ಬೆಂಗಳೂರು: ನಗರದಲ್ಲಿ 1,221 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 180 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ಪ್ರಮುಖವಾಗಿ ಬೊಮ್ಮನಹಳ್ಳಿಯಲ್ಲಿ 119, ದಾಸರಹಳ್ಳಿ 35, ಬೆಂಗಳೂರು ಪೂರ್ವ 150, ಮಹಾದೇವಪುರ 187, ಆರ್.ಆರ್. ನಗರ 95, ಬೆಂಗಳೂರು ದಕ್ಷಿಣ 129, ಬೆಂಗಳೂರು ಪಶ್ಚಿಮ 104, ಯಲಹಂಕದ 80 ಮಂದಿಗೆ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ನಿನ್ನೆ ನಗರದಲ್ಲಿ 1,611 ಪ್ರಕರಣಗಳು ಪತ್ತೆಯಾಗಿ, 19 ಮಂದಿ ಮೃತಪಟ್ಟಿದ್ದರು. ಸದ್ಯ 79,261 ಸಕ್ರಿಯ ಪ್ರಕರಣಗಳಿವೆ. ಜೂನ್ 15ರಂದು 64,962 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 57,431 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 2.52%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 1.73% ಇದೆ.
ನಿನ್ನೆಯವರೆಗೂ ಒಟ್ಟು 14,107 ಹಾಸಿಗೆಗಳ ಪೈಕಿ 11,866 ಹಾಸಿಗೆಗಳು ಲಭ್ಯ ಇದ್ದು, 2,241 ಹಾಸಿಗೆಗಳು ಭರ್ತಿಯಾಗಿವೆ. 255 ಮಂದಿ ಐಸಿಯುನಲ್ಲಿ ಹಾಗೂ ಐಸಿಯು+ವೆಂಟಿಲೇಟರ್ನಲ್ಲಿ 402 ಮಂದಿ, ಹೆಚ್ಡಿಯುನಲ್ಲಿ 935 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ತಮ್ಮೂರಿಗೆ ಕೊರೊನಾ ಕಾಲಿಡಲು ಬಿಡದ ಕೋಲೆರಂಗದ ಜನ!