ETV Bharat / state

16ನೇ ಹಣಕಾಸು ಆಯೋಗದ ಜಿಎಸ್​ಟಿ ಕೌನ್ಸಿಲ್​ನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ: ಸಿಎಂ ಸಿದ್ದರಾಮಯ್ಯ ಭರವಸೆ - ಈಟಿವಿ ಭಾರತ್​ ಕನ್ನಡ ನ್ಯೂಸ್​

15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
author img

By

Published : Jul 6, 2023, 4:41 PM IST

16 ನೇ ಹಣಕಾಸು ಆಯೋಗದ ಅನ್ಯಾಯ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಿದ್ದೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಆದಾಯ ಹಂಚಿಕೆಯ ಸೂತ್ರವನ್ನು ಶಿಫಾರಸು ಮಾಡುವುದಕ್ಕೆ ಪ್ರತಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ಜಾರಿಯಾಗುತ್ತದೆ. ಈ ಹಿಂದಿನ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ಪ್ರಸುತ್ತ 16 ನೇ ಹಣಕಾಸು ಆಯೋಗದಲ್ಲಿ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಲಿದ್ದೇವೆ. ಜಿಎಸ್​ಟಿ ಕೌನ್ಸಿಲ್​ನಲ್ಲಿಯೂ ಈ ಹಿಂದೆ ರಾಜ್ಯಕ್ಕೆ ಆಗಿರುವ ಅನ್ಯಾಯ ಎತ್ತಿ ತೋರಿಸಿ, ಮತ್ತೆ ಅನ್ಯಾಯ ಆಗದಂತೆ ನೋಡಿಕೊಳ್ಳುವ ಪ್ರಯತ್ನ ಮಾಡಲಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

15 ನೇ ಹಣಕಾಸು ಆಯೋಗ ರಚಿಸಿ ರಾಜ್ಯಗಳು ಕೊಡುವ ತೆರಿಗೆಯಲ್ಲಿ ಕೇಂದ್ರದ ಪಾಲು ಎಷ್ಟು? ರಾಜ್ಯಕ್ಕೆ ಎಷ್ಟು? ಎನ್ನುವ ತೀರ್ಮಾನ ಮಾಡಲಿದೆ. ಶೇ. 4.71 ರಷ್ಟು ತೆರಿಗೆ 14ನೇ ಆಯೋಗದಲ್ಲಿ ಬಂದರೆ, 15 ನೇ ಆಯೋಗದಲ್ಲಿ ಶೇ.3.65 ರಷ್ಟು ತೆರಿಗೆ ಬಂತು. ಎರಡು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಲ್ಲಿ ಶೇ.1.06 ರಷ್ಟು ಕಡಿಮೆ ಬಂದಿದ್ದು, ನಮಗೆ ಅನ್ಯಾಯವಾಗಿದೆ. 15 ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5,495 ಕೋಟಿ ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ನೀಡಲು ಶಿಫಾರಸು ಮಾಡಿತ್ತು. ಇಷ್ಟು ಹಣ ಪಡೆದುಕೊಳ್ಳಲು ರಾಜ್ಯ ಅರ್ಹವಾಗಿತ್ತು.

ಆದರೆ, ಹಣಕಾಸು ಸಚಿವರು ಕೊಡಲಾಗಲ್ಲ ಎಂದು ಅಂತಿಮ ವರದಿಯಲ್ಲಿ ಸೇರಿಸದಂತೆ ಸೂಚಿಸಿದರು. ಆ ಕಾರಣಕ್ಕೆ ವಿಶೇಷ ಅನುದಾನ ರದ್ದಾಯಿತು. ರಾಜ್ಯ ಸರ್ಕಾರಕ್ಕೆ ಆಗ ಅನೇಕ ಬಾರಿ ಹೇಳಿದ್ದೆ, ಒತ್ತಾಯ ಮಾಡಿ ಪಡೆಯಿರಿ ಎಂದರೆ ಪತ್ರ ಬರೆಯುತ್ತೇವೆ. ಕೇಳುತ್ತೇವೆ ಎಂದು ಕೈಚಲ್ಲಿದರು. ಹಾಗಾಗಿ ನಮಗೆ ಆ ಹಣ ಬರಲಿಲ್ಲ. ಆದರೆ, ಈಗ ನಾವು 16 ನೇ ಹಣಕಾಸು ಆಯೋಗದ ರಚನೆ ವೇಳೆ ನಾವು ನಮ್ಮ ರಾಜ್ಯದ ಸ್ಪಷ್ಟ ನಿಲುವನ್ನು ತಿಳಿಸುತ್ತೇವೆ. ರಾಜ್ಯಕ್ಕೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ ವಹಿಸಲಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

