ETV Bharat / state

ಪಟಾಕಿ ಅವಘಡ: ಬೆಂಗಳೂರಲ್ಲಿ ಗಾಯಗೊಂಡು 25 ಮಂದಿ ಆಸ್ಪತ್ರೆಗೆ ದಾಖಲು

author img

By ETV Bharat Karnataka Team

Published : Nov 13, 2023, 3:27 PM IST

Updated : Nov 13, 2023, 3:49 PM IST

ಬೆಂಗಳೂರು ನಗರದಲ್ಲಿ ಪಟಾಕಿ ಸಿಡಿತಕ್ಕೆ ಇದುವರೆಗೆ 25 ಮಂದಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

firecracker explosion
ಪಟಾಕಿ ಸಿಡಿತ ಗಾಯದಿಂದ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ

ಬೆಂಗಳೂರು: ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ನಗರದಲ್ಲಿ ಸಾಕಷ್ಟು ಕ್ರಮ ಕೈಗೊಂಡಿದ್ದರೂ 25 ಪಟಾಕಿ ಅವಘಡ ಪ್ರಕರಣಗಳು ಬೆಳಕಿಗೆ ಬಂದಿದೆ.

ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯಿಂದ ಇಲ್ಲಿಯವರೆಗೆ ಏಳು ಜನರು ಪಟಾಕಿ ಸಂಬಂಧಿತ ಗಾಯಗಳ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇಬ್ಬರು ಗಾಯಾಳುಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಐವರಿಗೆ ಓಪಿಡಿಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇವರಲ್ಲಿ 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ.

ನಾರಾಯಣ ನೇತ್ರಾಲಯದಲ್ಲಿ ಪಟಾಕಿಯಿಂದ 16 ಮಂದಿ ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಬೇರೆಯವರು ಸಿಡಿಸಿದ ಪಟಾಕಿಯಿಂದ ಗಾಯಗೊಂಡವರೇ ಹೆಚ್ಚಾಗಿದ್ದಾರೆ. ಇವರಲ್ಲಿ ಟೈಲರ್ ಒಬ್ಬರು ಮತ್ತು 19 ವರ್ಷದ ಯುವಕನಿಗೆ ಗಂಭೀರ ಗಾಯವಾಗಿದೆ. ಉಳಿದ ಗಾಯಾಳುಗಳಿಗೆ ಸಣ್ಣಪುಟ್ಟ ಚಿಕಿತ್ಸೆಯ ಅಗತ್ಯವಿದ್ದು, ನೀಡಲಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ಗಾಯಾಳುಗಳ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದ್ದು, ಅವರಿಗೆ ಯಾವುದೇ ಶಾಶ್ವತ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಹಾಗೆಯೇ ಶಂಕರ ನೇತ್ರಾಲಯದಲ್ಲಿ ಎರಡು ಪಟಾಕಿ ಗಾಯದ ಪ್ರಕರಣ ವರದಿಯಾಗಿದೆ. ಇದರಲ್ಲಿ ಆರು ಮತ್ತು ಏಳು ವರ್ಷದ ಮಕ್ಕಳು ಪಟಾಕಿಯಿಂದ ಗಾಯಗೊಂಡಿದ್ದಾರೆ. ಪಟಾಕಿ ಹಚ್ಚುವುದನ್ನು ನೋಡುತ್ತಿದ್ದಾಗ ಏಳು ವರ್ಷದ ಹುಡುಗನಿಗೆ ಗಾಯಗಳಾಗಿದೆ.

ಇದನ್ನೂ ಓದಿ: ರಾಣಿಪೇಟೆಯಲ್ಲಿ ಪಟಾಕಿ ಸಿಡಿದು ಬಾಲಕಿ ಸಾವು; ಬೆಳಕಿನ ಹಬ್ಬದಲ್ಲಿ ಕತ್ತಲಾದ ಬದುಕು

ಇತರ ಪಟಾಕಿ ಅವಘಡ ; ತಮಿಳುನಾಡಿನಲ್ಲಿ ಪಟಾಕಿ ಸಿಡಿದು ಬಾಲಕಿ ಸಾವು: ತಮಿಳುನಾಡಿನ ರಾಣಿಪೇಟೆಯಲ್ಲಿ ಪಟಾಕಿ ಸಿಡಿದು ತಗುಲಿದ ಗಂಭೀರ ಗಾಯದಿಂದ 4 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ರಮೇಶ್​ ಎಂಬುವರ ಕುಟುಂಬ ಬೆಳಕಿನ ಹಬ್ಬಕ್ಕೆ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ರಮೇಶ್​ರ ಸಹೋದರ ಪಟಾಕಿ ಸಿಡಿಸುವಾಗ ಪಟಾಕಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಪರಿಣಾಮ ರಮೇಶ್​ರ 4 ವರ್ಷದ ಮಗಳು ಅಲ್ಲೇ ಇದ್ದುದರಿಂದ ಆಕೆಯ ಮೇಲೂ ಪಟಾಕಿ ಸಿಡಿದು ಬಿದ್ದಿದ್ದು ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರು ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಾಳೆ

ಬೆಳಕಿನ ಹಬ್ಬ ಕತ್ತಲಾಗದಿರಲಿ: ದೀಪಾವಳಿ ಹಬ್ಬಕ್ಕಿರುವ ಸಂಭ್ರಮ ಸಡಗರ ಯಾವ ಹಬ್ಬದಲ್ಲೂ ಇಲ್ಲ. ದೀಪಾವಳಿ ಎಂದರೆ ಕೆಲವರಿಗೆ ಪೂಜೆ ಪುನಸ್ಕಾರ, ಇನ್ನೂ ಕೆಲವರಿಗೆ ಪಟಾಕಿ ಸಿಡಿಸುವುದೇ ಹಬ್ಬವಾಗಿರುತ್ತದೆ. ಆದರೆ ಪಟಾಕಿ ಸಿಡಿಸುವ ಭರದಲ್ಲಿ ನಿಮ್ಮ, ನಿಮ್ಮವರ ಪ್ರಾಣದ ಮೇಲೂ ಎಚ್ಚರವಿರಲಿ. ನಮ್ಮ ಸಂತೋಷ ಇನ್ನೊಬ್ಬರಿಗೆ ದುಖಃವಾಗದಿರಲಿ. ಮಕ್ಕಳನ್ನು ಆದಷ್ಟು ಬೆಂಕಿ, ಪಟಾಕಿ ಸಿಡಿಯುವ ವೇಳೆ ದೂರವಿಡಿ. ಪಟಾಕಿ ಸಿಡಿಸುವ ವೇಳೆ ಕಣ್ಣಿಗೆ ರಕ್ಷಣಾತ್ಮಕ ಕನ್ನಡಕ ಬಳಸಿ. ಗಾಯಗಳಾದರೆ ನಿರ್ಲಕ್ಷ್ಯ ತೋರದೇ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ.

Last Updated : Nov 13, 2023, 3:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.