ಬೆಂಗಳೂರು: ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಆಗಸ್ಟ್ 9 ರಿಂದ ಈವರೆಗೆ 4.09 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ.
ಆಗಸ್ಟ್ 14 ರಂದು 67 ಚೆಕ್ಗಳು ಸ್ವೀಕೃತಿಯಾಗಿವೆ. ಚೆಕ್ಗಳ ಮೊತ್ತ 37,99,028 ರೂಪಾಯಿಯಾಗಿದ್ದು, ಒಟ್ಟಾರೆಯಾಗಿ 1.39 ಕೋಟಿ ರೂ. ನಿನ್ನೆ ಸ್ವೀಕೃತಿಯಾಗಿದೆ. ನಿನ್ನೆ ಉದ್ಯಮಿಗಳು, ಅನರ್ಹ ಶಾಸಕ ಭೈರತಿ ಬಸವರಾಜು ಸೇರಿ ಹಲವರು ಪರಿಹಾರ ನಿಧಿಗೆ ದೇಣಿಗೆ ನೀಡಿದರು. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕದಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ಪುನರ್ವಸತಿಗಾಗಿ ಸಹಾಯ ಹಸ್ತ ನೀಡುವಂತೆ ಸಿಎಂ ಯಡಿಯೂರಪ್ಪ ರಾಜ್ಯದ ಜನರಲ್ಲಿ ಮನವಿ ಮಾಡಿದ್ದರು.
ಈ ಸಂಬಂಧ ಅನೇಕರು ಮುಖ್ಯಂಮತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಪ್ರತಿನಿತ್ಯ ದೇಣಿಗೆ ನೀಡುತ್ತಿದ್ದಾರೆ. ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಬಯಸುವವರು https://cmrf.karnataka.gov.in ವೆಬ್ ತಾಣದಲ್ಲಿ ಆರ್ಟಿಜಿಎಸ್ ಅಥವಾ ಎನ್ಇಎಫ್ಟಿ ಮೂಲಕ ನೇರವಾಗಿ ಹಣ ಪಾವತಿಸಬಹುದು.