2018-19 ರಲ್ಲಿ 33094 ಕೋಟಿ ತೆರಿಗೆ ಇತ್ತು. 2023-24 ಕ್ಕೆ 34952 ಕೋಟಿ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಆದರೇ ಕೇಂದ್ರ ನಮಗೆ ನ್ಯಾಯವಾಗಿ ಕೊಡಬೇಕಾದ ಪಾಲು ಕೊಡುತ್ತಿಲ್ಲ. 14 ನೇ ಆಯೋಗದಲ್ಲಿ ಬಂದಿರುವುದಕ್ಕಿಂತ 15 ರಲ್ಲಿ ಕಡಿಮೆಯಾಗಿದೆ. ಕೇಂದ್ರದ ಮೇಲೆ ನಾನು ಆರೋಪ ಮಾಡಿದರೆ ಬಿಜೆಪಿಯವರಿಗೆ ಕೋಪ ಬರಲಿದೆ. 5 ಸಾವಿರ ಕೋಟಿ ಯಾಕೆ ಪಡೆಯಲಿಲ್ಲ. ಇದು ರಾಜಕಾರಣ ಮಾಡುವ ವಿಷಯ ಅಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಪಡೆಯಲು ಬಿಜೆಪಿಯವರು ವಿಫಲರಾದರು. ಇದು ವಾಸ್ತವ ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ಕುಟುಕಿದರು.

ಸೆಸ್ ಅಂಡ್ ಸರ್ಜಾರ್ಚ್ ಪಾಲು ನಮಗೆ ಕೊಡಲ್ಲ. ಆದಾಯ ತೆರಿಗೆ ಇತ್ಯಾದಿ ತೆರಿಗೆಯಲ್ಲಿ ನಮಗೆ ಪಾಲು ಕೊಡಬೇಕು. ಹಾಗಾಗಿ ಸೆಸ್, ಸರ್ ಜಾರ್ಜ್ ಹಾಕುತ್ತಿದ್ದಾರೆ. ತೆರಿಗೆ ಪಾಲು ವಿಷಯದಲ್ಲಿ ಕೇಂದ್ರ ಮಲತಾಯಿ ಧೋರಣೆ ತಳೆಯುತ್ತಿದೆ. ನಾವು ಉತ್ತಮ ಸ್ಥಿತಿಯಲ್ಲಿರುವ ಕಾರಣಕ್ಕೆ ಈ ಶಿಕ್ಷೆ, ರಾಜ್ಯಕ್ಕೆ ಅನ್ಯಾಯವಾಗಲು ಯಾವ ಪಕ್ಷವೂ ಬಿಡಬಾರದು. ಹಣಕಾಸು ಸಚಿವರು ರಾಜ್ಯದಿಂದ ಆಯ್ಕೆಯಾದರೂ ಅಂತಿಮ ವರದಿಯಲ್ಲಿ ಅನುದಾನ ಸೇರಿಸಬೇಡಿ ಎಂದರು. ಹಾಗಾಗಿ 5 ಸಾವಿರ ಕೋಟಿ ನಮ್ಮ ಕೈ ತಪ್ಪಿದೆ. ಈಗ 16 ನೇ ಹಣಕಾಸು ಆಯೋಗ ರಚನೆ ವೇಳೆ ನಾವು ಸಮರ್ಥವಾಗಿ ಕೆಲಸ ಮಾಡಲಿದ್ದೇವೆ. ನಮಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ನಿರ್ಮಲಾ ಸೀತಾರಾಮನ್ ಹೆಸರು ಪ್ರಸ್ತಾಪಕ್ಕೆ ಆಕ್ಷೇಪ : ಆರ್ಥಿಕ ಸ್ಥಿತಿ ಸರಿ ಇಲ್ಲದ ರಾಜ್ಯಗಳಿಗೆ ಹಣಕಾಸು ಆಯೋಗ ಪ್ರಾಶಸ್ತ್ಯ ನೀಡಿ, ಆರ್ಥಿಕ ಸ್ಥಿತಿ ಉತ್ತಮವಾಗಿರುವ ನಮ್ಮ ರಾಜ್ಯವನ್ನು ಕಡೆಗಣಿಸುತ್ತಿರುವ ವಿಷಯವನ್ನು ಕೇಂದ್ರ ಹಣಕಾಸು ಆಯೋಗದ ಗಮನಕ್ಕೆ ತರುತ್ತೇವೆ. ಹಣಕಾಸು ಆಯೋಗದ ಪ್ರತಿನಿಧಿಗಳ ಮುಂದೆ ಸಮರ್ಥವಾಗಿ ವಾದ ಮಂಡಿಸಿ ಮತ್ತೆ ಅನ್ಯಾಯ ಆಗದಂತೆ ನೋಡಿಕೊಳ್ಳಲಿದ್ದೇವೆ. ರಾಜ್ಯಕ್ಕೆ ಅನ್ಯಾಯವಾಗದಂತೆ ಎಲ್ಲ ಹೆಜ್ಜೆಯನ್ನು ಸರ್ಕಾರ ಇಡಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಜೆಡಿಎಸ್ ಸದಸ್ಯ ಟಿಎ ಶರವಣ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದಿಂದ ಹೋಗುವ ಎಲ್ಲ ತೆರಿಗೆ ಮಾಹಿತಿ ನಮಗೆ ಬರಲ್ಲ. ಸೆಸ್, ಸರ್ ಚಾರ್ಜ್ ನಮಗೆ ಬರಲ್ಲ. ಮಾಹಿತಿ ತಂತ್ರಜ್ಞಾನದಲ್ಲಿ ಹೋಗುವ ಮಾಹಿತಿ ನಮಗೆ ಸಿಗಲ್ಲ. ಸೆಂಟ್ರಲ್ ಸೆಕ್ಟರ್​ನಲ್ಲಿ ಹೋಗುವ ತೆರಿಗೆ ಮಾಹಿತಿ ಇರಲ್ಲ. ಟೋಲ್ ಸಂಗ್ರಹವೂ ನಮ್ಮ ವ್ಯಾಪ್ತಿಗೆ ಬರಲ್ಲ. ಹಾಗಾಗಿ ಕೆಲವೊಂದು ತೆರಿಗೆ ಮಾಹಿತಿ ಇರಲಿದೆ. ಮತ್ತಷ್ಟು ಮಾಹಿತಿ ಇರಲ್ಲ. ಇದರಲ್ಲಿ ಯಾವ ಗೊಂದಲ ಇಲ್ಲ. ಹಾಗಾಗಿ ತೆರಿಗೆ ಪೂರ್ಣ ಪ್ರಮಾಣದ ಮಾಹಿತಿ ರಾಜ್ಯ ಸರ್ಕಾರದ ಬಳಿ ಇರಲ್ಲ ಎಂದು ಸರ್ಕಾರದ ಉತ್ತರವನ್ನು ಸಮರ್ಥಿಸಿಕೊಂಡರು.

