ETV Bharat / state

16ನೇ ಹಣಕಾಸು ಆಯೋಗ: ಮೆಮೊರಾಡಂ ಸಲ್ಲಿಕೆಗಾಗಿ ತಾಂತ್ರಿಕ ಕೋಶ ರಚನೆಗೆ ಸಂಪುಟ ತೀರ್ಮಾನ - ತಾಂತ್ರಿಕ ಕೋಶ

16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡುವ ಜ್ಞಾಪನಾ ಪತ್ರ ತಯಾರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ತಾಂತ್ರಿಕ ಕೋಶ ರಚಿಸಲು ಸಂಪುಟ ಸಭೆ ತೀರ್ಮಾನ ಮಾಡಿದೆ.

ಸಂಪುಟ ಸಭೆ
ಸಂಪುಟ ಸಭೆ
author img

By ETV Bharat Karnataka Team

Published : Jan 6, 2024, 6:50 AM IST

ಬೆಂಗಳೂರು : ಹೊಸದಾಗಿ ರಚನೆಯಾದ 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಆರ್ಥಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ಸಮರ್ಥ ವಾದ ಮಂಡನೆಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕಾಗಿ ಮೂರು ಸದಸ್ಯರ ತಾಂತ್ರಿಕ ಕೋಶವನ್ನು ರಚಿಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ, 16ನೇ ಹಣಕಾಸು ಆಯೋಗಕ್ಕೆ ಜ್ಞಾಪನಾ ಪತ್ರವನ್ನು (Memorandum) ತಯಾರಿಸಲು 3 ಸದಸ್ಯರುಗಳನ್ನೊಳಗೊಂಡ ತಾಂತ್ರಿಕ ಕೋಶವನ್ನು ರಚಿಸಲು ನಿರ್ಧರಿಸಲಾಗಿದೆ. 14ನೇ ಹಣಕಾಸು ಆಯೋಗ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರಬೇಕಾದ ಅರ್ಥಿಕ ಅನುಕೂಲ, ಅನುದಾನಗಳು ನಮ್ಮ‌ ರಾಜ್ಯದ ನೈತಿಕ ಹಕ್ಕಿಗೆ ವ್ಯತಿರಿಕ್ತವಾದ ಪರಿಣಾಮ‌ ಬೀರಿದ್ದು, ಅದರಿಂದ ನಮಗೆ ದೊಡ್ಡ ಆರ್ಥಿಕ ಹೊರೆ ಬಿದ್ದಿದೆ. ಇದೀಗ 16ನೇ ಹಣಕಾಸು ಆಯೋಗ ರಚನೆ ಮಾಡಲಾಗಿದೆ. 16ನೇ ಹಣಕಾಸು ಆಯೋಗದಲ್ಲಿ ನಮ್ಮ‌ ವಾದ ಏನಿರಬೇಕು ಎಂಬ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದಿದೆ. ರಾಜ್ಯ ಸಮರ್ಥವಾದ ವಾದ ಮಂಡನೆಗೆ ತೀರ್ಮಾನಿಸಲಾಗಿದ್ದು, ಇದಕ್ಕಾಗಿ ತಾಂತ್ರಿಕ ಕೋಶವನ್ನು ರಚಿಸಲು ನಿರ್ಧರಿಸಲಾಗಿದೆ. ತಾಂತ್ರಿಕ ಕೋಶದಲ್ಲಿ ಸದಸ್ಯರಾಗಿ ಗೋವಿಂದ ರಾವ್, ಶ್ರೀನಿವಾಸಮೂರ್ತಿ, ನರೇಂದ್ರ ಪಾಣಿ ಇರಲಿದ್ದಾರೆ ಎಂದರು.

