ETV Bharat / state

ಕ್ರಿಕೆಟ್ ಆಟಗಾರನ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದವನ ಬಂಧನ; 38 ಮೊಬೈಲ್ ಫೋನ್​ ವಶಕ್ಕೆ - mobile thief arrested in bengaluru

ಕ್ರಿಕೆಟ್ ಮೈದಾನದಲ್ಲಿ ಆಟವಾಡುತ್ತಿದ್ದ ಆಟಗಾರರ ಮೊಬೈಲ್​ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

38 mobile  seized from mpbile thief
38 ಮೊಬೈಲ್ ಫೋನ್​ ವಶಕ್ಕೆ
author img

By

Published : Mar 15, 2021, 2:01 PM IST

ಬೆಂಗಳೂರು: ನಗರದ ಉತ್ತರ ವಿಭಾಗದ ಜಾಲಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಆಟಗಾರನ ಸೋಗಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

38 mobile  seized from mpbile thief
38 ಮೊಬೈಲ್ ಫೋನ್​ ವಶಕ್ಕೆ
ಕ್ರಿಕೆಟ್ ಮೈದಾನದಲ್ಲಿ ಆಟವಾಡುತ್ತಿದ್ದ ಆಟಗಾರರ ಮೊಬೈಲ್​ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಎಂ. ರವಿ ಎಂದು ಗುರುತಿಸಲಾಗಿದ್ದು, ಬಂಧಿತನಿಂದ 4.5 ಲಕ್ಷ ಮೌಲ್ಯದ 38 ಮೊಬೈಲ್ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ಮೈದಾನಕ್ಕೆ ಆಟಗಾರರ ರೀತಿ ಬಟ್ಟೆ ಧರಿಸಿ ಹೋಗಿ, ಕ್ರಿಕೆಟ್ ಆಡುವ ಹುಡುಗರು ಮೊಬೈಲ್ ಇಡುತ್ತಿದ್ದ ಬ್ಯಾಗ್ ಗಮನಿಸಿ ಕದಿಯುತ್ತಿದ್ದ.
ವಿ.ಪಿ. ರಸ್ತೆಯ ಮಹಾವೀರ ಎಂಟರ್ ಪ್ರೈಸಸ್ ಮೊಬೈಲ್ ಅಂಗಡಿಯ ಬಳಿ ಮೊಬೈಲ್ ಮಾರಲು ಬಂದಿದ್ದ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸವನಗುಡಿ, ಮಲ್ಲೇಶ್ವರಂ, ಜಯನಗರ, ಜಾಲಹಳ್ಳಿ, ಎಚ್​ಎಂಟಿ ಗ್ರೌಂಡ್, ಬಾಗಲಗುಂಟೆ ಸೇರಿದಂತೆ ಅನೇಕ ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.