ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಮೇ 17ರಿಂದ ಮೇ 23ರವರೆಗಿನ ಬಳಕೆಗಾಗಿ ರೆಮ್ಡಿಸಿವಿರ್ ಚುಚ್ಚುಮದ್ದಿನ 23 ಲಕ್ಷ ವಯಲ್ಸ್ ಹಂಚಿಕೆ ಮಾಡಿದೆ. ಅದರಲ್ಲಿ ರಾಜ್ಯಕ್ಕೆ 4.25 ಲಕ್ಷ ವಯಲ್ಸ್ ಒದಗಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಏಪ್ರಿಲ್ 21ರಿಂದ ಇದುವರೆಗೆ ಒಟ್ಟು 76 ಲಕ್ಷ ವಯಲ್ಸ್ ರೆಮ್ಡಿಸಿವಿರ್ ಔಷಧ ಹಂಚಿಕೆ ಮಾಡಿದ್ದೇವೆ. ರಾಜ್ಯಕ್ಕೆ 10 ಲಕ್ಷ ವಯಲ್ಸ್ ದೊರೆತಿದೆ. ಮಹಾರಾಷ್ಟ್ರದ (14.92 ಲಕ್ಷ) ನಂತರ ಅತಿ ಹೆಚ್ಚು ರೆಮ್ಡಿಸಿವಿರ್ ಪಡೆದ ರಾಜ್ಯ ಕರ್ನಾಟಕವಾಗಿದೆ. ಆದರೆ ಈ ಬಾರಿ ಕರ್ನಾಟಕ ಎಲ್ಲ ರಾಜ್ಯಗಳಿಗಿಂತ ಹೆಚ್ಚು ರೆಮ್ಡಿಸಿವಿರ್ ಪಡೆದಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆಯಯನ್ನು ಆಧರಿಸಿ ಔಷಧ ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ನಮಗೆ ಈ ಬಾರಿ ಹೆಚ್ಚಿನ ಸಂಖ್ಯೆಯ ರೆಮ್ಡಿಸಿವಿರ್ ಹಂಚಿಕೆಯಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಓದಿ: ಲಸಿಕೆ ಹಂಚಿಕೆಯಲ್ಲಿ ಏರುಪೇರಾಯ್ತು ಅನುಪಾತ..ರಾಜ್ಯಗಳ ಪಾಲಿಗೆ ಕತ್ತರಿ