ETV Bharat / state

ಶಾಕಿಂಗ್​: ಸಂಜಯ್​ ಗಾಂಧಿ ಆಸ್ಪತ್ರೆಯ 17 ಸಿಬ್ಬಂದಿಗೆ ಕೊರೊನಾ ಸೋಂಕು ದೃಢ..! - ಬೆಂಗಳೂರು ಕೊರೊನಾ ಲೇಟೆಸ್ಟ್​ ನ್ಯೂಸ್​

ಬೆಂಗಳೂರಲ್ಲಿ ಮಹಾಮಾರಿ ಕೊರೊನಾ ರೌದ್ರನರ್ತನ ಮುಂದುವರಿದಿದೆ. ಜನಸಾಮಾನ್ಯರಿಂದ ಹಿಡಿದು ಕೊರೊನಾ ವಾರಿಯರ್ಸ್​ಗೆ ಬೆನ್ನುಬಿಡದೇ ಕಾಡುತ್ತಿದೆ. ಇದೀಗ ಸಂಜಯ್​ ಗಾಂಧಿ ಆಸ್ಪತ್ರೆಯ 17 ಮಂದಿಗೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

SANJAY GANDI HOSPITAL
ಸಂಜಯ್​ ಗಾಂಧಿ ಆಸ್ಪತ್ರೆ ವೈದ್ಯರಿಗೆ ಕೊರೊನಾ
author img

By

Published : Jul 15, 2020, 1:44 PM IST

ಬೆಂಗಳೂರು: ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗೇ ಮಹಾಮಾರಿ ಬೆಂಬಿಡದೇ ಕಾಡುತ್ತಿದೆ. ಇದೀಗ ನಗರದ ಪ್ರತಿಷ್ಠಿತ ಸಂಜಯ್​ ಗಾಂಧಿ ಆಸ್ಪತ್ರೆಗೆ 17 ಮಂದಿ ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ.

ಈಗಾಗಲೇ ಹಲವು ಆಸ್ಪತ್ರೆಯ ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ‌ ತಗುಲಿದೆ. ಸಂಜಯ್​ ಗಾಂಧಿ ಆಸ್ಪತ್ರೆಯ 17 ಸಿಬ್ಬಂದಿಗೆ ಸೋಂಕು ತಗುಲಿದೆ. 5 ಜನ ವೈದ್ಯರು ಹಾಗೂ 12 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಎಲ್ಲರೂ ಕೂಡ ಎ ಸಿಂಪ್ಟಮ್ಯಾಟಿಕ್ ಸೋಂಕಿತರಾಗಿದ್ದಾರೆ. ಇತ್ತ ರೋಗಿಗಳಿಗೆ ಚಿಕಿತ್ಸೆ ನೀಡುವ ವೇಳೆ ವೈದ್ಯರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಒಮ್ಮೆಲೇ ಇಷ್ಟು ಜನ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಬಂದಿರುವ ಕಾರಣ ರೋಗಿಗಳು ಪರದಾಡುವಂತಾಗಿದೆ.

ಸದ್ಯ ಸಂಜಯ್​ ಗಾಂಧಿ ಆಸ್ಪತ್ರೆ ರೋಗಿಗಳನ್ನು ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿದ್ದು, ಈವರೆಗೆ ಆಸ್ಪತ್ರೆಯಲ್ಲಿ 35 ಜನರಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.