ಬೆಂಗಳೂರು: ರಾಜ್ಯದಲ್ಲಿ ಇಂದು 453 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿ ಸೋಂಕಿಗೆ ಐವರು ಬಲಿಯಾಗಿದ್ದಾರೆ. ಒಟ್ಟು 77 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ಇಂದು ಪತ್ತೆಯಾದ ಕೇಸ್ನಲ್ಲಿ 69 ಅಂತರಾಜ್ಯ, 5 ಅಂತಾರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಸೋಂಕಿತರ ಸಂಖ್ಯೆ 9,150ಕ್ಕೆ ಏರಿಕೆಯಾಗಿದ್ದು, ಕೊರೊನಾ ಸೋಂಕಿಗೆ ರಾಜ್ಯದಲ್ಲಿ 137 ಬಲಿಯಾಗಿದ್ದಾರೆ. ಇವರಗೆ 5,618 ಮಂದಿ ಗುಣಮುಖರಾಗಿದ್ದು, 3,391 ಸಕ್ರಿಯ ಪ್ರಕರಣಗಳು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಮೂವರು, ಬೀದರ್ನಲ್ಲಿ ಇಬ್ಬರು ಬಲಿಯಾಗಿದ್ದಾರೆ.
ರಾಜ್ಯದಲ್ಲಿ 5 ಲಕ್ಷ ದಾಟಿದ ಕೊರೊನಾ ಪರೀಕ್ಷೆ
ರಾಜ್ಯದಲ್ಲಿಂದು ಇಲ್ಲಿಯವರೆಗೆ ನಡೆಸಿದ ಕೊರೊನಾ ಮಾದರಿ ಪರೀಕ್ಷೆ ಸಂಖ್ಯೆ 5,06,765ಕ್ಕೆ ಏರಿಕೆಯಾಗಿದೆ. ಇದರಲ್ಲಿ 4,85,345 ಮಂದಿಯ ವರದಿ ನೆಗೆಟಿವ್ ಬಂದಿದ್ದು, 9,150 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 20,301 ಪ್ರಾಥಮಿಕ ಸಂಪರ್ಕಿತರು ಮತ್ತು 14,467 ಮಂದಿ ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಮಹಿಸಲಾಗಿದೆ.
ನಾಳೆಯಿಂದ ಚಿಕ್ಕಪೇಟೆಯಲ್ಲಿ ಸ್ವಯಂಪ್ರೇರಿತ ಲಾಕ್ಡೌನ್
ಪಾದರಾಯನಪುರ, ಶಿವಾಜಿನಗರ ಹೀಗೆ ನಾನಾ ಏರಿಯಾ ನಂತರ ಇದೀಗ ಚಿಕ್ಕಪೇಟೆ ಹೆಚ್ಚು ಕೊರೊನಾ ಸೋಂಕು ಹರಡುವ ಸ್ಥಳವಾಗಿ ಪರಿವರ್ತನೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸ್ವಯಂಪ್ರೇರಿತ ಲಾಕ್ಡೌನ್ಗೆ ಚಿಕ್ಕಪೇಟೆ ವ್ಯಾಪಾರಿಗಳು ಮುಂದಾಗಿದ್ದಾರೆ. ಒಂದು ವಾರ ಚಿಕ್ಕಪೇಟೆಯಲ್ಲಿ ಲಾಕ್ಡೌನ್ ಇರಲಿದ್ದು, ಈಗಾಗಲೇ ಸುಮಾರು 8 ರಿಂದ 10 ಅಸೋಸಿಯೇಷನ್ಗಳಿಂದ ನಿರ್ಧಾರ ಮಾಡಲಾಗಿದೆ.
ಎಲೆಕ್ಟ್ರಿಕ್ ಮರ್ಚೆಂಟ್ ಅಸೋಸಿಯೇಷನ್, ಜ್ಯುವೆಲರಿ ಅಸೋಸಿಯೇಷನ್, ಸಿಲ್ವರ್ ಅಂಡ್ ಗೋಲ್ಡ್ ತಯಾರಕರು, ಸ್ವರ್ಣಕಾರ್ ಅಸೋಸಿಯೇಷನ್ , ಜೆಮ್ಸ್ & ಪರ್ಲ್ಸ್ ಅಸೋಸಿಯೇಷನ್, ಸಿಲ್ಕ್ ಕ್ಲಾತ್ ಅಸೋಸಿಯೇಷನ್, ಸ್ವಿಚ್ ಗೇರ್ ಅಸೋಸಿಯೇಷನ್, ಹಾರ್ಡ್ ವೇರ್ ಅಸೋಸಿಯೇಷನ್ ಒಪ್ಪಿಗೆ ಸೂಚಿಸಿವೆ. ನಾಳೆಯಿಂದ ಮುಂದಿನ ಭಾನುವಾರದ ವರೆಗೆ ಲಾಕ್ಡೌನ್ ಮಾಡಲು ತೀರ್ಮಾನಿಸಿದ್ದಾರೆ.