ಬೆಂಗಳೂರು: ರಾಜ್ಯದಲ್ಲಿಂದು 1522 ಜನರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,82,608ಕ್ಕೆ ಏರಿಕೆ ಆಗಿದೆ.
ಕೊರೊನಾಗೆ 12 ಸೋಂಕಿತರು ಮೃತರಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ 11,750ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 1.37ರಷ್ಟು ಹಾಗೂ ಸಾವಿನ ಪ್ರಮಾಣ ಶೇ 0.78 ರಷ್ಟು ಇದೆ.
ಇದನ್ನೂ ಓದಿ: ಪತ್ನಿಯ ವಿವಾಹೇತರ ಸಂಬಂಧದ ವ್ಯಾಮೋಹ: ಗಂಡನ ತಲೆಗೆ ಫಿಕ್ಸ್ ಮಾಡಿದ್ಲು 10 ಲಕ್ಷ ಸುಪಾರಿ... ಮುಂದೆ?
ಕೊರೊನಾದಿಂದ 2133 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,46,082 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 384 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಇದ್ದು, ರಾಜ್ಯದಲ್ಲಿ ಸದ್ಯ 24,757 ಸಕ್ರಿಯ ಪ್ರಕರಣಗಳು ಇವೆ. ಕಳೆದ 7 ದಿನಗಳಲ್ಲಿ 31,565 ಜನರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಇನ್ನು ಸೋಂಕಿತರ ಸಂಪರ್ಕದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿ 1,20,409 ಮತ್ತು ದ್ವಿತೀಯ ಸಂಪರ್ಕದಲ್ಲಿ 1,34,409 ಜನರು ಇದ್ದಾರೆಂದು ವೈದ್ಯಕೀಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಲ್ಲಿಂದು 719 ಕೊರೊನಾ ಕೇಸ್ ಪತ್ತೆ
ಬೆಂಗಳೂರು ನಗರದಲ್ಲಿಂದು 719 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಒಟ್ಟು 3,68,604ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಉಡುಪಿಯಲ್ಲಿ ಲಕ್ಷ ದೀಪೋತ್ಸವ: ದೀಪಗಳ ಬೆಳಕಿನಲ್ಲಿ ಕಂಗೊಳಿಸಿದ ರಥಬೀದಿ
ಇಂದು 1429 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 3,46,116 ಮಂದಿ ಬಿಡುಗಡೆ ಹೊಂದಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 18,366ಕ್ಕೆ ಇಳಿಕೆಯಾಗಿದೆ. ಇಂದು 7 ಮಂದಿ ಮೃತಪಟ್ಟಿದ್ದು, ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 4,121ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ ಘಟಕದಲ್ಲಿ 184 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.