ETV Bharat / state

ಸೂರಿಗಾಗಿ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್: ಜುಲೈ 25ಕ್ಕೆ 1,967 ಮನೆಗಳು ಲೋಕಾರ್ಪಣೆ - Houses launched by Housing Department

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಸೂರಿಲ್ಲದವರಿಗೆ ಸೂರು' ಎಂಬ ಧ್ಯೇಯದಡಿ 2016-17 ಮತ್ತು 2017-18ರಲ್ಲಿ 'ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ'ಗೆ ಕೇಂದ್ರ ಸರ್ಕಾರವು ಪ್ರತಿ ಮನೆಯ ನಿರ್ಮಾಣಕ್ಕೆ 1.50 ಲಕ್ಷ ರೂ.ಗಳನ್ನು ನೀಡಲಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

1967-houses-of-department-of-housing-launched-on-july-25
ಸೂರಿಗಾಗಿ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್: ಜುಲೈ 25ಕ್ಕೆ 1,967 ಮನೆಗಳು ಲೋಕಾರ್ಪಣೆ
author img

By

Published : Jun 24, 2022, 9:14 PM IST

ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿರುವ 1,967 ಮನೆಗಳನ್ನು ಜುಲೈ 25ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ನಗರದ ದಾಸರಹಳ್ಳಿ, ಯಲಹಂಕ, ಬ್ಯಾಟರಾಯನಪುರ, ಮಹಾದೇವಪುರ ಮತ್ತು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಮಿಸಲಾಗುತ್ತಿರುವ ಬಹುಮಹಡಿ ಕಟ್ಟಡಗಳ ಕಾಮಗಾರಿ ಸ್ಥಳಕ್ಕೆ ವಸತಿ ಸಚಿವ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಸೂರಿಲ್ಲದವರಿಗೆ ಸೂರು' ಎಂಬ ಧ್ಯೇಯದಡಿ 2016-17 ಮತ್ತು 2017-18 ರಲ್ಲಿ 'ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ'ಗೆ ಕೇಂದ್ರ ಸರ್ಕಾರವು ಪ್ರತಿ ಮನೆಯ ನಿರ್ಮಾಣಕ್ಕೆ 1.50 ಲಕ್ಷ ರೂ.ಗಳನ್ನು ನೀಡಲಿದ್ದು, ಅದರಂತೆ 1 ಲಕ್ಷ ಮನೆಗಳ ನಿರ್ಮಾಣಕ್ಕೆ ರೂ. 1,500 ಕೋಟಿ ಅನುದಾನ ನಿಗದಿಯಾಗಿದೆ. ಈ ಪೈಕಿ ಮೊದಲನೇ ಕಂತಿನ ರೂ. 600 ಕೋಟಿ ಅನುದಾನ ಬಿಡುಗಡೆಯಾಗಿ, ಕಂದಾಯ ಇಲಾಖೆಯಿಂದ 553 ಎಕರೆ ಜಮೀನನ್ನು ನಿಗಮಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದರು.

ಅರ್ಹ ಬಡವರಿಗೆ ಮನೆ: ವಸತಿ ಇಲಾಖೆ ನಿರ್ಮಿಸುತ್ತಿರುವ ಮನೆಗಳನ್ನು ಕೂಲಿ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್ ನೌಕರರು, ಬೀಡಿ ಕಟ್ಟುವವರು, ಬೀದಿ ಬದಿ ವ್ಯಾಪಾರಿಗಳು ಸೇರಿ ಅರ್ಹ ಬಡವರಿಗೆ ಮನೆಗಳನ್ನು ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ಜನರು ರೂ.5.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 5 ಲಕ್ಷ ರೂ. ಪಾವತಿಸಬೇಕಾಗಿದ್ದು, ಮಧ್ಯಮ ವರ್ಗದವರು ಯಾವ ರೀತಿಯಲ್ಲಿ ಜೀವನ ನಡೆಸುತ್ತಾರೋ ಅದೇ ರೀತಿಯಲ್ಲಿ ಬಡವರು ಸಹ ಬದುಕಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.

ಮಾರ್ಚ್ ಒಳಗೆ 25,000 ಮನೆ: ಒಂದು ತಿಂಗಳೊಳಗೆ ಫಲಾನುಭವಿಗಳಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಲಾಗುವುದು. ರೂ. 1 ಲಕ್ಷ ನೀಡಿರುವ ಫಲಾನುಭವಿಗಳಿಗೆ ಮನೆಗಳನ್ನು ನೀಡಿ ತಕ್ಷಣವೇ ಬ್ಯಾಂಕ್ ಲೋನ್ ಮಾಡಿಸಿಕೊಡಲಾಗುವುದು. ಯಾವುದೇ ಕಾರಣಕ್ಕೂ ಗುತ್ತಿಗೆದಾರರಿಗೆ ಹಾಗೂ ಫಲಾನುಭವಿಗಳಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿಗಳು ಹಣವನ್ನು ಒದಗಿಸಿದ್ದಾರೆ. 7ರಿಂದ 8 ಸಾವಿರ ಮನೆಗಳನ್ನು ಅಕ್ಟೋಬರ್ ಅವಧಿಗೆ ಹಾಗೂ ಮಾರ್ಚ್ ಒಳಗಡೆ ಸುಮಾರು 25,000 (1BHK) ಮನೆಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ನವೆಂಬರ್ ತಿಂಗಳೊಳಗೆ 46,000 ಮನೆಗಳಿಗೆ ಹೆಚ್ಚುವರಿ 7,000 ಮನೆಗಳ ಸೇರಿಸಿ 53,000 ಮನೆಗಳ ನಿರ್ಮಾಣ ಮಾಡುವುದರ ಜೊತೆಗೆ ಶೇ 60 ಮನೆಗಳನ್ನು ವಾಸಕ್ಕೆ ಯೋಗ್ಯವಾಗಿ ಮಾಡಿ ಫಲಾನುಭವಿಗಳಿಗೆ ನೀಡುವಂತ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂಗೆ ಸಾಹಿತಿಗಳಿಂದ ಬಹಿರಂಗ ಪತ್ರ : ಬಸವ ಜಯಂತಿಯಂತೆ ಈದ್ ಆಚರಿಸಿ ಶಾಂತಿ ಮರು ಸ್ಥಾಪನೆಗೆ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.