ETV Bharat / state

JOB Alert: ಮೆಸ್ಕಾಂನಲ್ಲಿ 200 ಅಪ್ರೆಂಟಿಸ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ - ವಿವಿಧ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅರ್ಜಿ

ಮೆಸ್ಕಾಂನಲ್ಲಿ ಒಂದು ವರ್ಷದ ಅವಧಿಗೆ ಅಪ್ರೆಂಟಿಸ್​ ಹುದ್ದೆಗೆ ಡಿಪ್ಲೊಮಾ ಮತ್ತು ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ.

200 apprenticeship Job call from mescom
200 apprenticeship Job call from mescom
author img

By

Published : Aug 21, 2023, 11:33 AM IST

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 200 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಡಿಪ್ಲೊಮಾ ಮತ್ತು ಪದವೀಧರರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಒಂದು ವರ್ಷದ ಹುದ್ದೆ ಅವಧಿಯಲ್ಲಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ ಗೌರವ ಧನಗಳನ್ನು ನೀಡಲಾಗುವುದು. ಈ ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಪದವೀಧರ ಅಪ್ರೆಂಟಿಸ್​ 70, ಟೆಕ್ನಿಷಿಯನ್​ ಡಿಪ್ಲೊಮಾ ಅಪ್ರೆಂಟಿಸ್​​ 65, ಜನರಲ್​ ಸ್ಟ್ರೀಮ್​ ಗ್ರಾಜುಯೇಟ್​ ಅಪ್ರೆಂಟಿಸ್​​ 65 ಹುದ್ದೆಗಳು ಸೇರಿದಂತೆ ಒಟ್ಟು 200 ಹುದ್ದೆ ಭರ್ತಿ ನಡೆಯಲಿದೆ.

ವಿದ್ಯಾರ್ಹತೆ ಮತ್ತು ಮಾಸಿಕ ಗೌರವ ಧನ

  • ಗ್ರಾಜುಯೇಷನ್​ ಅಪ್ರೆಂಟಿಸ್​- ಬಿಇ ಅಥವಾ ಬಿಟೆಕ್​ - 9000
  • ಟೆಕ್ನಿಷಿಯನ್​ ಡಿಪ್ಲೊಮಾ ಅಪ್ರೆಂಟಿಸ್​ - ಡಿಪ್ಲೊಮಾ ಪದವಿ 8000
  • ಜನರಲ್​ ಸ್ಟ್ರೀಮ್​ ಗ್ರಾಜುಯೇಟ್ಸ್​ ಅಪ್ರೆಂಟಿಸ್​- ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ 9000

ವಯೋಮಿತಿ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಅಪ್ರೆಂಟಿಸ್​ಶಿಪ್​ ನಿಯಮದಂತೆ ಮತ್ತು ಅಪ್ರೆಂಟಿಸ್​ ಕಾಯ್ದೆ ಅನ್ವಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗುವುದು

ತರಬೇತಿ ಅವಧಿ: ಅಪ್ರೆಂಟಿಸ್​ಶಿಪ್​ (ತಿದ್ದುಪಡಿ) ಕಾಯ್ದೆ 1973 ಅನುಸಾರ ಈ ಅಪ್ರೆಂಟಿಸ್​ ತರಬೇತಿ ಅವಧಿ ಒಂದು ವರ್ಷದ್ದಾಗಿದೆ.

ಹುದ್ದೆಗೆ ಆಯ್ಕೆ: ಈ ಹುದ್ದೆಗೆ ಅಭ್ಯರ್ಥಿಗಳು ನಿಗದಿಸಿರುವ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಮೇಲೆ ಅಂದರೆ ಮೆರಿಟ್​ ಲಿಸ್ಟ್​ ಮೇಲೆ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ನ್ಯಾಷನಲ್​ ವೆಬ್​ ಪೋರ್ಟಲ್​ನಲ್ಲಿ (ಎನ್​ಎಟಿಎಸ್​) ಲಾಗಿನ್​ ಆಗಿದ್ದು, ಅದರ ಮೂಲಕ mescom.karnataka.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಅಭ್ಯರ್ಥಿಗಳು ನ್ಯಾಷನಲ್​ ವೆಬ್​ ಪೋರ್ಟಲ್​ನಲ್ಲಿ ಲಾಗಿನ್​​ ಆಗದೇ ಇದ್ದರೆ, www.boat-srp.com ಅಲ್ಲಿ ಅಪ್ಲಿಕೇಷನ್​ ಫಾರ್ಮ್​ ಪಡೆಯಬಹುದು. ಹೆಚ್ಚಿನ ಮಾಹಿತಿಗೆ studentquery@boat-srp.com, knplacement@boat-srp.com ಈ ಇಮೇಲ್​ ವಿಳಾಸಕ್ಕೆ ಸಂಪರ್ಕಿಸಬಹುದು.

ಈ ಹುದ್ದೆಗೆ ಆಗಸ್ಟ್​ 19ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಸೆಪ್ಟೆಂಬರ್​ 12 ಆಗಿದೆ. ಎನ್​ಎಟಿಎಸ್​ನಲ್ಲಿ ಎನ್​ರೋಲ್​ ಮಾಡಲು ಕಡೆಯ ದಿನಾಂಕ ಸೆಪ್ಟೆಂಬರ್​ 6 ಆಗಿದೆ. ಸೆಪ್ಟೆಂಬರ್​ 19ಕ್ಕೆ ಶಾರ್ಟ್​ಲಿಸ್ಟ್​ ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ: Indian post Recruitment: ಭಾರತೀಯ ಅಂಚೆ ಇಲಾಖೆಯಲ್ಲಿದೆ ಡ್ರೈವರ್​ ಹುದ್ದೆ; 10ನೇ ತರಗತಿ ಆದವರಿಗೆ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.