ETV Bharat / state

ಕುವೈತ್​ಗೆ ಹೊರಟ ಪ್ರಯಾಣಿಕನ ಬಳಿ ಲೋಡ್ ಮಾಡಲಾಗಿದ್ದ ಪಿಸ್ತೂಲ್ ಪತ್ತೆ - ಬೆಂಗಳೂರಿನ ಚನ್ನಕೇಶವನಗರದ ಶ್ರೀನಿವಾಸ

ಬೆಂಗಳೂರಿನಿಂದ ಕುವೈತ್​ಗೆ ಹೊರಟ ಪ್ರಯಾಣಿಕನ ಬಳಿ 5 ಗುಂಡುಗಳನ್ನ ಲೋಡ್ ಮಾಡಲಾಗಿದ್ದ ಪಿಸ್ತೂಲ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

Kempegowda International Airport  loaded pistol found  loaded pistol found in Airport  ಲೋಡ್ ಮಾಡಲಾಗಿದ್ದ ಪಿಸ್ತೂಲ್ ಪತ್ತೆ  ಕುವೈತ್​ಗೆ ಹೊರಟ ಪ್ರಯಾಣಿಕ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಬೆಂಗಳೂರಿನ ಚನ್ನಕೇಶವನಗರದ ಶ್ರೀನಿವಾಸ  ಶ್ರೀನಿವಾಸರವರ ಲಗೇಜ್​ನಲ್ಲಿ ಪಿಸ್ತೂಲ್ ಪತ್ತೆ
ಕುವೈತ್​ಗೆ ಹೊರಟ ಪ್ರಯಾಣಿಕನ ಬಳಿ 5 ಗುಂಡುಗಳನ್ನ ಲೋಡ್ ಮಾಡಲಾಗಿದ್ದ ಪಿಸ್ತೂಲ್ ಪತ್ತೆ
author img

By

Published : Nov 22, 2022, 10:46 PM IST

ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುವೈತ್​ಗೆ ಹೋಗುತ್ತಿದ್ದ ಪ್ರಯಾಣಿಕನ ಬಳಿ 5 ಗುಂಡುಗಳನ್ನ ಲೋಡ್ ಮಾಡಲಾಗಿದ್ದ ಪಿಸ್ತೂಲ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಚನ್ನಕೇಶವನಗರದ ಶ್ರೀನಿವಾಸ ಎಸ್ಎನ್ ನವೆಂಬರ್ 18ರ ಮುಂಜಾನೆ 12:30 ಸಮಯದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. J9-432 ವಿಮಾನದಲ್ಲಿ ಕುವೈತ್ ಪ್ರಯಾಣಿಸಲು ಬಂದಿದ್ದ ಶ್ರೀನಿವಾಸ ಲೈನ್ ನಂಬರ್ 18 ರಲ್ಲಿ CISF ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಈ ಸಮಯದಲ್ಲಿ ಶ್ರೀನಿವಾಸ ಅವರ ಲಗೇಜ್​ನಲ್ಲಿ ಪಿಸ್ತೂಲ್ ಪತ್ತೆಯಾಗಿದೆ.

ಚೆಕೊಸ್ಲೊವೇಕಿಯಾದಲ್ಲಿ ತಯಾರದ 6.35 ಬೋರ್ ಪಿಸ್ತೂಲ್ ಆಗಿದ್ದು, 5 ಗುಂಡುಗಳನ್ನ ಪಿಸ್ತೂಲ್​ನಲ್ಲಿ ಲೋಡ್ ಮಾಡಲಾಗಿತ್ತು. ಶ್ರೀನಿವಾಸ ಅವರ ಬಳಿ ಪಿಸ್ತೂಲ್ ಹೊಂದುವ ಬಗ್ಗೆ ಸಮರ್ಪಕವಾದ ದಾಖಲೆಗಳು ಇಲ್ಲದ ಹಿನ್ನೆಲೆ ಆರ್ಮ್ಸ್ ಆಕ್ಟ್ 1959 ಅಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ: ಶ್ರದ್ಧಾ ವಾಲ್ಕರ್​ ಹತ್ಯೆ ಆರೋಪಿ ಅಫ್ತಾಬ್​ಗೆ ಸುಳ್ಳು ಪತ್ತೆ ಪರೀಕ್ಷೆ ಶುರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.