ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಷ್ಟು ದಿನ ಸಾರ್ವಜನಿಕರಲ್ಲಿ ಕೊರೊನಾ ಕಾಣಿಸಿಕೊಳ್ತಿತ್ತು. ಇದೀಗ ತನ್ನ ವಕ್ರದೃಷ್ಟಿಯನ್ನು ಪೊಲೀಸ್ ಇಲಾಖೆ ಕಡೆ ತಿರುಗಿಸಿದೆ.
ನಗರದ ಎಲ್ಲಾ ಠಾಣೆಗಳಿಗೆ ಹೋಲಿಸಿದರೆ, ಡೇಂಜರ್ ಝೋನ್ ನಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆ ಇದ್ದು, ಕಳೆದ ಕೆಲ ದಿನಗಳ ಹಿಂದೆ 9 ಪಾಸಿಟಿವ್ ಇತ್ತು. ಇಂದು 14 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಒಟ್ಟು ಕಲಾಸಿಪಾಳ್ಯದಲ್ಲೇ 24 ಜನ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ.
ಹೀಗಾಗಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಇತರೆ ಸಿಬ್ಬಂದಿಯಲ್ಲಿ ಕೊರೊನಾ ಆತಂಕ ಹೆಚ್ಚಿದ್ದು ಡ್ಯೂಟಿಗೆ ಹಾಜರಾಗಲು ಪೊಲೀಸ್ ಸಿಬ್ಬಂದಿ ಹೆದರುತ್ತಿದ್ದಾರೆ. ಹಾಗೆ ಈ ಸೋಂಕಿತ ಸಿಬ್ಬಂದಿ ಜೊತೆ ಸಂಪರ್ಕದಲ್ಲಿರುವ ಇತರೆ ಸಿಬ್ಬಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿದೆ. ಸದ್ಯ ಠಾಣೆಗೆ ಸಾರ್ವಜನಿಕರ ಭೇಟಿಯನ್ನ ನಿರ್ಬಂಧಿಸಲಾಗಿದ್ದು, ಏನಾದರು ಮೇಜರ್ ಘಟನೆ ನಡೆದರೆ ಇಲಾಖೆಯ 100ಗೆ ಕರೆ ಮಾಡುವಂತೆ ಹಿರಿಯ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.