ದೇವನಹಳ್ಳಿ(ಬೆಂಗಳೂರು): ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನ ಕರೆತರುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಯುದ್ದ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ 703 ಕನ್ನಡಿಗರಲ್ಲಿ, ಸದ್ಯ 193 ವಿದ್ಯಾರ್ಥಿಗಳು ಬೆಂಗಳೂರು ತಲುಪಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನ 'ಆಪರೇಷನ್ ಗಂಗಾ' ಯೋಜನೆಯಡಿ ಭಾರತ ಸರ್ಕಾರ ಕರೆತರುವ ವ್ಯವಸ್ಥೆ ಮಾಡುತ್ತಿದೆ. ವಿದ್ಯಾಭ್ಯಾಸಕ್ಕಾಗಿ ಕರ್ನಾಟಕದಿಂದ ಉಕ್ರೇನ್ಗೆ ತೆರಳಿದ 703 ಕನ್ನಡಿಗರಲ್ಲಿ ಈಗಾಗಲೇ 193 ವಿದ್ಯಾರ್ಥಿಗಳು ಬೆಂಗಳೂರು ತಲುಪಿದ್ದಾರೆ.
ನಿನ್ನೆ(ಗುರುವಾರ) ಒಂದೇ ದಿನ 104 ವಿದ್ಯಾರ್ಥಿಗಳು ಬಂದಿದ್ದಾರೆ. ಇಂದು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 16 ವಿಮಾನಗಳು ಬರಲಿದ್ದು, 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರು ತಲುಪಲಿದ್ದಾರೆ ಎಂದು ರಾಜ್ಯ ನೋಡಲ್ ಅಧಿಕಾರಿ ಮನೋಜ್ ಮಾಹಿತಿ ನೀಡಿದ್ದಾರೆ.
ಭಾರತ ಸರ್ಕಾರದ ಎಂಬಸಿಯಿಂದ ಉಕ್ರೇನ್ ಗಡಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರನ್ನು ಕರೆ ತರುವ ವ್ಯವಸ್ಥೆ ಮಾಡಲಾಗಿದ್ದು, ಪೋಷಕರು ಧೈರ್ಯವಾಗಿರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 'ನನ್ನೊಂದಿಗೆ ನೇರವಾಗಿ ಮಾತುಕತೆ ನಡೆಸಿ' ರಷ್ಯಾ ಅಧ್ಯಕ್ಷರಿಗೆ ಸವಾಲು ಹಾಕಿದ ವೊಲೊಡಿಮಿರ್