ETV Bharat / state

ಮಹಿಳಾ ಕಾಂಗ್ರೆಸ್​ನ 36ನೇ ಸಂಸ್ಥಾಪನಾ ದಿನಾಚರಣೆ: ಗಣ್ಯರ ಗೈರು - ಬೆಂಗಳೂರು

ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲಿ ಇಂದು ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ 36 ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನಾನಾ ಕಾರಣ ನೀಡಿ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.

ಮಹಿಳಾ ಕಾಂಗ್ರೆಸ್
author img

By

Published : Sep 15, 2019, 1:28 PM IST

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲಿ ಇಂದು ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ 36ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು.

ಕೆಪಿಸಿಸಿ ಕಚೇರಿ ಆವರಣದಲ್ಲಿ ಇಂದು ನಡೆದ ಸಮಾರಂಭವನ್ನು ಮಾಜಿ ಸಚಿವೆ ರಾಣಿ ಸತೀಶ್ ಉದ್ಘಾಟಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಪಾಲ್ಗೊಳ್ಳಬೇಕಿತ್ತು. ಆದರೆ ನಾನಾ ಕಾರಣ ನೀಡಿ ಸಮಾರಂಭದಲ್ಲಿ ಯಾರೊಬ್ಬರೂ ಪಾಲ್ಗೊಳ್ಳಲಿಲ್ಲ. ಗಣ್ಯರ ಅನುಪಸ್ಥಿತಿಯಲ್ಲಿಯೇ ಸಮಾರಂಭ ನೆರವೇರಿತು.

ಮಹಿಳಾ ಕಾಂಗ್ರೆಸ್​ನ ಸಂಸ್ಥಾಪನಾ ದಿನ ಆಚರಣೆ

ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್, ಮಹಿಳಾ ಕಾಂಗ್ರೆಸ್​ನ ಗುಣಗಾನ ಮಾಡಿದರು. ಪಕ್ಷದ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇಂದು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ, ಮನ್ನಣೆ ಬೇರೆಲ್ಲೂ ಸಿಗುತ್ತಿಲ್ಲ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಅಭಿಪ್ರಾಯಪಟ್ಟರು.

ಇನ್ನು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ರಾಜ್ಯ ಅತ್ಯಂತ ಕಷ್ಟದಲ್ಲಿದೆ. ಕೇಂದ್ರ ಸರ್ಕಾರ ಕೂಡ ತಾರತಮ್ಯ ಧೋರಣೆಯನ್ನು ತೋರಿಸುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ವಿಚಾರಕ್ಕೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದರು.

ಅನೇಕ ಪರೀಕ್ಷೆಗಳು ಕೂಡ ಕನ್ನಡ ಮಾಧ್ಯಮದಲ್ಲಿ ಸಿಗದಿರುವುದು ಬೇಸರ ತರುತ್ತಿದ್ದು, ನಮ್ಮವರಿಗೆ ಅವಕಾಶ ತಪ್ಪುತ್ತಿದೆ. ಹಿಂದಿ ದಿವಸ್ ಆಚರಣೆ ಅಥವಾ ಬಳಕೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಆಯಾ ರಾಜ್ಯದ ಮಾತೃ ಭಾಷೆಗೆ ಪ್ರಾಧಾನ್ಯ ನೀಡಬೇಕು ಎಂದು ಹೇಳಿದರು.

