HMD Fusion Launch: ಸ್ಮಾರ್ಟ್‌ಫೋನ್ ತಯಾರಕ ಹೆಚ್ಎಂಡಿ ತನ್ನ ಹೊಸ ಫೋನ್ ಫ್ಯೂಷನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ, 8GB RAM ಜೊತೆಗೆ 256GB ಸ್ಟೋರೇಜ್ ಒದಗಿಸಲಾಗಿದೆ. 108 ಮೆಗಾಪಿಕ್ಸೆಲ್‌ಗಳ ಪ್ರಾಥಮಿಕ ಕ್ಯಾಮೆರಾ ಹೊಂದಿದ್ದು, ಲುಕ್ ಸಾಕಷ್ಟು ವಿಶಿಷ್ಟ ಮತ್ತು ಆಕರ್ಷಕವಾಗಿದೆ.
ಈ ಫೋನ್‌ನಲ್ಲಿ 6.56 ಇಂಚಿನ HD+ ಡಿಸ್ಪ್ಲೇ ಒದಗಿಸಲಾಗಿದೆ. ಡಿಸ್ಪ್ಲೇ 90 Hzನ ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಹೆಚ್ಎಂಡಿ ಫ್ಯೂಷನ್ ಗೇಮಿಂಗ್ ಔಟ್‌ಫಿಟ್ ಮತ್ತು ಹೆಚ್ಎಂಡಿ ಫ್ಯೂಷನ್ ಫ್ಲ್ಯಾಶಿ ಔಟ್‌ಫಿಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್ ಹೊಂದಿದೆ.
ಕ್ಯಾಮೆರಾ ಸೆಟಪ್: ಹೆಚ್ಎಂಡಿ ಫ್ಯೂಷನ್ 108-ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ನ ಫ್ರಂಟ್ ಕ್ಯಾಮೆರಾ ಇದೆ. ಫೋಟೊಗ್ರಫಿಗಾಗಿ ನೈಟ್ ಮೋಡ್, ಫ್ಲ್ಯಾಶಿ ಶಾಟ್ 2.0 ನಂತಹ ವೈಶಿಷ್ಟ್ಯಗಳು ಇದರಲ್ಲಿವೆ.
ಪವರ್ಫುಲ್ ಬ್ಯಾಟರಿ: 5000mAh ಪವರ್ಫುಲ್ ಬ್ಯಾಟರಿ ಹೊಂದಿದೆ. ಇದು 33W ಸ್ಪೀಡ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಹೆಚ್ಎಂಡಿ ಫ್ಯೂಷನ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 2 ವರ್ಷಗಳ ಸಾಫ್ಟ್‌ವೇರ್ ಅಪ್ಡೇಟ್ಗಳು ಮತ್ತು 3 ವರ್ಷಗಳ ಭದ್ರತಾ ಅಪ್ಡೇಟ್ಗಳನ್ನು ಪಡೆಯುತ್ತದೆ.
ಬೆಲೆ ಎಷ್ಟು?: ಹೆಚ್ಎಂಡಿ ಫ್ಯೂಷನ್‌ನ ಬೆಲೆ 17,999 ರೂ ಇದ್ದು, ಸದ್ಯ 15,999 ವಿಶೇಷ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಈ ಬೆಲೆ ಸೀಮಿತ ಅವಧಿಗೆ ಮಾತ್ರ. ಫೋನ್ ಜೊತೆಗೆ, ಕಂಪನಿಯು ಗೇಮಿಂಗ್ ಮತ್ತು ಫ್ಲ್ಯಾಶಿ ಔಟ್‌ಫಿಟ್ ನೀಡುತ್ತಿದೆ. ನವೆಂಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭವಾಗಲಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ ಹಾಗೂ ಇ-ಕಾಮರ್ಸ್ ಮೂಲಕವೂ ಸ್ಮಾರ್ಟ್‌ಫೋನ್ ಅನ್ನು ಖರೀದಿಸಬಹುದು.
ಇದನ್ನೂ ಓದಿ: ಶೀಘ್ರವೇ ಪೊಕೊ ಸೀರಿಸ್ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