ETV Bharat / state

ರಾಜ್ಯದಲ್ಲಿಂದು 257 ಕೋವಿಡ್-19 ಪ್ರಕರಣ ಪತ್ತೆ... ಮತ್ತೆ ನಾಲ್ವರನ್ನು ಬಲಿಪಡೆದ ಕೊರೊನಾ - ಕೊರೊನಾ ಸೋಂಕು ಲೇಟೆಸ್ಟ್ ನ್ಯೂಸ್

ರಾಜ್ಯದಲ್ಲಿ ಇಂದು 257 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು ನಾಲ್ವರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 57ಕ್ಕೇರಿದೆ.

257 fresh covid-19 positive cases found in Karnataka
ರಾಜ್ಯದಲ್ಲಿಂದು 257 ಕೋವಿಡ್-19 ಪ್ರಕರಣ ಪತ್ತೆ
author img

By

Published : Jun 4, 2020, 7:28 PM IST

ಬೆಂಗಳೂರು: ರಾಜ್ಯದಲ್ಲಿ ಇಂದು 257 ಹೊಸ ಕೋವಿಡ್ -19 ಪ್ರಕರಣಗಳು ದೃಢಪಟ್ಟಿದ್ದು, ನಾಲ್ವರು ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆಯಾದ್ರೆ, ಸಾವಿಗೀಡಾದವರ ಸಂಖ್ಯೆ 57ಕ್ಕೆ ತಲುಪಿದೆ. ಇಂದು 106 ಜನ ಗುಣಮುಖರಾಗಿದ್ದು, ಈವರೆಗೆ ಒಟ್ಟು 1,610 ಜನ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಒಟ್ಟು 2,651 ಸಕ್ರಿಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ 13 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಮಾಹಿತಿ ನೀಡಿದೆ.

ಇಂದು ಕಂಡುಬಂದ ಕೋವಿಡ್-19 ಪ್ರಕರಣಗಳಲ್ಲಿ 155 ಅಂತಾರಾಜ್ಯ ಪ್ರಯಾಣಿಕರು ಹಾಗೂ ಒಬ್ಬರು ವಿದೇಶದಿಂದ ಬಂದ ಪ್ರಯಾಣಿಕರಾಗಿದ್ದಾರೆ. ಉಡುಪಿಯಲ್ಲಿ ಇಂದು ಸಹ ಅತಿಹೆಚ್ಚು ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಮಂಡ್ಯ 15, ಬೆಳಗಾವಿ 12, ಹಾಸನ 15, ದಾವಣಗೆರೆ 13, ಬೆಂಗಳೂರಿನಲ್ಲಿ 9 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಬೆಂಗಳೂರು ನಗರದ ಇಬ್ಬರು ಮಹಿಳೆಯರು, ಗದಗಲ್ಲಿ ಓರ್ವ ಮಹಿಳೆ ಮತ್ತು ದಾವಣಗೆರೆಯಲ್ಲಿ ಓರ್ವ ವ್ಯಕ್ತಿ ಇಂದು ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.