ETV Bharat / state

ಪಾದರಾಯನಪುರದಲ್ಲಿ ಸೆಕ್ಷನ್​ 144; ಪೊಲೀಸರ ರೂಲ್ಸ್​ಗೆ ಜನ ಡೋಂಟ್​ ಕೇರ್ - 144 section

ಪಾದರಾಯನಪುರದಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಬಿಡುಗಡೆಯಾದ ಸಂದರ್ಭದಲ್ಲಿ ಜನ ಗುಂಪಾಗಿ ಸೇರಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಪಾದರಾಯನಪುರದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ 144 ಸೆಕ್ಷನ್ ಜಾರಿ ಮಾಡಲಾಗಿದೆ. ಆದರೂ ಜನ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಬಿಂದಾಸ್​ ಆಗಿ ಓಡಾಡ್ತಿದ್ದಾರೆ.

Padarayanpura
ಪಾದರಾಯನಪುರ
author img

By

Published : Jun 9, 2020, 9:05 AM IST

ಬೆಂಗಳೂರು: ಒಂದೆಡೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಮತ್ತೊಂದೆಡೆ ಪಾದರಾಯನಪುರದ ಬಳಿ ಸೋಂಕಿನ ಲಕ್ಷಣ ಹೆಚ್ಚಾಗಿರುವ ಕಾರಣ ಸೆಕ್ಷನ್​ 144 ಜಾರಿಮಾಡಲಾಗಿದೆ.

ಪಾದರಾಯನಪುರದಲ್ಲಿ ಕಾರ್ಪೊರೇಟರ್ ಇಮ್ರಾನ್ ಪಾಷಾ ಬಿಡುಗಡೆಯಾದ ಸಂದರ್ಭದಲ್ಲಿ ಜನ ಗುಂಪಾಗಿ ಸೇರಿ ನಿಯಮ ಉಲ್ಲಂಘನೆ ಮಾಡಿದ ಕಾರಣ ಪಾದರಾಯನಪುರದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​ 144 ಸೆಕ್ಷನ್ ಜಾರಿ ಮಾಡಿದ್ದರು.

ಸೆಕ್ಷನ್ ಜಾರಿ ಇದ್ದರೂ ಪಾದಾರಯನಪುರ ಜನ ಮಾತ್ರ ಡೋಂಟ್ ಕೇರ್‌ ಅನ್ನದೇ ಪೊಲೀಸರ ರೂಲ್ಸ್ ಮೀರಿ ಬೆಳ್ಳಂಬೆಳಗ್ಗೆ ಮನೆಯಿಂದ ಹೊರಗೆ ಬಂದು, ಮಾಸ್ಕ್ ಇಲ್ಲದೇ ಗುಂಪಾಗಿ ಓಡಾಡುತ್ತಿದ್ದಾರೆ.

ಪಾದರಾಯನಪುರ ಮೊದಲೇ ಬಹಳ ಸೆನ್ಸಿಟಿವ್ ಏರಿಯಾ ಆಗಿದ್ದು, ಈ ಹಿಂದೆ ಕೊರೊನಾ ವಾರಿಯರ್ ಮೇಲೆ ಹಲ್ಲೆ ನಡೆದಿತ್ತು. ಎರಡು ದಿನಗಳ ಹಿಂದೆ ಪಾದರಾಯನಪುರದಲ್ಲಿ ಹಂಗಾಮ ನಡೆದಿತ್ತು. ಆ ಬಳಿಕ ಎಚ್ಚೆತ್ತ ಪೊಲೀಸರು ಸೆಕ್ಷನ್ 144 ನ್ನು ಜೂನ್ 7 ರಿಂದ ಜೂನ್ 13ರವರೆಗೆ ಜಾರಿ ಮಾಡಿದ್ದರು. ಹಾಗೆ ಹಲವು ಏರಿಯಾಗಳಲ್ಲಿ ಬ್ಯಾರಿಕೇಡ್ ನಿರ್ಮಾಣ‌ ಮಾಡಿ ಪೊಲೀಸರ ನಿಯೋಜನೆ ಮಾಡಿದ್ದರು. ಆದ್ರೂ ಕೂಡ ಜನ ಕೊರೊನಾ ಭೀತಿ ಮರೆತು ಓಡಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.