ದೇಶದಲ್ಲಿ ಎರಡನೇ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ. ಸುಮಾರು 4 ಲಕ್ಷ ಕೋಟಿ ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಇದರಲ್ಲಿ ಕೇವಲ 60 ಸಾವಿರ ಕೋಟಿ ರೂ. ನಮಗೆ ವಾಪಸ್​ ಬರುತ್ತಿದೆ.‌ ಐಟಿ ರಪ್ತು ಕ್ಷೇತ್ರದಲ್ಲಿ 3.50 ಲಕ್ಷ ಕೋಟಿ ರಾಜ್ಯದಿಂದ ರಪ್ತಾಗುತ್ತಿದೆ. ಅದಕ್ಕೆ ಪ್ರತಿಯಾಗಿ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ ಎಂಬ ಅಭಿಪ್ರಾಯವಿದೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ 4.71% ಪಾಲು ಇತ್ತು. 15ನೇ ಹಣಕಾಸು ಆಯೋಗದ ವೇಳೆ ಅದು 3.64% ಕ್ಕೆ ಇಳಿಕೆಯಾಗಿದೆ. ತೆರಿಗೆ ಪಾಲಿನಲ್ಲಿ 25% ಕಡಿಮೆಯಾಗಿದೆ. ಆ ಮೂಲಕ ವರ್ಷಕ್ಕೆ 14 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. 2020-2025ವರೆಗೆ ಐದು ವರ್ಷದಲ್ಲಿ 62,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿದರು.

ಕೇಂದ್ರ ತೆರಿಗೆಗಳನ್ನು ಮುಂದುವರಿಸಿದೆ. ಪ್ರಮಾಣವೂ ಅಷ್ಟೇ ಇದೆ. ಆದರೆ, ತೆರಿಗೆಯನ್ನು ಕರವಾಗಿ ಪರಿವರ್ತಿಸಿದೆ. ಈ ಮುಂಚೆ ಸೆಸ್​ನಿಂದ ಕೇಂದ್ರಕ್ಕೆ ಹೋಗುವ ಆದಾಯ 8-9% ಇತ್ತು. ಇದೀಗ ಕರದಿಂದ 23% ಕೇಂದ್ರ ಸರ್ಕಾರಕ್ಕೆ ಆದಾಯ ಬರುತ್ತಿದೆ. ಸೆಸ್​ಗೆ ಪರಿವರ್ತಿಸಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಲ್ಲಿ ಸುಮಾರು 90% ಕೇಂದ್ರವೇ ಇಟ್ಟು ಕೊಳ್ಳುತ್ತಿದೆ‌. ರಾಜ್ಯಕ್ಕೆ ಕೇವಲ 5% ಮಾತ್ರ ಬರುತ್ತಿದೆ. ಇದರಿಂದ ಕರ್ನಾಟಕ ರಾಜ್ಯಕ್ಕೆ ವರ್ಷಕ್ಕೆ 8,200 ಕೋಟಿ ರೂ.‌ನಷ್ಟವಾಗುತ್ತಿದೆ. ತೆರಿಗೆಯನ್ನು ಕರವಾಗಿ ಪರಿವರ್ತನೆ ಮಾಡಿರುವುದರಿಂದ ಈ ಕೊರತೆಯಾಗಿದೆ ಎಂದರು‌.

ಜಿಎಸ್​ಟಿಗೂ ಮೊದಲು ಕರ್ನಾಟಕದ ವಾಣಿಜ್ಯ ತೆರಿಗೆ 14-15% ವೃದ್ಧಿ ಇತ್ತು. ಜೂನ್​ 2022ರಲ್ಲಿ ಜಿಎಸ್​ಟಿ ನಷ್ಟ ಪರಿಹಾರ ಕೊನೆಯಾಗಿದೆ. ಜಿಎಸ್​ಟಿ ಬಂದ ಬಳಿಕ ನಮಗೆ ಈ ಹಿಂದಿನ ತೆರಿಗೆ ಸಂಗ್ರಹದ ವೃದ್ಧಿಗೆ ಹೋಲಿಸಿದರೆ ಪ್ರತಿವರ್ಷ 25,000-30,000 ಕೋಟಿ ರೂ. ಕಡಿಮೆಯಾಗುತ್ತಿದೆ. ಈ ಕೊರತೆಗಳ ಹಿನ್ನೆಲೆ ಹಣಕಾಸು ಆಯೋಗ ನಮಗೆ ಮೂರು ವಿಶೇಷ ಅನುದಾನ ಅಂದರೆ ಸುಮಾರು 11,495 ಕೋಟಿ ರೂ. ಶಿಫಾರಸು ಮಾಡಿದೆ. ಅದನ್ನೂ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

