ETV Bharat / state

ಅಬಕಾರಿ ಪೊಲೀಸರ ಕಾರ್ಯಾಚರಣೆ: 3.23 ಕೋಟಿ ರೂ. ಮೌಲ್ಯದ ಮದ್ಯ, ವಾಹನ ಜಪ್ತಿ - Operation of Bangalore Excise Police

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಂದಿನವರೆಗೆ ಅಬಕಾರಿ ಪೊಲೀಸರು ಸುಮಾರು 373 ಕಡೆ ದಾಳಿ ನಡೆಸಿ ಮದ್ಯ, ಬಿಯರ್, ವಾಹನಗಳು ಹಾಗೂ ಇನ್ನಿತರೆ ವಸ್ತುಗಳು ಸೇರಿದಂತೆ ಒಟ್ಟು 3.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಬಕಾರಿ ಪೊಲೀಸರ ಕಾರ್ಯಚರಣೆ: 3.23 ಕೋಟಿ ರೂ ಮೌಲ್ಯದ ಮದ್ಯ, ವಾಹನ ಜಪ್ತಿ
author img

By

Published : Nov 21, 2019, 7:35 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 4 ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್.ಪುರಂ, ಶಿವಾಜಿನಗರ, ಯಶವಂತಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಂದಿನವರೆಗೆ ಅಬಕಾರಿ ಪೊಲೀಸರು ಸುಮಾರು 373 ಕಡೆ ದಾಳಿ ನಡೆಸಿ ವಿವಿಧ ಪ್ರಕರಣ ದಾಖಲಿಸಿದ್ದಾರೆ.

Operation of Bangalore Excise Police
ಅಬಕಾರಿ ಪೊಲೀಸರ ಕಾರ್ಯಚರಣೆ: 3.23 ಕೋಟಿ ರೂ ಮೌಲ್ಯದ ಮದ್ಯ, ವಾಹನ ಜಪ್ತಿ
Operation of Bangalore Excise Police
ಅಬಕಾರಿ ಪೊಲೀಸರ ಕಾರ್ಯಚರಣೆ: 3.23 ಕೋಟಿ ರೂ ಮೌಲ್ಯದ ಮದ್ಯ, ವಾಹನ ಜಪ್ತಿ

ಈ ವೇಳೆ ಮದ್ಯ, ಬಿಯರ್, ವಾಹನಗಳು ಹಾಗೂ ಇನ್ನಿತರೆ ವಸ್ತುಗಳು ಸೇರಿದಂತೆ ಒಟ್ಟು 3.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 45 ಕಡೆ ದಾಳಿ ನಡೆಸಲಾಗಿದ್ದು, 125 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ, 69,550 ಲೀಟರ್ ಮದ್ಯ, ಒಂದು ವಾಹನ ಹಾಗೂ 22 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕೆ.ಆರ್​.ಪುರಂ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 153 ಕಡೆ ದಾಳಿ ನಡೆಸಿ, 26763 ಲೀಟರ್​ ಮದ್ಯ, 5,460 ಲೀಟರ್ ಬಿಯರ್, 6 ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಇನ್ನು ಯಶವಂತಪುರದಲ್ಲಿ 174 ಕಡೆ ದಾಳಿ ನಡೆಸಿ, 5430 ಲೀಟರ್​ ಮದ್ಯ, 37,960 ಲೀಟರ್​ ಬಿಯರ್, ಐದು ವಾಹನ ಹಾಗೂ 46 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಒಟ್ಟು 1,93,50,421 ರೂ. ಮೌಲ್ಯದ ಮದ್ಯ, 9,07,224 ರೂ. ಮೌಲ್ಯದ ಬಿಯರ್ ಹಾಗೂ 1,21,25,000 ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಇಂದು ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ದೊಡ್ಡ ಆಲದ ಮರ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಒಂದು ದ್ವಿಚಕ್ರ ವಾಹನ ಮತ್ತು 12.600 ಲೀಟರ್​ ಮದ್ಯ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

Intro:ಉಪ ಚುನಾವಣೆಯ 4 ಕ್ಷೇತ್ರಗಳಲ್ಲಿ 3.23 ಕೋಟಿ ರೂ ಮೌಲ್ಯದ ಮದ್ಯ, ವಾಹನ ಜಪ್ತಿ

ಬೆಂಗಳೂರು: ವಿಧಾನಸಭಾ ಉಪ ಚುನಾವಣೆ-2019 ಕ್ಕೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 4 ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್.ಪುರಂ, ಶಿವಾಜಿನಗರ, ಯಶವಂತಪುರ ಮತ್ತು ಮಹಾಲಕ್ಷ್ಮೀ ಲೇಔಟ್ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಾದ 11-11-19 ರಿಂದ 20-11-19 ರವರೆಗೆ ಅಬಕಾರಿ ಪೊಲೀಸರು ಸುಮಾರು 373 ಕಡೆ ದಾಳಿ ನಡೆಸಿ ವಿವಿಧ ಮೊಕದ್ದಮೆಗಳನ್ನು ದಾಖಲಿಸಿದ್ದಾರೆ. ಈ ವೇಳೆ ಮದ್ಯ, ಬಿಯರ್, ವಾಹನಗಳು ಹಾಗೂ ಇನ್ನಿತರೆ ವಸ್ತುಗಳು ಸೇರಿದಂತೆ ಒಟ್ಟು 3.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿಮಾಡಲಾಗಿದೆ. ಒಟ್ಟು 45 ಕಡೆ ದಾಳಿ ನಡೆಸಲಾಗಿದೆ. 125 ವ್ಯಕ್ತಿಗಳ ವಿರುದ್ಧ ಪೊಲೀಸ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ, 69,550 ಲೀಟರ್ ಮದ್ಯ, ಒಂದು ವಾಹನ ಹಾಗೂ 22 ಆರೋಪಿಗಳನ್ನು ದಸ್ತಗಿರಿಗೊಳಿಸಲಾಗಿದೆ.
ಕೆ.ಆರ್ ಪುರಂ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 153 ದಾಳಿ ನಡೆಸಿ, 26763 ಲೀ ಮದ್ಯ, 5,460 ಲೀಟರ್ ಬಿಯರ್, ಆರು ವಾಹನ ಜಪ್ತಿ ಮಾಡಲಾಗಿದೆ
ಇನ್ನು ಯಶವಂತಪುರದಲ್ಲಿ 174 ಕಡೆ ದಾಳಿ ನಡೆಸಿ, 5430 ಲೀ. ಮದ್ಯ, 37,960 ಬಿಯರ್, ಐದು ವಾಹನ ಹಾಗೂ 46 ಆರೋಪಿಗಳನ್ನು ದಸ್ತಗಿರಿಗೊಳಿಸಲಾಗಿದೆ.
ಒಟ್ಟು 1,93,50,421 ರೂ ಮೌಲ್ಯದ ಮದ್ಯ, 9,07,224 ರೂ ಮೌಲ್ಯದ ಬಿಯರ್, ಹಾಗೂ 1,21,25,000 ಮೌಲ್ಯದ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಅಲ್ಲದೆ ಇಂದು, ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ದೊಡ್ಡ ಆಲದ ಮರ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಒಂದು ದ್ವಿಚಕ್ರ ವಾಹನ ಮತ್ತು 12.600 ಲೀ ಮದ್ಯ ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಸೌಮ್ಯಶ್ರೀ
Kn_bng_04_seize_election_7202707
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.