ETV Bharat / state

ರಾಜಧಾನಿ ಬೆಂಗಳೂರಿನಲ್ಲಿ ಶೇ.37 ರಷ್ಟು ಜನರಿಗೆ ಅಧಿಕ ರಕ್ತದೊತ್ತಡ; ನ್ಯೂರಾ ಅಧ್ಯಯನದಿಂದ ಬಹಿರಂಗ..

ಭಾರತದಲ್ಲಿ ಅಧಿಕ ರಕ್ತದೊತ್ತಡದ ಒಟ್ಟಾರೆ ಹರಡುವಿಕೆಯ ಪ್ರಮಾಣ ಶೇ.29.8 ರಷ್ಟಿದೆ. ಈ ಪೈಕಿ ನಗರ ಪ್ರದೇಶದಲ್ಲಿ ಶೇ.33 ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶೇ.25 ರಷ್ಟು ಭಾರತೀಯರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ ಎಂದು ಪಿಎಚ್ಎಫ್ಐ, ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಅಂಡ್ ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್ ತಿಳಿಸಿದೆ.

high blood pressure
ಅಧಿಕ ರಕ್ತದೊತ್ತಡ
author img

By

Published : May 17, 2022, 8:37 PM IST

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶೇ.37 ರಷ್ಟು ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವುದು ನ್ಯೂರಾ ಅಧ್ಯಯನದಿಂದ ಬಹಿರಂಗವಾಗಿದೆ.‌ ಬೆಂಗಳೂರಿನ ಇಮೇಜಿಂಗ್ ಮತ್ತು ಹೆಲ್ತ್ ಕೇರ್ ಸಂಸ್ಥೆಯಾಗಿರುವ ನ್ಯೂರಾದಲ್ಲಿ ಆರೋಗ್ಯ ತಪಾಸಣೆಗೆ ಒಳಗಾದ 3,000 ಜನರಲ್ಲಿ ಶೇ. 37 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿದೆ.

ಮಹಿಳೆಯರು ಮತ್ತು ಪುರುಷರಲ್ಲಿ ಈ ಅಧಿಕ ರಕ್ತದೊತ್ತಡದ ಪ್ರಮಾಣ ಸಮವಾಗಿರುವುದು ಕಂಡು ಬಂದಿದೆ. ಫ್ಯುಜಿಫಿಲ್ಮ್ ಹೆಲ್ತ್ ಕೇರ್ ಮತ್ತು ಎಐ ಆಧಾರಿತ ಇಮೇಜಿಂಗ್ ಮತ್ತು ಪರಿಣತ ಆರೋಗ್ಯ ರಕ್ಷಣೆ ಸಂಸ್ಥೆಯಾಗಿರುವ ಡಾ.ಕುಟ್ಟೀಸ್ ಸಹಯೋಗದ ನ್ಯೂರಾದಲ್ಲಿ ಈ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿತ್ತು.‌

ಈ ಬಗ್ಗೆ ಮಾತನಾಡಿದ ನ್ಯೂರಾದ ವೈದ್ಯಕೀಯ ನಿರ್ದೇಶಕ ಡಾ.ತೌಸಿಫ್ ಅಹ್ಮದ್, ಅಧಿಕ ರಕ್ತದೊತ್ತಡವು ರೋಗಲಕ್ಷಣಗಳನ್ನು ಹೆಚ್ಚಿಸುವ ಮೊದಲು ವರ್ಷಗಳವರೆಗೆ ಯಾವುದೇ ಮುನ್ಸೂಚನೆ ಇಲ್ಲದೇ ದೇಹದಲ್ಲಿ ಹಾನಿ ಉಂಟು ಮಾಡುತ್ತದೆ. ಅನಿಯಂತ್ರಿತ ಅಧಿಕ ರಕ್ತದೊತ್ತಡವು ಅಂಗವೈಕಲ್ಯ, ಕಳಪೆ ಗುಣಮಟ್ಟದ ಜೀವನ, ಮಾರಣಾಂತಿಕ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದರ ಜೊತೆಗೆ ಮೆದುಳು, ಕಣ್ಣುಗಳು ಮತ್ತು ಮೂತ್ರಪಿಂಡಗಳಂತಹ ಇತರ ಪ್ರಮುಖ ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಅಂತ ತಿಳಿಸಿದ್ದಾರೆ.

