ಬೆಂಗಳೂರು: ರಾಜ್ಯದಲ್ಲಿಂದು 1,715 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 9,70,202ಕ್ಕೆ ಮತ್ತು ಮೃತರ ಸಂಖ್ಯೆ 12,434ಕ್ಕೆ ಏರಿಕೆಯಾಗಿದೆ.
1,048 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 9,44,256 ಜನರು ಚೇತರಿಸಿಕೊಂಡಿದ್ದಾರೆ. 13,493 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, 137 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 1.68ರಷ್ಟು ಇದ್ದರೆ ಮೃತಪಟ್ಟವರ ಪ್ರಮಾಣ ಶೇ. 0.11ರಷ್ಟು ಇದೆ.
ಓದಿ: ನಿನ್ನೆ ಒಂದೇ ದಿನ 197 ಜನರು ಸಾವು, 43,846 ಹೊಸ ಕೇಸ್; 4.46 ಕೋಟಿ ಮಂದಿಗೆ ಲಸಿಕೆ
ಯುಕೆಯಿಂದ ಇಂದು 274 ಪ್ರಯಾಣಿಕರು ಆಗಮಿಸಿದ್ದಾರೆ. ಈವರೆಗೆ ಬಂದಿದ್ದ ಪ್ರಯಾಣಿಕರಲ್ಲಿ 64 ಮಂದಿಗೆ ಪಾಸಿಟಿವ್ ವರದಿ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ತಗುಲಿದೆ. 29 ಜನರಿಗೆ ರೂಪಾಂತರ ಕೊರೊನಾ ಹರಡಿದೆ. ಇತ್ತ ದಕ್ಷಿಣ ಆಫ್ರಿಕಾದ ಸೋಂಕು ಮೂವರಲ್ಲಿ ಕಾಣಿಸಿಕೊಂಡಿತ್ತು.