ಬೆಂಗಳೂರು: ಜನರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಪರಮೇಶ್ವರಯ್ಯ, ಜಗದೀಶ್, ಶಶಿಕುಮಾರ್ ಬಂಧಿತರು. ಈ ಆರೋಪಿಗಳು ಬೆಳಗ್ಗೆ ಅಥವಾ ಸಂಜೆಯ ಹೊತ್ತಲ್ಲಿ ವಾಕಿಂಗ್ ಮಾಡುತ್ತಿದ್ದ ಜನರಿಗೆ ಚಾಕು ತೋರಿಸಿ ಸರ ಕಿತ್ತುಕೊಳ್ತಿದ್ದರು. ಸದ್ಯ ಇವರಿಂದ 17 ಲಕ್ಷ ರೂ ಮೌಲ್ಯದ 247 ಗ್ರಾಂ ಚಿನ್ನಾಭರಣ, ಒಂದು ಚಾಕು ಮತ್ತು ಒಂದು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಮೆಜಾನ್ ಉದ್ಯೋಗಿಗಳೆಂದು ಜನರನ್ನು ವಂಚಿಸುತ್ತಿದ್ದ 22 ಮಂದಿ ಬಂಧನ