ಬೆಂಗಳೂರು: ರಾಜ್ಯದಲ್ಲಿಂದು 378 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,46,454ಕ್ಕೆ ಏರಿಕೆ ಆಗಿದೆ.
ಸದ್ಯ ಸಕ್ರಿಯ ಪ್ರಕರಣಗಳು 5,698 ಇದ್ದು, 124 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡಾವಾರು 0.69ರಷ್ಟು ಇದ್ದರೆ, ಮೃತಪಟ್ಟವರ ಪ್ರಮಾಣ ಶೇ. 0.79ರಷ್ಟು ಇದೆ. ಯುಕೆಯಿಂದ 212 ಪ್ರಯಾಣಿಕರು ಬಂದಿದ್ದು, ಈವರೆಗೆ 63 ಜನಕ್ಕೆ ಪಾಸಿಟಿವ್ ಬಂದಿದೆ. ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ದೃಢಪಟ್ಟಿದೆ.
25 ಜನರಿಗೆ ರೂಪಾಂತರ ಕೊರೊನಾ ಹರಡಿದೆ. ಬೆಂಗಳೂರಿನಲ್ಲಿಂದು 253 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸಂಖ್ಯೆ 4,02,771ಕ್ಕೆ ಏರಿಕೆ ಆಗಿದೆ. 335 ಸೋಂಕಿತರು ಗುಣಮುಖರಾಗಿದ್ದು, 3,94,351 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3982 ಸಕ್ರಿಯ ಪ್ರಕರಣಗಳು ಇದ್ದು, 3 ಸೋಂಕಿತರು ಕೊರೊನಾದಿಂದ ಮೃತಪಟ್ಟಿದ್ದಾರೆ. ಈವರೆಗೆ 4,437 ಜನರು ಸೋಂಕಿಗೆ ಬಲಿಯಾಗಿದ್ದಾರೆ.