Intro:newsBody:ಗಣ್ಯರ ಅನುಪಸ್ಥಿತಿಯಲ್ಲಿ ಮಹಿಳಾ ಕಾಂಗ್ರೆಸ್ನ 36 ನೇ ಸಂಸ್ಥಾಪನಾ ದಿನ ಆಚರಣೆ

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲಿ ಇಂದು ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ 36 ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು.
ಕೆಪಿಸಿಸಿ ಕಚೇರಿ ಆವರಣದಲ್ಲಿ ಇಂದು ನಡೆದ ಸಮಾರಂಭವನ್ನು ಮಾಜಿ ಸಚಿವೆ ರಾಣಿ ಸತೀಶ್ ಉದ್ಘಾಟಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಬಿ. ಪುಷ್ಪಾ ಅಮರನಾಥ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ್ ಪಾಲ್ಗೊಳ್ಳಬೇಕಿತ್ತು. ಆದರೆ ನಾನಾ ಕಾರಣ ನೀಡಿ ಸಮಾರಂಭದಲ್ಲಿ ಯಾರೊಬ್ಬರೂ ಪಾಲ್ಗೊಳ್ಳಲಿಲ್ಲ. ಗಣ್ಯರ ಅನುಪಸ್ಥಿತಿಯಲ್ಲಿ ಯೇ ಸಮಾರಂಭ ನೆರವೇರಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್, ಮಹಿಳಾ ಕಾಂಗ್ರೆಸ್ ನ ಗುಣಗಾನ ಮಾಡಿದರು. ಪಕ್ಷದ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ನ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಇಂದು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ ಮನ್ನಣೆ ಬೇರೆಲ್ಲೂ ಸಿಗುತ್ತಿಲ್ಲ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಎಂಬ ಅಭಿಪ್ರಾಯಪಟ್ಟರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು ಘಟಕದ ಜವಾಬ್ದಾರಿ ಹಾಗೂ ನಿರ್ವಹಿಸಬೇಕಾದ ಕಾರ್ಯ ನಿರ್ವಹಣೆಯ ಕುರಿತು ತಿಳಿಸಿಕೊಟ್ಟರು.
ರಾಜೀವ್ ಗಾಂಧಿ ಮೀಸಲಾತಿ ಕೊಟ್ಟರು
ಸಮಾರಂಭದ ನಂತರ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್ ಪಕ್ಷ ಮಹಿಳಾ ವಿಭಾಗವನ್ನು ಆರಂಭಿಸಿ 36 ವರ್ಷ ಕಳೆದಿದೆ. ಮಹಿಳೆಯರಿಗೆ ಅಸ್ಮಿತೆ, ಅವಕಾಶ ಹಾಗೂ ಆದ್ಯತೆಯನ್ನು ನೀಡಿ ಮಹಿಳೆಯರಿಗೆ ಇಂಥದ್ದೊಂದು ಅವಕಾಶವನ್ನು ಕಾಂಗ್ರೆಸ್ನಲ್ಲಿ ನೀಡಿದವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು. ಮಹಿಳೆಯರು ರಾಜಕೀಯವಾಗಿ ಹೆಚ್ಚು ಮುಂದೆ ಬರಲು ಇವರ ಈ ಕಾರ್ಯ ಸಹಕಾರ ನೀಡಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಶೇಷವಾಗಿ ಘಟಕಕ್ಕೆ ಶಕ್ತಿ ತುಂಬುವ ಕಾರ್ಯ ಮಾಡಿದ್ದರು. ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ವಿಶೇಷ ಒತ್ತುಕೊಟ್ಟು 16, 17 ತಿದ್ದುಪಡಿಗಳನ್ನು ಮಾಡುವ ಮೂಲಕ ವಿಶೇಷವಾಗಿ ಪಂಚಾಯತ್ ರಾಜ್ ನಲ್ಲಿ ಶೇ.33ರಷ್ಟು ಮೀಸಲಾತಿ ಜಾರಿಗೆ ತರುವ ಮಹತ್ತರ ನಿರ್ಣಯ ಕೈಗೊಂಡಿದ್ದರೂ. ಇದರ ಪರಿಣಾಮ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಂಚಾಯಿತಿಗಳಲ್ಲಿ ಅಧ್ಯಕ್ಷರು ಉಪಾಧ್ಯಕ್ಷರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಹೆಮ್ಮೆ ತರುವ ವಿಚಾರ. ಒಂದು ಅವರ ಈ ಪ್ರೋತ್ಸಾಹವೇ ಮುಂದುವರಿದು ಈಗ ಶೇ.50ರಷ್ಟು ಮೀಸಲಾತಿ ವ್ಯಾಪ್ತಿಯನ್ನು ತಲುಪಿದೆ. ಮಹಿಳೆಯರು ಇನ್ನಷ್ಟು ಸಕ್ರಿಯವಾಗಿ ರಾಜಕೀಯಕ್ಕೆ ಬರಬೇಕು ಎಂಬುದು ಅವರ ಆಶಯವಾಗಿತ್ತು. ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಿಳೆಯರು ಈಡೇರಿಸಬೇಕು ಎಂದರು.
