ETV Bharat / state

ಬೆಂಗಳೂರಲ್ಲಿ ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಣೆ - Bengaluru city police commissioner kamal pant

ಈಗಾಗಲೇ ರಾಜ್ಯದಲ್ಲಿ ಜನವರಿ 19ರವರೆಗೆ ಜಾರಿ ಮಾಡಿ ಆದೇಶಿಸಲಾಗಿದ್ದ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯದ ನಿಷೇಧಾಜ್ಞೆ ಸೇರಿದಂತೆ ಕಠಿಣ ಮಾರ್ಗಸೂಚಿಯನ್ನು ತಿಂಗಳಾಂತ್ಯದವರೆಗೂ ವಿಸ್ತರಿಸಲಾಗಿದೆ..

144-section
144 ಸೆಕ್ಷನ್
author img

By

Published : Jan 17, 2022, 4:12 PM IST

ಬೆಂಗಳೂರು : ಕೋವಿಡ್​​ ಮೂರನೇ ಅಲೆ ಹರಡುವಿಕೆ ನಿಯಂತ್ರಿಸಲು ನಗರದಲ್ಲಿ ಜಾರಿಯಲ್ಲಿರುವ 144 ಸೆಕ್ಷನ್​ನ ಜನವರಿ 31ರವರೆಗೂ ವಿಸ್ತರಿಸಿ ನಗರ ಪೊಲೀಸ್ ಆಯುಕ್ತರಾದ ಕಮಲ್​ ಪಂತ್​ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಗೆ ಆಯುಕ್ತರು ಜನವರಿ 6ರಿಂದ 19ರವರೆಗೂ 144 ಸೆಕ್ಷನ್ ಜಾರಿಗೊಳಿಸಿದ್ದರು. ಇದೀಗ ಜನವರಿ 31ರವರೆಗೂ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ ಅಂತವರ ವಿರುದ್ಧ ಐಪಿಸಿ ಸೆಕ್ಷನ್ 188, ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು‌ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಲಾಕ್​​​ಡೌನ್ ಮಾಡುವ ವಿಚಾರ ನಮ್ಮ ಮುಂದೆ ಇಲ್ಲ: ಸಚಿವ ಆರ್. ಅಶೋಕ್ ಸ್ಪಷ್ಟನೆ

ಈಗಾಗಲೇ ರಾಜ್ಯದಲ್ಲಿ ಜನವರಿ 19ರವರೆಗೆ ಜಾರಿ ಮಾಡಿ ಆದೇಶಿಸಲಾಗಿದ್ದ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯದ ನಿಷೇಧಾಜ್ಞೆ ಸೇರಿದಂತೆ ಕಠಿಣ ಮಾರ್ಗಸೂಚಿಯನ್ನು ತಿಂಗಳಾಂತ್ಯದವರೆಗೂ ವಿಸ್ತರಿಸಲಾಗಿದೆ.

ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಇಂದು ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕೊಂಚಮಟ್ಟಿನ ಇಳಿಕೆ ಕಂಡಿದ್ದು, 18,622 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಕೋವಿಡ್ ಮೂರನೇ ಅಲೆ ಆರಂಭವಾದಾಗಿನಿಂದ ಜ.15ರಂದು ಅತಿಹೆಚ್ಚು ಅಂದರೆ 22,284 ಪ್ರಕರಣ ದೃಢಪಟ್ಟಿದ್ದವು.

ಇದನ್ನೂ ಓದಿ: ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​​ಗೆ ಕೋವಿಡ್​​ ಸೋಂಕು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.