ETV Bharat / state

ರಾಜ್ಯದಲ್ಲಿಂದು 487 ಮಂದಿಗೆ ಕೊರೊನಾ ದೃಢ: ಮೂವರು ಬಲಿ - ಹೊಸ ಕೊರೊನಾ ಪ್ರಕರಣಗಳು

ರಾಜ್ಯದಲ್ಲಿಂದು 487 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು ಮೂವರು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 9,42,518ಕ್ಕೆ ತಲುಪಿದೆ.

487 corona cases found in state !
ರಾಜ್ಯದಲ್ಲಿಂದು 487 ಮಂದಿಗೆ ಸೋಂಕು ದೃಢ; ಮೂವರು ಬಲಿ!
author img

By

Published : Feb 7, 2021, 9:35 PM IST

ಬೆಂಗಳೂರು: ರಾಜ್ಯದಲ್ಲಿಂದು 487 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು ಮೂವರು ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 9,42,518ಕ್ಕೆ ಮತ್ತು ಮೃತರ ಸಂಖ್ಯೆಯು 12,236ಕ್ಕೆ ಏರಿಕೆಯಾಗಿದೆ.‌

493 ಮಂದಿ ಗುಣಮುಖರಾಗಿದ್ದು, ಈವರೆಗೆ 9,24,304 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸದ್ಯ 5,959 ಸಕ್ರಿಯ ಪ್ರಕರಣಗಳಿದ್ದು, 141 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತ ಪ್ರಕರಣಗಳ ಶೇಕಡಾವಾರು 0.65ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.61ರಷ್ಟು ಇದೆ.

ವಿಮಾನ ನಿಲ್ದಾಣದಲ್ಲಿ 2,498 ಪ್ರಯಾಣಿಕರು ತಪಾಸಣೆಗೊಳಪಟ್ಟಿದ್ದಾರೆ. ಯುಕೆಯಿಂದ ಬಂದ ಪ್ರಯಾಣಿಕರಲ್ಲಿ ಈವರೆಗೆ 59 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.‌ 21 ಜನರಿಗೆ ರೂಪಾಂತರ ಕೊರೊನಾ ಹರಡಿದೆ.

ಈ ಸುದ್ದಿಯನ್ನೂ ಓದಿ: 24 ಗಂಟೆಯಲ್ಲಿ ದೇಶಾದ್ಯಂತ ಅತಿ ಕಡಿಮೆ ಕೋವಿಡ್​ ಸಾವು ವರದಿ.. ಈವರೆಗೆ 57 ಲಕ್ಷ ಮಂದಿಗೆ ಲಸಿಕೆ

ಬೆಂಗಳೂರಿನಲ್ಲಿಂದು 250 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,00,565ಕ್ಕೆ ಏರಿಕೆ ಆಗಿದೆ. 288 ಸೋಂಕಿತರು ಗುಣಮುಖರಾಗಿದ್ದು, 3,92,263 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3,897 ಸಕ್ರಿಯ ಪ್ರಕರಣಗಳು ಇದ್ದು, ಇಂದು ಇಬ್ಬರು ಸಾವನ್ನಪ್ಪಿದ್ದಾರೆ.‌ ಈವರೆಗೆ ಬೆಂಗಳೂರಿನಲ್ಲಿ 4,404 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.