ETV Bharat / state

ಬೊಮ್ಮಾಯಿಗೆ ಪಂಚಮಸಾಲಿಗರ ಮೀಸಲಾತಿ ತಲೆಬಿಸಿ; ಬಿಜೆಪಿ ಸರ್ಕಾರದ ಮುಂದಿರುವ ಲೆಕ್ಕಾಚಾರಗಳೇನು? - ಈಟಿವಿ ಭಾರತ ಕನ್ನಡ

2A ಮೀಸಲಾತಿ ನೀಡುವಂತೆ ಪಂಚಮಸಾಲಿ ಲಿಂಗಾಯತರು ಹೋರಾಟ ಮಾಡುತ್ತಿದ್ದಾರೆ. ಒಂದು ವೇಳೆ ಮೀಸಲಾತಿ ನೀಡಿದರೆ 2Aಯಲ್ಲಿ ಬರುವ 102 ಹಿಂದುಳಿದ ವರ್ಗಗಳಿಗೂ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಈ ಬಗ್ಗೆ ಬೊಮ್ಮಾಯಿ ಸರಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

CM Bommai
CM Bommai
author img

By

Published : Dec 27, 2022, 5:59 PM IST

Updated : Dec 27, 2022, 6:09 PM IST

ಬೆಂಗಳೂರು : 2A ಮೀಸಲಾತಿ ನೀಡುವಂತೆ ಪಂಚಮಸಾಲಿ ಲಿಂಗಾಯತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇತ್ತ ಸಿಎಂ ಬೊಮ್ಮಾಯಿ ಸರ್ಕಾರವೂ ಮೀಸಲಾತಿ ಸಂಬಂಧ‌ ಮಹತ್ವದ ಘೋಷಣೆ ಮಾಡುವ ನಿರೀಕ್ಷೆ ಇದೆ. ಆದರೆ, ಪಂಚಮಸಾಲಿ ಲಿಂಗಾಯತರಿಗೆ 2A ಮೀಸಲಾತಿ ನೀಡಲು‌ ಇರುವ ಹತ್ತಾರು ವಿಘ್ನ ಸಿಎಂ ಬೊಮ್ಮಾಯಿ‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಚುನಾವಣಾ ಹೊಸ್ತಿಲಲ್ಲಿರುವ ಸಿಎಂ ಬೊಮ್ಮಾಯಿ‌ ಇದೀಗ ಪಂಚಮಸಾಲಿ ಲಿಂಗಾಯತರಿಗೆ 2A ಮೀಸಲಾತಿ ಕೊಡುವ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಕಾಯಂ ಆಯೋಗ ಪಂಚಮಸಾಲಿ ಮೀಸಲಾತಿ ಸಂಬಂಧ ಮಧ್ಯಂತರ ವರದಿ ನೀಡಿದೆ. ಪಂಚಮಸಾಲಿ ಸಮುದಾಯಕ್ಕೆ 2Aಗೆ ಸೇರ್ಪಡೆಗೊಳಿಸಿದರೆ ಅದರಡಿ ಈಗಾಗಲೇ ಮೀಸಲಾತಿ ಪಡೆಯುತ್ತಿರುವ 102 ಹಿಂದುಳಿದ ವರ್ಗಗಳಿಗೆ ಸಮಸ್ಯೆ ಎದುರಾಗುವ ಆತಂಕ ವ್ಯಕ್ತಪಡಿಸಿರುವ ಆಯೋಗ, ಪಂಚಮಸಾಲಿ ಮೀಸಲಾತಿಗಾಗಿ ಪ್ರತ್ಯೇಕ ಪ್ರವರ್ಗ ಸೃಷ್ಟಿಸಲು ಶಿಫಾರಸು ಮಾಡಿದೆ ಎನ್ನಲಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಾರೆ‌. ದೆಹಲಿ ಭೇಟಿ ವೇಳೆ ಹೈಕಮಾಂಡ್ ಬಳಿ ಪಂಚಮಸಾಲಿ ಮೀಸಲಾತಿ ಬಗ್ಗೆ ಚರ್ಚೆ ನಡೆಸಿ, ಕೆಲ ಸಲಹೆ ಸೂಚನೆಗಳನ್ನು ಪಡೆದುಕೊಂಡು ಬಂದಿದ್ದಾರೆ.