ವರ್ಷಕ್ಕೊಮ್ಮೆ ತಪಾಸಣೆ: ಹೀಗಾಗಿ, ಕಾಲಕಾಲಕ್ಕೆ ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮತ್ತು ನಿಗಾ ವಹಿಸುವುದು ಮುಖ್ಯವಾಗಿದೆ. ಒಂದು ವೇಳೆ, ಅಧಿಕ ರಕ್ತದೊತ್ತಡ ಸಾಮಾನ್ಯಕ್ಕಿಂತ ಅಧಿಕವಾಗಿದ್ದರೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಅಧಿಕ ರಕ್ತದೊತ್ತಡವಿದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಅಧಿಕ ರಕ್ತದೊತ್ತಡದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಯುಎಸ್​ಪಿಎಸ್​ಟಿಎಫ್​ ಶಿಫಾರಸು ಮಾಡಿದೆ. 90/60 ಎಂಎಂಎಚ್​ಜಿಯಿಂದ 120/80 ಎಂಎಂಎಚ್​ಜಿವರೆಗೆ ರಕ್ತದೊತ್ತಡವಿದ್ದರೆ ಅದು ಆರೋಗ್ಯದ ಲಕ್ಷಣವಾಗಿದೆ. ಇದನ್ನು ಪ್ರತಿ ಐದು ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ, 120/80 ಎಂಎಂಎಚ್​ಜಿ ಮತ್ತು 139/89ಎಂಎಂಎಚ್​ಜಿ ಮಧ್ಯೆ ಇದ್ದರೆ ಪ್ರತಿ ವರ್ಷ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಅನಾರೋಗ್ಯಕರವಾದ ಡಯಟ್, ದೈಹಿಕ ಚಟುವಟಿಕೆ ಕೊರತೆ, ಬೊಜ್ಜು, ಅಧಿಕ ಮದ್ಯಪಾನ ಮಾಡುವುದು ಮತ್ತು ಹೆಚ್ಚು ತಂಬಾಕು ಸೇವನೆಯಂತಹ ಹಾನಿಕಾರಕ ಚಟುವಟಿಕೆಗಳಿಂದ ದೂರವಿರಬೇಕು ಎಂದು ಹೇಳುತ್ತಾರೆ. ಪಿಎಚ್ಎಫ್ಐ, ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ಅಂಡ್ ಸೆಂಟರ್ ಫಾರ್ ಕ್ರಾನಿಕ್ ಡಿಸೀಸ್, ಇಂಡಿಯಾದ ಸಂಶೋಧಕರು ನಡೆಸಿದ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಅಧಿಕ ರಕ್ತದೊತ್ತಡದ ಒಟ್ಟಾರೆ ಹರಡುವಿಕೆಯ ಪ್ರಮಾಣ ಶೇ.29.8 ರಷ್ಟಿದೆ. ಈ ಪೈಕಿ ನಗರ ಪ್ರದೇಶದಲ್ಲಿ ಶೇ.33 ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶೇ.25 ರಷ್ಟು ಭಾರತೀಯರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ.

ಇವರಲ್ಲಿ ಶೇ.25 ರಷ್ಟು ಗ್ರಾಮೀಣ ಮತ್ತು ಶೇ.42 ರಷ್ಟು ಮಂದಿ ನಗರ ಪ್ರದೇಶದವರಿಗೆ ತಮ್ಮ ಅಧಿಕ ರಕ್ತದೊತ್ತಡದ ಸ್ಥಿತಿಗತಿ ಬಗ್ಗೆ ಮಾಹಿತಿ ಇದೆ. ಆದರೆ, ಶೇ.25 ರಷ್ಟು ಗ್ರಾಮೀಣ ಮತ್ತು ಶೇ.38 ರಷ್ಟು ನಗರ ಪ್ರದೇಶದ ಜನರು ಮಾತ್ರ ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶ ಎಂದರೆ ಕೇವಲ ಹತ್ತನೇ ಒಂದು ಭಾಗದಷ್ಟು ಗ್ರಾಮೀಣ ಮತ್ತು ಐದನೇ ಒಂದರಷ್ಟು ನಗರ ಪ್ರದೇಶದ ಭಾರತೀಯರು ತಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.

ಮೌನ ರೋಗ: ಈ ಅಧಿಕ ರಕ್ತದೊತ್ತಡವನ್ನು ಮೌನ ರೋಗ ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ರೋಗವನ್ನು ಹೊಂದಿದ್ದೇವೆ ಎಂಬುದೇ ಗೊತ್ತಿರುವುದಿಲ್ಲ. ಈ ಬಗ್ಗೆ ಗುಣಲಕ್ಷಣಗಳಾಗಲೀ ಅಥವಾ ಸೂಚನೆಗಳೇ ಇರುವುದಿಲ್ಲ. ಇದು ದೇಹವನ್ನು ಹಾನಿಗೊಳಿಸುತ್ತಾ, ಕೆಲವೊಮ್ಮೆ ಹೃದಯ ಸಂಬಂಧಿ ರೋಗಗಳಿಗೂ ಕಾರಣವಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತದಲ್ಲಿ ಸಂವಹನವಿಲ್ಲದ ರೋಗಗಳಿಂದ ಶೇ.63 ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ಕಾರ್ಡಿವಾಸ್ಕುಲರ್ ಡಿಸೀಸ್ ನಿಂದ ಶೇ.27 ರಷ್ಟು ಸಾವು ಸಂಭವಿಸುತ್ತಿವೆ. 40-69 ರ ವಯೋಮಾನದ ಶೇ.45 ರಷ್ಟು ಜನರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಡಾ.ತೌಸಿಫ್ ತಿಳಿಸಿದರು.

ಇದನ್ನೂ ಓದಿ: 118 ಲೀಟರ್ ಎದೆಹಾಲು ಮಾರಾಟ ಮಾಡಿದ ಅಮೆರಿಕದ​ ಮಹಿಳೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.