ಬೆಂಗಳೂರು: ರಾಜ್ಯದಲ್ಲಿಂದು 2,975 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಇಂದು 1,262 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 25,541ಕ್ಕೆ ಏರಿಕೆಯಾಗಿದೆ.
ಈವರೆಗೆ ಒಟ್ಟು 954678 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 992779 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 12,541ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 240 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಓದಿ:ರಸ್ತೆಗೆ ಬಿದ್ದ ಬಳಿಕ ಬೈಕ್‌ಗೆ ಹತ್ತಿಕೊಂಡ ಬೆಂಕಿ: ಸವಾರ ಸಜೀವ ದಹನ
ಬೆಂಗಳೂರೊಂದರಲ್ಲೇ 1984 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 11 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮೃತರ ಪ್ರಮಾಣ ಶೇ.0.70ಕ್ಕೆ ಏರಿಕೆಯಾಗಿದ್ದರೆ, ಸೋಂಕಿತರ ಪ್ರಮಾಣ ಶೇ. 2.78ಕ್ಕೆ ಏರಿಕೆಯಾಗಿದೆ.