1971ರ ಜನಸಂಖ್ಯೆ ಆಧಾರದ ಮೇಲೆ ಅನುದಾನ, ಹಣಕಾಸು ಲೆಕ್ಕ ಹಾಕಲಾಗುತ್ತದೆ. ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಟ್ಟ ಕರ್ನಾಟಕಕ್ಕೆ ಹೆಚ್ಚು ಆರ್ಥಿಕ ಹೊಡೆತ ಬಿದ್ದಿದೆ. ಜನಸಂಖ್ಯೆ ನಿಯಂತ್ರಣ ಮಾಡಿದವರಿಗೆ ದಂಡ ಹಾಕಿದಂತಾಗಿದೆ. ನಿಯಂತ್ರಣ ಮಾಡದೇ ಇರುವವರಿಗೆ ಹೆಚ್ಚಿನ ಅನುದಾನ ಸಿಗುತ್ತಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ ರಾಜ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

ಯಾರು ಅತಿ ಹೆಚ್ಚು ಸಾಲ ಮಾಡಿದ್ದಾರೆ. ಆ ರಾಜ್ಯಗಳ ಸಾಲಕ್ಕೆ ಸಹಾಯಧನ ನೀಡಿದ್ದಾರೆ. ಯಾವ ರಾಜ್ಯಗಳು ಆರ್ಥಿಕ ಶಿಸ್ತು ಕಾಪಾಡಿದ್ದಾರೆ. ಅವರಿಗೆ ಯಾವುದೇ ಸಹಾಯಧನ‌ ನೀಡಿಲ್ಲ. ಉತ್ತಮ ಆರ್ಥಿಕ ಶಿಸ್ತು ಕಾಪಾಡಿದ ರಾಜ್ಯಕ್ಕೆ ಸಹಾಯಧನ ನೀಡಿ ಎಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ. ಜಿಎಸ್​ಟಿ ಜಾರಿಯಾದ ಮೇಲೆ ನಮಗೆ ತೊಂದರೆ ಆಗಿದೆ. ಅದನ್ನೂ ಪರಿಗಣಿಸಬೇಕು ಎಂಬುದು ನಮ್ಮ ಮನವಿ. ಸೆಸ್, ಸರ್ ಚಾರ್ಜ್​ನಲ್ಲೂ ನಮಗೆ ಹೆಚ್ಚಿನ ಪಾಲು ನೀಡಬೇಕು ಎಂದು ಒತ್ತಾಯ ಮಾಡಲಿದ್ದೇವೆ. ಪ್ರಕೃತಿ ವಿಕೋಪಕ್ಕೆ ನಮ್ಮ ರಾಜ್ಯಕ್ಕೆ ಕಡಿಮೆ ಹಣ ಬರುತ್ತಿದೆ.‌ ಅದನ್ನು ಹೆಚ್ಚಿಸಲು ಒತ್ತಾಯ ಮಾಡಲಾಗುವುದು ಎಂದರು.

ಹಣಕಾಸು ಆಯೋಗಕ್ಕೆ ಸದಸ್ಯರು ನೇಮಕ ಮಾಡುವ ವೇಳೆ ದಕ್ಷಿಣ ಭಾರತದಿಂದ ಯಾವ ಸದಸ್ಯರನ್ನು ನೇಮಕ ಮಾಡಿಲ್ಲ. ಹೀಗಾಗಿ ರಾಜ್ಯಗಳ ಅಭಿಪ್ರಾಯವನ್ನು ಹಂಚಲು ಅವಕಾಶ ನೀಡುವಂತೆ, ರಾಜ್ಯದ ಸದಸ್ಯರನ್ನು ನೇಮಕ ಮಾಡಲು ಒತ್ತಾಯಿಸಲಾಗುವುದು ಎಂದರು.

ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ: ಮಹತ್ವದ ನಿರ್ಣಯಗಳು ಹೀಗಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.