ಬೆಂಗಳೂರು: 2020-21 ಸಾಲಿನಲ್ಲಿ ಕೋವಿಡ್ 19ರ ಅಬ್ಬರಕ್ಕೆ ರಾಜ್ಯದ ಆರ್ಥಿಕತೆ ಸೊರಗಿ ಹೋಗಿದೆ. ಈ ಹಿನ್ನೆಲೆ ಇಲಾಖಾವಾರು ಅಭಿವೃದ್ಧಿ ಕೆಲಸಗಳ ಮೇಲೂ ಆರ್ಥಿಕ ಸಂಕಷ್ಟದ ಬರೆ ಜೋರಾಗಿ ಬಿದ್ದಿದೆ. ಆರ್ಥಿಕ ವರ್ಷ ಅಂತ್ಯವಾಗುತ್ತಿದ್ದು, ಇಲಾಖಾವಾರು ಆರ್ಥಿಕ ಪ್ರಗತಿ ನೀರಸವಾಗಿದೆ. ಅದರ ಸಂಪೂರ್ಣ ವರದಿ ಇಲ್ಲಿದೆ.
ಸಂಪನ್ಮೂಲ ಕ್ರೋಢೀಕರಣ ಕುಂಠಿತ, ಜಿಎಸ್ಟಿ ಪರಿಹಾರ ಕಡಿತ ಹಾಗೂ ಕೇಂದ್ರದ ತೆರಿಗೆ ಪಾಲಿನಲ್ಲಿನ ಕಡಿತ ರಾಜ್ಯದ ಬೊಕ್ಕಸದ ಮೇಲೆ ಭಾರಿ ಹೊರೆ ಬೀಳಿಸಿದೆ. ಇದರ ಎಫೆಕ್ಟ್ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳ ಮೇಲೂ ಬಿದ್ದಿದೆ. ಕಡಿಮೆ ಅನುದಾನ ಬಿಡುಗಡೆಗೊಳಿಸುವ ಮೂಲಕ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗಿದೆ.
ಆರ್ಥಿಕ ಸಂಕಷ್ಟದಿಂದ ಗತಿ ತಪ್ಪಿದ ಪ್ರಗತಿ: 2020-21ರ ಸಾಲಿನಲ್ಲಿ ಈವರೆಗೆ ಇಲಾಖಾವಾರು ಆರ್ಥಿಕ ಪ್ರಗತಿ ಆಗಿದ್ದು ಇಷ್ಟೇ! - 2020-21 ಆರ್ಥಿಕ ವರ್ಷದಲ್ಲಿ ಅಭಿವೃದ್ಧಿಗೆ ಹಿನ್ನಡೆ
ಲಾಕ್‌ಡೌನ್ ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣವಾಗಿ ಬುಡಮೇಲು ಮಾಡಿದೆ. ಆಯವ್ಯಯದಲ್ಲಿ ಘೋಷಿಸಿರುವ ಅನುದಾನಕ್ಕೆ ಪ್ರತಿಯಾಗಿ ಇಲಾಖಾವಾರು ಅಭಿವೃದ್ಧಿ ಕೆಲಸಗಳೂ ಕುಂಠಿತವಾಗಿವೆ. ಇತ್ತ ಆರ್ಥಿಕ ಇಲಾಖೆ ಆದಾಯದ ಕೊರತೆ ಹಿನ್ನೆಲೆ ಇಲಾಖಾವಾರು ಖರ್ಚು ವೆಚ್ಚಗಳಿಗೆ ನಿರ್ಬಂಧ ಹೇರಿದೆ. ಹೀಗಾಗಿ ಅಳೆದು ತೂಗಿ ಆರ್ಥಿಕ ಇಲಾಖೆ ಇಲಾಖೆಗಳಿಗೆ ಹಣ ಬಿಡುಗಡೆ ಮಾಡುತ್ತಿದೆ. ಬಜೆಟ್ ನಲ್ಲಿ ಹಂಚಿಕೆಯಾಗಿರುವ ಅನುದಾನ ಬಿಡುಗಡೆ ಸಾಧ್ಯವಾಗದೆ, ಇಲಾಖಾವಾರು ಆರ್ಥಿಕ ಪ್ರಗತಿಗೂ ತೀವ್ರ ಹಿನ್ನಡೆಯಾಗಿದೆ.