ಬೆಂಗಳೂರು : ರಾಜಧಾನಿಯಲ್ಲಿ ಮುಂದಿನ 10 ದಿನವೂ ಕೋವಿಡ್ ಕಟ್ಟೆಚ್ಚರ ಮುಂದುವರೆಯಲಿದೆ. ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಫೆಬ್ರವರಿ 28ರವರೆಗೂ ನಗರದಲ್ಲಿ 144 ಸೆಕ್ಷನ್ ಚಾಲ್ತಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಧರಣಿ, ಪ್ರತಿಭಟನೆ, ಮೆರವಣಿಗೆ ಮಾಡಲು ಅವಕಾಶ ಇರುವುದಿಲ್ಲ. ನಿಬಂಧನೆಗಳು ಮೊದಲಿನಂತೆ ಮುಂದುವರಿಯಲಿವೆ. ಒಳಾಂಗಣ ಮದುವೆ ಸಮಾರಂಭಕ್ಕೆ 200 ಜನ, ಹೊರಾಂಗಣ ಸಮಾರಂಭಕ್ಕೆ 300 ಮಂದಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ: ಸದಸ್ಯರನ್ನು ಸಸ್ಪಂಡ್ ಮಾಡಿ ಎಂದ ರಮೇಶ್ ಕುಮಾರ್, ಗರಂ ಆದ ಸ್ಪೀಕರ್, ಸಿಎಂ!