ಸಿಎಂ ಸೀತಾರಾಮನ್​ ಹೆಸರು ಪ್ರಸ್ತಾಪಕ್ಕೆ ತೇಜಸ್ವಿನಿಗೌಡ ಆಕ್ಷೇಪ: ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ, ನಿರ್ಮಲಾ ಸೀತಾರಾಮನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅವರು ಇಲ್ಲಿಲ್ಲ. ಅವರು ಬಂದು ಸಮರ್ಥಿಸಿಕೊಳ್ಳಲಾಗಲ್ಲ. ಅವರ ಹೆಸರು ಪ್ರಸ್ತಾಪ ಸರಿಯಲ್ಲ. ಅಲ್ಲದೆ ನಮ್ಮಲ್ಲಿ ಪ್ರತಿಪಕ್ಷ ನಾಯಕರ ಆಯ್ಕೆಯಾಗಿಲ್ಲ. ಹಾಗಾಗಿ ನಾವು ಈಗ ಸೂಕ್ತ ಉತ್ತರ ನೀಡಲಾಗಿಲ್ಲ. ಬಜೆಟ್ ಮೇಲೆ ಮಾತನಾಡುವಾಗ ನಾವು ನಿರ್ಮಲಾ ಸೀತಾರಾಮನ್​ ಅವರಿಂದ ಮಾಹಿತಿ ಪಡೆದು ಸರಿಯಾದ ಉತ್ತರ ನೀಡಲಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಿರ್ಮಲಾ ಸೀತಾರಾಮನ್ ವಿರುದ್ಧ ಆರೋಪ ಮಾಡಿಲ್ಲ. ವಾಸ್ತವ ಹೇಳಿದ್ದೇನೆ ಅಷ್ಟೆ. ಅನುದಾನ ತಡೆದಿದ್ದು ಸತ್ಯವಲ್ಲವೇ, ಇದನ್ನು ಹೇಳುವುದು ತಪ್ಪಾ ಎಂದು ಸಮರ್ಥನೆ ಮಾಡಿಕೊಂಡರು. ಈ ವೇಳೆ, ಹಣಕಾಸು ಸಚಿವರು ಅನುದಾನ ಕೊಡಬೇಡಿ ಎಂದಿದ್ದಾರೆ ಎನ್ನುವ ಪದ ಬಳಸಿದ್ದಾರೆ. ಇದು ಸರಿಯಲ್ಲ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಧ್ಯಪ್ರವೇಶ ಮಾಡಿದ ಸಭಾಪತಿಗಳು ಪರಿಸ್ಥಿತಿ ತಿಳಿಗೊಳಿಸಿದರು.

ಇದನ್ನೂ ಓದಿ : 7ನೇ ವೇತನ ಆಯೋಗದ ವರದಿ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ, ಖಾಲಿ ಹುದ್ಧೆಗಳ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.