ಬೆಂಗಳೂರು: ಮೆಟ್ರೋ ಕಾಮಗಾರಿಯಿಂದ 30 ಅಡಿ ಮಣ್ಣು ಕುಸಿದು ಭಾರಿ ಅನಾಹುತ ಸಂಭವಿಸುವುದು ಸ್ವಲ್ಪದರಲ್ಲೇ ತಪ್ಪಿದೆ. ನಗರದ ಟ್ಯಾನರಿ ರಸ್ತೆಯಲ್ಲಿ ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಸಂಸ್ಥೆ ಅಪಾಯ ತಂದಿಟ್ಟಿದೆ ಎಂದು ಜನತೆ ದೂರುತ್ತಿದ್ದಾರೆ.
ಇತ್ತೀಚೆಗಷ್ಟೇ ಹೊರ ಬಂದ ಟನಲ್ ಬೋರಿಂಗ್ ಮಷಿನ್:
ರಾಜಧಾನಿಯ ಗೊಟ್ಟಿಗೆರೆಯಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಲ್ಲಿ ದುರಂತ ನಡೆದಿದೆ. ಇತ್ತೀಚೆಗಷ್ಟೆ ಸುರಂಗ ಕೊರೆದು ಊರ್ಜಾ (ಟನಲ್ ಬೋರಿಂಗ್ ಮಷಿನ್) ಹೊರ ಬಂದಿತ್ತು. ಟನಲ್ ಪ್ರೆಶರ್ಗೆ ಮಣ್ಣು ಕುಸಿದು ಭಾರಿ ಸಮಸ್ಯೆ ಉಂಟಾಗಿದೆ. ಮುಂಜಾನೆ 3 ಗಂಟೆಯಲ್ಲಿ ಮುಚ್ಚಿದ್ದ ಬಾವಿಯ ಮಣ್ಣು ಕುಸಿದು ಕೆಳಗೆ ಬಿದ್ದಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಂಆರ್ಸಿಎಲ್ ಅಧಿಕಾರಿಗಳೇ ಕಾರಣ:
ಮಾಲೀಕ ಝಬೀ ಎನ್ನುವವವರಿಗೆ ಸೇರಿದ ಜಾಗದಲ್ಲಿ ನಡೆದ ಅನಾಹುತಕ್ಕೆ ಬಿಎಂಆರ್ಸಿಎಲ್ ಅಧಿಕಾರಿಗಳೇ ಇದಕ್ಕೆ ಕಾರಣ ಎಂದು ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಈ ಜಾಗ ಪಡೆದು ಇದಕ್ಕೆ ಪರಿಹಾರ ನೀಡಲಿ ಎಂದು ಮಾಲೀಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಉಪ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕಸರತ್ತು: ಶೀಘ್ರದಲ್ಲೇ ವರಿಷ್ಠರ ಭೇಟಿಗೆ ದೆಹಲಿಗೆ ತೆರಳಲಿರುವ ಸಿಎಂ