ETV Bharat / state

ಕನ್ನಡ ಭಾಷೆ ಅಭಿವೃದ್ಧಿ, ಡಿಜಿಟಲೀಕರಣಕ್ಕೆ 2 ಕೋಟಿ ರೂ.ಯೋಜನೆ

ಕನ್ನಡ ಭಾಷೆ ಅಭಿವೃದ್ಧಿ ಹಾಗೂ ಡಿಜಿಟಲೀಕರಣಕ್ಕೆ 2 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

digitization and Kannada language development, 2 crore for digitization and Kannada language development, Karnataka budget, Karnataka budget 20201-22, Karnataka budget 2021, Karnataka budget 2021 news, ಕನ್ನಡ ಭಾಷೆ ಅಭಿವೃದ್ಧಿ ಹಾಗೂ ಡಿಜಿಟಲೀಕರಣ, ಕನ್ನಡ ಭಾಷೆ ಅಭಿವೃದ್ಧಿ ಹಾಗೂ ಡಿಜಿಟಲೀಕರಣಕ್ಕೆ 2 ಕೋಟಿ, ಕರ್ನಾಟಕ ಬಜೆಟ್​, ಕರ್ನಾಟಕ ಬಜೆಟ್ 2021-22, ಕರ್ನಾಟಕ ಬಜೆಟ್​ 2021, ಕರ್ನಾಟಕ ಬಜೆಟ್​ 2021 ಸುದ್ದಿ,
ಕನ್ನಡ ಭಾಷೆ ಅಭಿವೃದ್ಧಿ ಹಾಗೂ ಡಿಜಿಟಲೀಕರಣಕ್ಕೆ 2 ಕೋಟಿ ರೂ.ಯೋಜನೆ
author img

By

Published : Mar 8, 2021, 1:59 PM IST

ಬೆಂಗಳೂರು: ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸಲು ಹಾಗೂ ತಾಂತ್ರಿಕವಾಗಿ ಬಳಸಲು ಅನುಕೂಲವಾಗುವಂತೆ ತಾಂತ್ರಿಕ ಪರಿಕರಗಳ ಸೂಟ್ ಯೋಜನೆ ಅನುಷ್ಠಾನಗೊಳಿಸಲು 2 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಕನ್ನಡ ಲಿಪಿ ಆಧಾರಿತ ಯುಆರ್​ಎಲ್​ಗಳು ಮತ್ತು ಕನ್ನಡ ಇ-ಮೇಲ್ ಸೇವೆ, ಕನ್ನಡ ಶಬ್ದಕೋಶ, ಇ - ಕನ್ನಡ ಕಲಿಕಾ ಅಕಾಡೆಮಿ, ಯಾಂತ್ರಿಕ ಅನುವಾದ, ಲಿಪ್ಯಂತರ, ಕಾಗುಣಿತ ಪರಿಶೀಲನೆ, ಪಠ್ಯದಿಂದ ಪಠಣ, ಪಠಣದಿಂದ ಪಠ್ಯ ತಂತ್ರಾಂಶ, ಹೈಫನೇಷನ್, ಒಸಿಆರ್ ಉಪಕರಣಗಳು, ಕನ್ನಡ ಅಕ್ಷರ ಶೈಲಿಯ ಸಮೂಹ ಕನ್ನಡ ಚಾಟ್ - ಬಾಟ್ ತಂತ್ರಾಂಶ ಹೊಂದಿರುವ ಕನ್ನಡ ಭಾಷೆಯ ತಾಂತ್ರಿಕ ಪರಿಕರಗಳ ಸೂಟ್ ಅಭಿವೃದ್ಧಿಗೆ 2 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳ ಜಾಹೀರಾತು ಮತ್ತು ಪ್ರಕಟಣೆಗಳನ್ನು ಸಂಯೋಜಿಸಿ ಸೃಜನಶೀಲಗೊಳಿಸಲು ಕೇಂದ್ರದ ಮಾದರಿಯಲ್ಲಿ ಬ್ರ್ಯಾಂಡ್ ಪ್ರಮೋಷನ್ ಕೌನ್ಸಿಲ್ ರಚನೆ ಮಾಡಲಾಗುವುದು.

ರಾಜ್ಯದ ಚಲನಚಿತ್ರರಂಗ ಪ್ರೋತ್ಸಾಹಿಸಲು ಹಾಗೂ ವಿವಿಧ ಇಲಾಖೆಗಳಿಂದ ಚಿತ್ರೀಕರಣಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಏಕಗವಾಕ್ಷಿ ಯೋಜನೆಯಡಿ ಸರಳೀಕರಿಸಲು ಸೇವಾ ಸಿಂಧೂ ಪೋರ್ಟಲ್ ಸ್ಥಾಪನೆ ಮಾಡಲಾಗುವುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.