ವಿವಿಧತೆಯಲ್ಲಿ ಏಕತೆ ಸಾಧಿಸಿದ ದೇಶ ನಮ್ಮದು
ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದಾಗ ದೇಶ ನಮ್ಮದು. ಇಂಥದ್ದೊಂದು ಮಹತ್ತರ ಉದ್ದೇಶ ಹೊಂದಿದ ಈ ದೇಶ ಅನೇಕ ಸಾಧು ಸಂತರು ಪ್ರವಾದಿಗಳು ಈ ದೇಶವನ್ನು ಕಟ್ಟಿದ್ದು, ರಾಜಕೀಯೇತರ ಕೂಡ ದೇಶಕಟ್ಟುವಲ್ಲಿ ಅತ್ಯುತ್ತಮ ಸಹಕಾರ ನೀಡಿದ್ದಾರೆ. ಇಲ್ಲಿ ಜಾತಿ, ಮತ, ಪಂಥ, ಭಾಷೆಗಳು ಇದ್ದು, ಒಂದು ಭಾಷೆಯ ಹೇರಿಕೆ ಅಷ್ಟೊಂದು ಪ್ರಮುಖವಾದದ್ದು ಅಂತ ನನಗೆ ಅನಿಸುತ್ತಿದೆ. ವಿವಿಧ ಜಾತಿ ಮತಗಳ ಜನ ಈ ದೇಶದಲ್ಲಿದ್ದಾರೆ ಇದರಿಂದಾಗಿ ಒಂದು ದೇಶ ಒಂದು ಭಾಷೆ ಸಮಂಜಸ ಎಂದು ನನಗೆ ಅನಿಸುತ್ತಿಲ್ಲ. ಆದ್ದರಿಂದ ಏಕಮುಖವಾಗಿ ಒಂದೇ ಭಾಷೆಯನ್ನು ಇಡೀ ದೇಶಕ್ಕೆ ಹೇರುವುದು ಒಳ್ಳೆಯದಲ್ಲ. ಅಲ್ಲದೆ ಇದು ಅಪ್ರಸ್ತುತ ಮತ್ತು ಸರಿಯಾದ ಕ್ರಮ ಅಲ್ಲ ಎಂದು ಅಭಿಪ್ರಾಯಪಟ್ಟರು.
ಹೋರಾಟಕ್ಕೆ ಮುಂದಾಗಬೇಕಿದೆ
ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ರಾಜ್ಯ ಅತ್ಯಂತ ಕಷ್ಟದಲ್ಲಿದೆ ಈ ಸಂದರ್ಭ ಕೇಂದ್ರ ಸರ್ಕಾರ ಕೂಡ ತಾರತಮ್ಯ ಧೋರಣೆಯನ್ನು ತೋರಿಸುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ವಿಚಾರಕ್ಕೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ. ಅನೇಕ ಪರೀಕ್ಷೆಗಳು ಕೂಡ ಕನ್ನಡ ಮಾಧ್ಯಮದಲ್ಲಿ ಸಿಗದಿರುವುದು ಬೇಸರ ತರುತ್ತಿದ್ದು ನಮ್ಮವರಿಗೆ ಅವಕಾಶ ತಪ್ಪುತ್ತಿದೆ. ಬ್ಯಾಂಕಿಂಗ್ ಪರೀಕ್ಷೆಗಳು ಗ್ರಾಮೀಣ ಭಾಗದಲ್ಲಿ ಮಾತ್ರ ಮಾತೃ ಭಾಷೆಗೆ ಅವಕಾಶ ನೀಡಲಾಗಿದೆ ಇದು ಎಲ್ಲೆಡೆ ನೀಡುವ ಕಾರ್ಯ ಆಗಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ 22 ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಘೋಷಣೆ ಮಾಡಿದ್ದೇವೆ. ಒಕ್ಕೂಟ ವ್ಯವಸ್ಥೆಯ ಅಡಿ ನಾವು ಇದ್ದು ಹಿಂದಿ ಒಂದೇ ಭಾಷೆ ಹೇರಿಕೆ ಸರಿಯಲ್ಲ. ಹಿಂದಿ ಭಾಷೆ ಹೇರಿಕೆಯನ್ನು ಪಕ್ಷ ಖಂಡಿಸಿದೆ. ಮಹಿಳಾ ಘಟಕ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಹಿಂದಿ ದಿವಸ್ ಆಚರಣೆ ಅಥವಾ ಬಳಕೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಆಯಾ ರಾಜ್ಯದ ಮಾತೃ ಭಾಷೆಗೆ ಪ್ರಾಧಾನ್ಯ ನೀಡಬೇಕು ಎಂದು ಅಭಿಪ್ರಾಯ ಪಡುತ್ತೇನೆ. ಬಲವಂತವಾಗಿ ಹಿಂದಿ ಹೇರಿಕೆ ಮಾಡಿದರೆ ಅದರ ವಿರುದ್ಧ ರಾಜ್ಯದ ಜನ ಅನಿವಾರ್ಯವಾಗಿ ಪ್ರತಿಭಟನೆ ಇಳಿಯಬೇಕಾಗುತ್ತದೆ. ಕನ್ನಡ ಭಾಷೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ. ಈ ಸಂದರ್ಭ ಎಚ್ಚರಿಕೆಯ ಗಂಟೆಯನ್ನು ನಾವು ಬಾರಿಸಬೇಕಾಗಿದೆ. ರಾಜ್ಯದ ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಕನ್ನಡದ ಹೋರಾಟ ಆಗಲೇ ಅದಕ್ಕೆ ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದರು.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.