ETV Bharat / state

ಬೆಂಗಳೂರು ಗಲಭೆ ಪ್ರಕರಣ: ಮತ್ತೆ 35 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು - DJ halli

ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಸ್ಟ್ ಹಾಗೂ ರಾಜಕೀಯ ಒಳಬೇಗುದಿಯಿಂದ ಶುರುವಾದ ಗಲಾಟೆ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಠಾಣೆಯಲ್ಲಿ ದೊಡ್ಡ ಗಲಭೆಯನ್ನ ಸೃಷ್ಟಿ ಮಾಡಿತ್ತು. ಗಲಭೆ ಸೃಷ್ಟಿಸಿದ್ದ 35 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತೆ 35 ಜನ ಅಂದರ್
ಮತ್ತೆ 35 ಜನ ಅಂದರ್
author img

By

Published : Aug 16, 2020, 8:17 AM IST

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ಪೋಸ್ಟ್​​ವೊಂದರಿಂದ ಹೊತ್ತಿಕೊಂಡ ಕಿಡಿ ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ದೊಡ್ಡ ಗಲಭೆಯನ್ನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಬೆಂಕಿ ಹಚ್ಚಿ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದ್ದ ಆರೋಪಿಗಳನ್ನು ನಿರಂತರವಾಗಿ ಹೆಡೆಮುರಿ‌ಕಟ್ಟಲು ಸಿಸಿಬಿ ಹಾಗೂ ಪೂರ್ವ ವಿಭಾಗ ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ.

ನಿನ್ನೆ ರಾತ್ರಿ ಕೂಡ ಸುಮಾರು 35 ಆರೋಪಿಗಳನ್ನ ಗಲ್ಲಿಗಲ್ಲಿಗೆ ತೆರಳಿ ಬಂಧಿಸಿದ್ದಾರೆ. ಇಲ್ಲಿಯವರೆಗೆ 340 ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಟ್ಸಪ್ ಗ್ರೂಪ್ ಹಾಗೂ ಫೇಸ್​ಬುಕ್​ನಲ್ಲಿ ಬಂಧಿತ ಎಸ್​ಡಿಪಿಐ ಮುಖಂಡ ಮುಜಾಮಿಲ್ ಹಾಗೂ ಈತನ ಬೆಂಬಲಿಗರು ಕರೆದಾಗ ಬಹುತೇಕ ಮಂದಿ ಠಾಣೆ ಬಳಿ ‌ಸೇರಿ‌ ದೊಡ್ಡ ಗಲಭೆ ಸೃಷ್ಟಿ ಮಾಡಿ ಬೆಂಕಿ ಹಾಕಿದ್ರು ಎಂಬ ಆರೋಪವಿದೆ.

ಸದ್ಯ ಪೊಲೀಸರು ಗಲ್ಲಿಗಲ್ಲಿಯ ಸಿಸಿಟಿವಿ ಹಾಗೂ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾದ ವಿಡಿಯೋ ಹಾಗೆ ಈಗಾಗಲೇ ಕ್ರಿಯೇಟ್ ಆಗಿರುವ ವಾಟ್ಸಪ್ ಗ್ರೂಪ್​ನಲ್ಲಿದ್ದ ಸದಸ್ಯರು ಅಡಗಿ ಕುಳಿತಿದ್ದ ಮನೆಗಳ ‌ಮೇಲೆ ರಾತ್ರೋರಾತ್ರಿ ಎಲ್ಲಾ‌ ಕಡೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.