ಬೆಂಗಳೂರು : ಇಂದು 'ವಿಶ್ವ ಮಧುಮೇಹ ದಿನ'ದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಆರೋಗ್ಯ ಶಿಬಿರವನ್ನ ಏರ್ಪಡಿಸಿತ್ತು.
ಪಾಲಿಕೆ ವ್ಯಾಪ್ತಿಯ ವಿವಿಧ ಆರೋಗ್ಯ ಕೇಂದ್ರಗಳು ಹಾಗೂ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಮತ್ತು ಮುಂಜಾನೆ ವಾಯು ವಿಹಾರ ಮಾಡಲು ಬಂದವರಿಗೆ ಆರೋಗ್ಯ ಶಿಬಿರ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವೇಳೆ ಒಟ್ಟು 768 ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ 161 ಮಧುಮೇಹ ಪ್ರಕರಣ(ಹೊಸ ಪ್ರಕರಣ 90 ಮತ್ತು ಹಳೆಯ ಚಿಕಿತ್ಸೆ ಪ್ರಕರಣಗಳು 71), 134 ಅಧಿಕ ರಕ್ತದೊತ್ತಡ ಪ್ರಕರಣಗಳು(ಹೊಸ ಪ್ರಕರಣ 27 ಮತ್ತು ಹಳೆಯ ರೋಗಿಗಳು 107) ಪತ್ತೆಯಾಗಿವೆ. ಹೊಸದಾಗಿ ಪತ್ತೆಯಾದ ಎಲ್ಲಾ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
30 ವರ್ಷ ವಯಸ್ಸು ದಾಟಿದ ಮೇಲೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆರಂಭದಲ್ಲೇ ಡಯಾಬಿಟಿಸ್ ಪತ್ತೆ ಮಾಡಿದರೆ ಇದರಿಂದ ಮುಂದಿನ ದಿನಗಳಲ್ಲಿ ಆಗುವ ಇತರೆ ಅನಾರೋಗ್ಯ ಸಮಸ್ಯೆಗಳನ್ನ ತಡೆಯಬಹುದಾಗಿದೆ.
ಇದನ್ನೂ ಓದಿ:COVID-19 : ರಾಜ್ಯದಲ್ಲಿಂದು 236 ಮಂದಿಗೆ ಸೋಂಕು, ಇಬ್ಬರು ಬಲಿ..