ETV Bharat / state

ರಾಜ್ಯದಲ್ಲಿಂದು 4,991 ಕೋವಿಡ್ ಪ್ರಕರಣ: ಬೆಂಗಳೂರಲ್ಲಿ ಹೆಚ್ಚು ಸೋಂಕಿತರು ಪತ್ತೆ - 4991 ಜನರಿಗೆ ಕೊರೊನಾ ದೃಢ

ಕರ್ನಾಟಕದಲ್ಲಿ ಇಂದು ಒಟ್ಟು ನಾಲ್ಕು ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿಯೇ 3,509 ಜನಕ್ಕೆ ಸೋಂಕು ತಗುಲಿರುವುದು ಕಳವಳ ಉಂಟು ಮಾಡಿದೆ.

4991 new kovid cases found in karnataka
6 ಮಂದಿ ಸಾವು
author img

By

Published : Apr 2, 2021, 7:33 PM IST

ಬೆಂಗಳೂರು: ರಾಜ್ಯದಲ್ಲಿಂದು 4,991 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.‌ 6 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

ಇವತ್ತು 1631 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 34,219 ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 9,59,400 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 10,06,229 ಕ್ಕೆ ಹೆಚ್ಚಾಗಿದೆ. ಮೃತಪಟ್ಟವರ ಸಂಖ್ಯೆ 12,591 ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 269 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿಯೇ 3,509 ಜನಕ್ಕೆ ಸೋಂಕು ತಗುಲಿದ್ದು, 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಮೃತಪಡುತ್ತಿರುವವರ ಸೋಂಕಿನಿಂದ ಪ್ರಮಾಣವೂ 0.12% ಇದ್ದು, ಸೋಂಕಿತರ ಪ್ರಮಾಣ 4.19 % ಗೆ ಏರಿಕೆಯಾಗಿದೆ. ಈವರೆಗೆ 39,85,612 ಮಂದಿ ಲಸಿಕೆ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.