ಇದೀಗ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡುವ ಬಗ್ಗೆ ಒಲವು ಹೊಂದಿರುವ ಸರ್ಕಾರ ಇತರ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ, ಕಾನೂನು ತೊಡಕು ಬರದಂತೆ ಅಳೆದು ತೂಗಿ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಪಂಚಮಸಾಲಿಗೆ 2A ಅಡಿ ಮೀಸಲಾತಿ ನೀಡಿದರೆ, ಕೋರ್ಟ್‌ನಲ್ಲಿ ಅದು ತಿರಸ್ಕೃತವಾಗುವ ಸಾಧ್ಯತೆನೇ ಹೆಚ್ಚಿರುವ ಭೀತಿ ಇದೆ. ಈಗಾಗಲೇ ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದಿಂದ 50% ಪರಿಮಿತಿ ಮೀರಿದ್ದು, ಇತ್ತ EWS ಗೂ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವ ಕಾರಣ, ಇದೀಗ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಿದರೆ ನ್ಯಾಯಾಲಯದಲ್ಲಿ 50% ಮೀರುವಾಗಿನ ತೂಗು ಗತ್ತಿಯಿಂದ ಹೇಗೆ ತಪ್ಪಿಸುವುದು ಎಂಬ ಗೊಂದಲದಲ್ಲಿ ಸರ್ಕಾರ ಇದೆ.

ಪಂಚಮಸಾಲಿ ಮೀಸಲಾತಿಗೆ ಕಗ್ಗಂಟು ಏನು?: ಪಂಚಮಶಾಲಿ ಉಪಜಾತಿಯನ್ನು 2A ಹಿಂದುಳಿದ ಜಾತಿ ಪ್ರವರ್ಗಕ್ಕೆ ಸೇರಿಸಬೇಕೆಂದು ಸದ್ಯದ ಬೇಡಿಕೆ. ವೀರಶೈವ ಲಿಂಗಾಯಿತ ಸಮಾಜದಲ್ಲಿ ಒಟ್ಟು 102 ಉಪಜಾತಿಗಳಿದ್ದು, ಇವುಗಳ ಪೈಕಿ 34 ಉಪ ಜಾತಿಗಳನ್ನು ಕೇಂದ್ರ ಸರ್ಕಾರದ ಒ.ಬಿ.ಸಿ. 2A ಪಟ್ಟಿಯಲ್ಲಿ ಸೇರಿಸಲಾಗಿದೆ. 2Aರಡಿ 15% ಮೀಸಲಾತಿ ಕಲ್ಪಿಸಲಾಗುತ್ತಿದೆ. ಈಗಾಗಲೇ 2A ಪ್ರವರ್ಗದಡಿ ವೀರಶೈವ ಲಿಂಗಾಯತದ 34 ಉಪಜಾತಿಗಳಾದ ಗೌಲಿ, ಕಾವಾಡಿಗ, ಮೇದಾರ, ಬಾಟರ್, ಗೌರಿ, ಗೌರಿ ಮರಾಠ, ಬರ್ನಡ ಗೌರಿಗು, ಅಗಸ, ಗುರುವ, ಹುಗಾರ, ಜೀರ್, ಜೇಡ, ಕುರುಜಿನಶೆಟ್ಟಿ, ಬಿಳಿಮಗ್ಗ, ಜಾಡರು, ಅಕ್ಕಸಾಲಿ, ಕಮ್ಮಾರ, ಕಮ್ಮಾಲಿ, ಬಡೀಗ, ನಾಯಿಂಡ, ಬಂಡಾರಿ, ಜಜಂತ್ರಿ, ಗಾಣಿಗ, ಗಾಣಿಗರ, ಸಜ್ಜನ, ಬಳೆಗಾರ, ಸಜ್ಜನ ಗಾಣಿಗರ, ನೀಲಗಾರಿ ಮೀಸಲಾತಿ ಪಡೆಯುತ್ತಿದ್ದಾರೆ.

ಪಂಚಮಸಾಲಿ ಉಪಜಾತಿಯನ್ನು 3ಬಿ ಯಿಂದ 2ಎಗೆ ಸೇರಿಸಿದರೆ, ಯಾವ ಆಧಾರದ ಮೇಲೆ ಯಾವ ಯಾವ ಅಂಶಗಳ ಮೇಲೆ ನೀಡಲಾಗಿದೆ ಎಂಬುದನ್ನು ಸ್ಪಷ್ಟಡಿಸಬೇಕು. ಸುಮಾರು 50 ಲಕ್ಷ ಜನಸಂಖ್ಯೆ ಇರುವ ಪಂಚಮಸಾಲಿಯ ಉಪಜಾತಿಯವರನ್ನು ಒ.ಬಿ.ಸಿ 2A ಪ್ರವರ್ಗ ಪಟ್ಟಿಯಲ್ಲಿ ಸೇರಿಸಿದರೆ, ಈಗಾಗಲೇ 2A ಪ್ರವರ್ಗದಲ್ಲಿ ಇರುವ ಎಲ್ಲಾ ಜಾತಿಯವರಿಗೆ ವಿದ್ಯಾಭ್ಯಾಸ ಮತ್ತು ಸರ್ಕಾರದ ನೌಕರಿಯಿಂದ ವಂಚಿತರಾಗುತ್ತಾರೆ. ಒಂದು ವೇಳೆ ಎಲ್ಲಾ 102 ವೀರಶೈವ ಲಿಂಗಾಯಿತ ಉಪಜಾತಿಗಳನ್ನು ಒಬಿಸಿ 2ಎ ಜಾತಿಯ ಪ್ರವರ್ಗ ಪಟ್ಟಿಯಲ್ಲಿ ಸೇರಿಸಿದ್ದಲ್ಲಿ (3 ಕೋಟಿ ವೀರಶೈವ ಲಿಂಗಾಯಿತರು)ಈಗಾಗಲೇ 2A ಪ್ರವರ್ಗದಲ್ಲಿ ಮೀಸಲಾತಿ ಪಡೆಯುತ್ತಿರುವ ಜಾತಿಯವರ ಮೀಸಲಾತಿ ಸೌಲಭ್ಯಕ್ಕೆ ಸಂಚಕಾರ ಬರಲಿದೆ ಎಂಬ ಬಲವಾದ ಆತಂಕ ಎದುರಾಗಿದೆ.

