ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನಲ್ಲಿ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಪ್ರೆಂಟಿಸ್, ಅಕೌಂಟ್ ಎಕ್ಸಿಕ್ಯೂಟಿವ್ ಸೇರಿದಂತೆ ಒಟ್ಟು 490 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಒಂದು ವರ್ಷದ ಅಪ್ರೆಂಟಿಸ್ ಅವಧಿಯ ಈ ಹುದ್ದೆಯಲ್ಲಿ ಕರ್ನಾಟಕಕ್ಕೆ 30 ಹುದ್ದೆಗಳನ್ನು ಮೀಸಲು ಇರಿಸಲಾಗಿದೆ.
ಹುದ್ದೆ ವಿವರ: ಟ್ರೇಡ್ ಅಪ್ರೆಂಟಿಸ್ 150, ಟೆಕ್ನಿಕಲ್ ಅಪ್ರೆಂಟಿಸ್ 110, ಪದವೀಧರ ಅಪ್ರೆಂಟಿಸ್ 230 ಸೇರಿದಂತೆ 490 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಟ್ರೇಡ್ ಅಪ್ರೆಂಟಿಸ್ 10ನೇ ತರಗತಿ, ಐಟಿಐ, ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗೆ ಡಿಪ್ಲೊಮಾ, ಗ್ರಾಜುಯೇಟ್ ಅಪ್ರೆಂಟಿಸ್ ಬಿಬಿಎ, ಬಿಎ, ಬಿಕಾಂ, ಬಿಎಸ್ಸಿ ಪದವಿ ಆಗಿರಬೇಕು.
ವಯೋಮಿತಿ: ಈ ಹುದ್ದೆಗೆ ಕನಿಷ್ಠ ವಯಸ್ಸು 18 ವರ್ಷವಾಗಿದ್ದು, ಗರಿಷ್ಠ ವಯಸ್ಸು 24 ವರ್ಷ ವಯಸ್ಸು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಆಯ್ಕೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆ ಅವಧಿ ಕೇವಲ 12 ತಿಂಗಳು ಆಗಿದೆ.
12 ತಿಂಗಳ ಈ ಅಪ್ರೆಂಟಿಸ್ ಅವಧಿಯಲ್ಲಿ ಅಪ್ರೆಂಟಿಸ್ ಕಾಯ್ದೆ 1961/73, ಅಪ್ರೆಂಟಿಸ್ ನಿಯಮ 1992/2019ರ ನಿಯಮ ಅನುಸಾರ ಸ್ಟೈಫಂಡ್ ಅನ್ನು ನೀಡಲಾಗುವುದು.
ಈಗಾಗಲೇ ಬೇರೆ ಉದ್ಯಮದಲ್ಲಿ ಒಂದು ವರ್ಷಕ್ಕಿಂತ ಹೆಚ್ಚಿನ ಹುದ್ದೆಯ ಕಾರ್ಯ ನಿರ್ವಹಣೆ ಅನುಭವ ಅಥವಾ ಅಪ್ರೆಂಟಿಸ್ ಕಾರ್ಯ ನಿರ್ವಹಣೆ ಮಾಡಿದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಿಲ್ಲ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಟ್ರೇಡ್ ಅಪ್ರೆಂಟಿಸ್ ಕೇಂದ್ರ ಸರ್ಕಾರದ ಎನ್ಎಪಿಎಸ್ ಮೂಲಕ ಅಥವಾ www.apprenticeshipindia.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಟೆಕ್ನಿಕಲ್ ಅಪ್ರೆಂಟಿಸ್ಗಳು ಎನ್ಎಟಿಎಸ್ನ ಈ ಲಿಂಕ್ www.mhrdnats.gov.in/boat/commonRedirect/registermenunew!registermenunew.action ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಆಗಸ್ಟ್ 25ರಿಂದ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 10 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆ ಅಭ್ಯರ್ಥಿಗಳು iocl.com ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: SSC Recruitment: 307 ಟ್ರಾನ್ಸ್ಲೇಟರ್ ಹುದ್ದೆಗೆ ಅರ್ಜಿ ಆಹ್ವಾನ.. ಪದವಿ ಆಗಿದ್ರೆ ಅರ್ಜಿ ಸಲ್ಲಿಸಿ