ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ 21 ವಿದೇಶಿ ಪ್ರಜೆಗಳನ್ನ ಈಶಾನ್ಯ ವಿಭಾಗದ ಪೊಲೀಸರು ಮತ್ತು ಎಫ್ಆರ್ಆರ್ಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಈ ಎಲ್ಲಾ ಆರೋಪಿಗಳು ಆಫ್ರಿಕಾದ ನೈಜೀರಿಯಾ, ಕಾಂಗೋ, ಉಗಾಂಡ, ಐವೆರಿ ಕೊಸ್ಟ್, ತಾಂಜೇನಿಯ ದೇಶದ ಪ್ರಜೆಗಳಾಗಿದ್ದು, ವಿದ್ಯಾಭ್ಯಾಸ, ಬಿಸಿನೆಸ್, ಟೂರಿಸ್ಟ್ ಅಂತಾ ವೀಸಾ ಪಡೆದುಕೊಂಡು ಭಾರತಕ್ಕೆ ಬಂದಿದ್ದರು. ವೀಸಾ ಅವಧಿ ಮುಗಿದಿದ್ದರೂ ಸಹ ತಮ್ಮ ದೇಶಕ್ಕೆ ವಾಪಸ್ ಹೋಗದೆ ಹಾಗೂ ವೀಸಾದ ಅವಧಿ ಸಹ ವಿಸ್ತರಿಸಿಕೊಳ್ಳದೆ ನಗರದಲ್ಲೆ ವಾಸವಾಗಿದ್ದರು. ಅಷ್ಟೇಅಲ್ಲದೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪಾಸ್ಪೋರ್ಟ್ ಕಾಯ್ದೆ ಹಾಗೂ ವಿದೇಶಿ ಕಾಯ್ದೆ ಅಡಿಯಲ್ಲಿ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, 21 ಜನ ವಿದೇಶಿ ಪ್ರಜೆಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.