ಸರ್ಕಾರದ ಮೀಸಲಾತಿ ಲೆಕ್ಕಾಚಾರ ಏನು?: ಬೆಳಗಾವಿ ಅಧಿವೇಶನದ ವೇಳೆಯೇ ಸಿಎಂ ಬೊಮ್ಮಾಯಿ ಪಂಚಮಸಾಲಿ ಸಮುದಾಯದ ಬೇಡಿಕೆಯಂತೆ ಮೀಸಲಾತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ, 2A ಪ್ರವರ್ಗದ 15% ಮೀಸಲಾತಿಯಡಿ ಸೇರ್ಪಡೆಗೊಳಿಸಿದರೆ, ಆ ಪ್ರವರ್ಗದಲ್ಲಿನ ಪ್ರಬಲ ಉಪಜಾತಿಗಳ ವಿರೋಧ ಕಟ್ಟಿಕೊಳ್ಳುವ ಭಯ ಸರ್ಕಾರದ್ದು.

ಪಂಚಮಸಾಲಿ ಒಳಗೊಂಡಂತೆ ವೀರಶೈವ ಲಿಂಗಾಯತದಲ್ಲಿನ ಇತರ ಹಿಂದುಳಿದ ಉಪಜಾತಿಗಳನ್ನೂ ಸೇರಿಸಿ ಮೀಸಲಾತಿ ಕೊಡುವ ಬೇಡಿಕೆ ಇದೆ. ಚುನಾವಣೆ ಹೊಸ್ತಿಲಲ್ಲಿ ಮೀಸಲಾತಿ ಕೊಡುವ ಅನಿವಾರ್ಯತೆ ಹೊಂದಿರುವ ಬೊಮ್ಮಾಯಿ‌ ಸರ್ಕಾರ ಪಂಚಮಸಾಲಿಗರ ಮೀಸಲಾತಿಗಾಗಿ ಪ್ರತ್ಯೇಕ ಪ್ರವರ್ಗ ಸೃಜಿಸುವ ಯೋಚನೆಯಲ್ಲಿ ಇದೆ ಎನ್ನಲಾಗಿದೆ. ಆ ಮೂಲಕ 2A ಪ್ರವರ್ಗದಲ್ಲಿನ ಒಬಿಸಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗದೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇದಕ್ಕಾಗಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲಾಗುವ ಮೀಸಲಾತಿಯನ್ನು ಕಡಿತಗೊಳಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಮುಸ್ಲಿಂ (4%) ಮತ್ತು ಕ್ರಿಶ್ಚಿಯನ್ (5%) ಮೀಸಲಾತಿ ಕಡಿತಗೊಳಿಸಿ, ಪಂಚಮಸಾಲಿಗರು ಸೇರಿ ವೀರಶೈವ ಲಿಂಗಾಯತ ಉಪಜಾತಿಗಳಿಗೆ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ, ಮೀಸಲಾತಿ ನೀಡಲು ಬೊಮ್ಮಾಯಿ ಸರ್ಕಾರ ಮುಂದಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ಹೈ ಕಮಾಂಡ್ ಸಿಎಂ ಬೊಮ್ಮಾಯಿಗೆ ಮೀಸಲಾತಿ ಬೇಡಿಕೆ ಸಂಬಂಧ ಯಾವ ಸಲಹೆ ಸೂಚನೆ ನೀಡಿದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: EWS ಮೀಸಲಾತಿ ಈಗ ಜಾರಿಯಲ್ಲಿರುವ ಮೀಸಲಾತಿಯನ್ನು ದಾರಿ ತಪ್ಪಿಸುವ ತಂತ್ರ: ರಮೇಶ್ ಕುಮಾರ್

Last Updated : Dec 27, 2022, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.