ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಪ್ರರಕಣಗಳು ನಿಯಂತ್ರಣಕ್ಕೆ ಸಿಗದಂತೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 3,017 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಈ ಹಿಂದಿನ 24 ಗಂಟೆಗಳಲ್ಲಿಯೂ 3,509 ಕೋವಿಡ್ ಕೇಸ್ಗಳು ಪತ್ತೆಯಾಗಿದ್ದವು. ಈಗ ಮತ್ತೆ ಮೂರು ಸಾವಿರ ಗಡಿ ದಾಟಿದೆ. ನಗರದಲ್ಲಿ ಪ್ರಸ್ತುತ 24,600 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 4,636 ಮಂದಿ ಮೃತಪಟ್ಟಿದ್ದಾರೆ. 4,12,006 ಮಂದಿ ಗುಣಮುಖರಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 4,44,259ಕ್ಕೆ ಏರಿಕೆಯಾಗಿದೆ.
ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಆಡುಗೋಡಿ ಟೆಕ್ನಿಕಲ್ ಸೆಂಟರ್ಗೆ ಹಾಜರಾದ ಸಿಡಿ ಲೇಡಿ!
ನಗರದಲ್ಲಿ 31 ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶಗಳೆಂದು ಘೋಷಿಸಲಾಗಿದೆ. ಏಪ್ರಿಲ್ ಒಂದರವರೆಗೆ 25,274 ಜನರು ಲಸಿಕೆ ಪಡೆದಿದ್ದು, ಸೋಂಕಿತರ ಪ್ರಮಾಣ ಶೇ 5.41ರಷ್ಟಿದ್ದು, ಮರಣ ಪ್ರಮಾಣ ಶೇ 0.14ರಷ್ಟಿದೆ.