯಾದೇಶ ನೀಡಿದ್ದರು.

ಗುತ್ತಿಗೆದಾರ ಮೂರು ದಿನದಲ್ಲಿ ಕೆಲಸ ಮುಗಿಸಿದ್ದು, 5.02 ಕೋಟಿ ಮೊತ್ತದ ಬಿಲ್ ಸಲ್ಲಿಸಿದ್ದರು. ಅದನ್ನು ಒಪ್ಪಿ ಮಾ.31ರಂದು ಶ್ರೀನಿವಾಸ್ ಅವರು ಬಿಲ್ ಪಾವತಿಸಿದ್ದರು. ಇದರಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸುವಂತೆ ಕೋರಿ ಅರ್ಜಿದಾರರು ಅಧೀನ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯವು ದೂರಿನ ತನಿಖೆಗೆ ಆದೇಶಿಸಿತ್ತು. ಆದರೆ, ಸಕ್ಷಮ ಪ್ರಾಧಿಕಾರವು ತನಿಖೆಗೆ ಅನುಮತಿ ನಿರಾಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಕದ ತಟ್ಟಿದ್ದರು.

ಇತ್ತೀಚಿಗೆ ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, 2020ರ ಮಾ.24ರಂದು ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯಡಿ ವಿನಾಯಿತಿ ನಿಬಂಧನೆಯ ಲಾಭ ಪಡೆದು ಟೆಂಡರ್ ಕರೆಯದೇ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆದಾರ ಮೂರೇ ದಿನದಲ್ಲಿ ಕೆಲಸ ಮುಗಿಸಿರುವುದು ಮತ್ತು ಬಿಲ್ ಪಾವತಿಸಿರುವುದು ಆಶ್ಚರ್ಯಕರ. ಆದರೂ ತನಿಖೆಗೆ ಅನುಮತಿ ನಿರಾಕರಿಸಿದ ಸಕ್ಷಮ ಪ್ರಾಧಿಕಾರ ಕ್ರಮ ಆಘಾತ ತಂದಿದೆ ಎಂದು ಅಸಮಾಧಾನ ಹೊರ ಹಾಕಿ ಪ್ರಕರಣದ ಬಗ್ಗೆ ದಾಖಲೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಇದನ್ನೂ ಓದಿ : ತಪ್ಪಿತಸ್ಥರಿಗೆ ವಿನಾಯ್ತಿ ನೀಡಿದರೆ ಅಪರಾಧಿಗಳಿಗೆ ಉತ್ತೇಜಿಸಿದಂತೆ : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.