ಬೆಂಗಳೂರು: ರಾಜ್ಯದಲ್ಲಿಂದು 8,037 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 148 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,48,092ಕ್ಕೆ ಏರಿಕೆ ಆಗಿದೆ. ಪಾಸಿಟಿವ್ ದರ 1.84%ಕ್ಕೆ ಏರಿಕೆ ಕಂಡಿದೆ.
ಇತ್ತ 162 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 39,06,189 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಯಾವುದೇ ಸಾವಿನ ವರದಿಯಾಗಿಲ್ಲ, ಸಾವಿನ ಸಂಖ್ಯೆ 40,060ರಷ್ಟಿದ್ದು, ಡೆತ್ ರೇಟ್ ಶೇ. 0.36ರಷ್ಟಿದೆ. ಸದ್ಯ 1,801 ಸಕ್ರಿಯ ಪ್ರಕರಣಗಳಿವೆ. ವಿಮಾನ ನಿಲ್ದಾಣದಿಂದ 3,351 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ 142 ಮಂದಿಗೆ ಸೋಂಕು ತಗುಲಿದ್ದು, 17,84,022ಕ್ಕೆ ಏರಿಕೆ ಆಗಿದೆ. 150 ಮಂದಿ ಚೇತರಿಸಿಕೊಂಡಿದ್ದು, ಇಲ್ಲಿಯವರೆಗೆ 17,65,339 ಜನರು ಬಿಡುಗಡೆಯಾಗಿದ್ದಾರೆ. ರಾಜಧಾನಿಯಲ್ಲಿ ಸಾವಿನ ಸಂಖ್ಯೆ 16,962ರಷ್ಟಿದ್ದು, 1,720 ಸಕ್ರಿಯ ಪ್ರಕರಣಗಳಿವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೀಟಾ - 08
- ಡೆಲ್ಟಾ ಸಬ್ ಲೈನೇಜ್ - 4,623
- ಇತರೆ - 331
- ಒಮಿಕ್ರಾನ್ - 5,422
- BAI.1.529 - 1,005
- BA1 - 100
- BA2 - 4,317
- ಒಟ್ಟು - 10,540
ಇದನ್ನೂ ಓದಿ: 'ರಬ್ ನೇ ಬನಾದಿ ಜೋಡಿ' 36 ಇಂಚಿನ ವರನ ಕೈ ಹಿಡಿದ 34 ಇಂಚಿನ ವಧು!