ಬೆಂಗಳೂರು: ಎರಡು ದಿನಗಳ ಅಂತರದಲ್ಲಿ ಬೆಂಗಳೂರು ಉತ್ತರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ 27ಜನ ಆರೋಪಿಗಳನ್ನ ಬಂಧಿಸಿ 9 ಕೆಜಿ.ಗಾಂಜಾ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರ ಉತ್ತರ ವಲಯದ 18 ಠಾಣಾ ವ್ಯಾಪ್ತಿಗಳಲ್ಲಿ 27 ಜನ ಆರೋಪಿಗಳನ್ನ ಬಂಧಿಸಿ ಲಕ್ಷಾಂತರ ಮೌಲ್ಯದ 9.300 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಬಹುತೇಕರು ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಬಿಡಿಎ, ಡೆಂಟಲ್ ಕಾಲೇಜು ವಿದ್ಯಾರ್ಥಿಗಳು, ಕೆ.ಇ.ಬಿ ಲೈನ್ಮೆನ್ , ಸರ್ಕಾರಿ ನೌಕರರು ಸಹ ಸೇರಿದ್ದಾರೆ.
ಚಿಕ್ಕಮಗಳೂರು, ಕೋಲಾರ,ಚಿಕ್ಕಬಳ್ಳಾಪುರ ಸೇರಿದಂತೆ ಹೊರರಾಜ್ಯಗಳಿಂದ ಮಾದಕ ವಸ್ತುಗಳನ್ನು ಪಡೆಯುತ್ತಿದ್ದ ಆರೋಪಿಗಳು, ಉತ್ತರ ಬೆಂಗಳೂರಿನ ಕಾಲೇಜು ಮತ್ತು ಪ್ರತಿಷ್ಠಿತ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದರು. ಇವರಿಗೆ ಎಲ್ಲಿಂದ ಗಾಂಜಾ ಸರಬರಾಜಾಗುತ್ತಿತ್ತು, ಮಾರಾಟ ಜಾಲದ ಮೂಲ ಎಲ್ಲಿದೆ, ಇದರ ಹಿನ್ನಲೆ ಮುನ್ನಲೆ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.