ETV Bharat / state

ಬೆಡ್ ಬ್ಲಾಕಿಂಗ್ ದಂಧೆ ಬಯಲು ಬೆನ್ನಲ್ಲೇ ಬೆಂಗಳೂರಿನ ಆಸ್ಪತ್ರೆಗಳಲ್ಲಿ 3,210 ಬೆಡ್‌ಗಳು ಲಭ್ಯ!

ಸಂಸದ ತೇಜಸ್ವಿಸೂರ್ಯ ಬೆಂಗಳೂರಿನ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ಬೆಡ್​ ಬ್ಲಾಕಿಂಗ್ ದಂಧೆಯನ್ನು ನಿನ್ನೆ ಬಯಲು ಮಾಡಿದ್ದರು. ಇದರ ಪರಿಣಾಮ ಇಂದು ನಗರದಲ್ಲಿ 3 ಸಾವಿರಕ್ಕಿಂತ ಅಧಿಕ ಬೆಡ್​ ಲಭ್ಯವಿರುವುದಾಗಿ ಅಧಿಕೃತ ವೆಬ್​ಸೈಟ್​ ತೋರಿಸುತ್ತಿದೆ.

Bed is available in hospital after bed blocking mafia came into light
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್​ ಲಭ್ಯ
author img

By

Published : May 5, 2021, 11:38 AM IST

Updated : May 5, 2021, 11:52 AM IST

ಬೆಂಗಳೂರು: ನಗರದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಬೆನ್ನಲ್ಲೇ, ಇಂದು 3 ಸಾವಿರಕ್ಕಿಂತ ಅಧಿಕ ಬೆಡ್​ಗಳು ಖಾಲಿ ಇರುವುದಾಗಿ ವೆಬ್​ಸೈಟ್​ ತೋರಿಸುತ್ತಿದೆ.

ನಿನ್ನೆಯವರೆಗೆ ನಗರದ ಆಸ್ಪತ್ರೆಗಳಲ್ಲಿ ಬೆಡ್​ ಲಭ್ಯತೆಯ ಬಗ್ಗೆ ವೆಬ್​ಸೈಟ್​ಗಳಲ್ಲಿ ಶೂನ್ಯ ಸಂಖ್ಯೆ ತೋರಿಸುತ್ತಿತ್ತು. ಆದರೆ, ಒಂದೇ ಸಮನೆ ಬೆಡ್​ಗಳ ಸಂಖ್ಯೆ ಏರಿಕೆಯಾಗಿದ್ದು, ಬರೋಬ್ಬರಿ 3,210 ಬೆಡ್​ಗಳು ಖಾಲಿ ಇದೆ.

ನಗರದ ದಕ್ಷಿಣ ವಲಯದ ಕೋವಿಡ್​ ವಾರ್ ರೂಂನಿಂದ ವಿವಿಧ ವಲಯಗಳ ಕೋವಿಡ್​ ಸೋಂಕಿತರಿಗೆ ಅರಿವಿಲ್ಲದಂತೆಯೇ ಬೆಡ್ ಬುಕಿಂಗ್ ಮಾಡಿ ದಂಧೆ ನಡೆಸುತ್ತಿದ್ದ ಪ್ರಕರಣ ನಿನ್ನೆಯಷ್ಟೇ ಬಯಲಾಗಿತ್ತು. ಬಳಿಕ ವಾರ್ ರೂಂ 17 ಮಂದಿ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಹಚ್ಚಿರುವುದು ನೋವು ತಂದಿದೆ: ಸರ್ಫರಾಜ್ ಖಾನ್

ಬೆಂಗಳೂರಿನಲ್ಲಿ 3,210 ಬೆಡ್​ಗಳು ಖಾಲಿ:

ನಿನ್ನೆಯವರೆಗೂ 12,736 ಸರ್ಕಾರಿ ಕೋಟಾದ ಬೆಡ್​ಗಳ ಪೈಕಿ ಐಸಿಯು, ವೆಂಟಿಲೇಟರ್​​ ಇರುವ ಕೇವಲ ಬೆರಳೆಣಿಕೆಯಷ್ಟು ಮಾತ್ರ ಬೆಡ್​ಗಳು ಖಾಲಿ ತೋರಿಸುತ್ತಿದ್ದ ಲೈವ್ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್​ಮೆಂಟ್ ವೆಬ್​ಸೈಟ್, ಇಂದು ಬರೋಬ್ಬರಿ 3,210 ಬೆಡ್​ಗಳು ಖಾಲಿ ಎಂದು ತೋರಿಸುತ್ತಿದೆ.

29 ಐಸಿಯು, 13 ವೆಂಟಿಲೇಟರ್​​ ಖಾಲಿ:

ಈ ಪೈಕಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 12, ಸರ್ಕಾರಿ ಆಸ್ಪತ್ರೆಯಲ್ಲಿ 67, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ 1,197, ಖಾಸಗಿ ಆಸ್ಪತ್ರೆಯಲ್ಲಿ 402, ಸೇರಿ ಒಟ್ಟು 1,693 ಬೆಡ್​ಗಳು ಖಾಲಿ ಇವೆ. ಅಲ್ಲದೆ ಶೇ.10 ರಷ್ಟು ಆಕ್ಸಿಜನ್ ಲಭ್ಯವಿರುವ ಕೋವಿಡ್ ಕೇರ್ ಸೆಂಟರ್​ಗಳಲ್ಲೂ 1,517 ಬೆಡ್​ಗಳು ಖಾಲಿ ಇವೆ. 127 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ 29 ಐಸಿಯು, 13 ವೆಂಟಿಲೇಟರ್​ ಬೆಡ್​ಗಳು ಖಾಲಿ ಇವೆ.

ಇದನ್ನೂ ಓದಿ: ಸರ್ಕಾರಿ ಕೋಟಾದ ಬೆಡ್​ಗಳ ದುರುಪಯೋಗ.. ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ

Last Updated : May 5, 2021, 11:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.