ETV Bharat / state

ಈ ಬಾರಿ ಅದ್ಧೂರಿ ಹೊಸ ವರ್ಷಾಚರಣೆ ಇಲ್ಲ : ಬೆಂಗಳೂರಿನಲ್ಲಿ ಡಿ.31ರ ಸಂಜೆ 6ರಿಂದ ನಿಷೇಧಾಜ್ಞೆ - ಬೆಂಗಳೂರಿನಲ್ಲಿ ಡಿ.31ರಂದು ಸಂಜೆ 6ರಿಂದ ನಿಷೇಧಾಜ್ಞೆ

kamal-pant
ಕಮಲ್​ ಪಂತ್
author img

By

Published : Dec 28, 2020, 7:31 PM IST

Updated : Dec 28, 2020, 9:56 PM IST

15:10 December 28

ಕೊರೊನಾ ಹಿನ್ನೆಲೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ: ಕಮಲ್​ ಪಂತ್

ಕಮಲ್​ ಪಂತ್

ಬೆಂಗಳೂರು: ಕೊರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ನಿರ್ಧರಿಸಿದ್ದ ರಾಜ್ಯ ಸರ್ಕಾರ ತೀವ್ರ ಟೀಕೆ ಎದುರಿಸಿದ ನಂತರ ಈ ತೀರ್ಮಾನ ಕೈಬಿಟ್ಟಿತ್ತು. ಇದೀಗ ನೂತನ ವರ್ಷಾಚರಣೆಯ ಜವಾಬ್ದಾರಿ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕಾಗಿ ಉದ್ಯಾನ ನಗರಿಯ ಪೊಲೀಸರು ಸರ್ವ ಸಜ್ಜಾಗಿದ್ದಾರೆ. 

ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ:

ನೂತನ ವರ್ಷ 2021ನ್ನು ಸ್ವಾಗತಿಸಲು ಮೂರು ದಿನಗಳಷ್ಟೇ ಉಳಿದಿವೆ. ಅಂದು ಅದ್ಧೂರಿಯಾಗಿ ಹೊಸ ವರ್ಷಾಚರಣೆಗೆ ಪ್ಲಾನ್​ ಮಾಡಿರುವವರಿಗೆ ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ಶಾಕ್​ ಕೊಟ್ಟಿದ್ದಾರೆ. ಡಿ.31ರ ಸಂಜೆ 6ರಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳನ್ನು ಕಮಲ್​ ಪಂತ್​​ ಬಿಡುಗಡೆ ಮಾಡಿದರು.

ಸಾರ್ವಜನಿಕ ಸ್ಥಳದಲ್ಲಿ ಸಂಭ್ರಮಾಚರಣೆ ಇಲ್ಲ:

ಐದು ಅಥವಾ ಅದಕ್ಕಿಂತ ಹೆಚ್ಚು ಜನ ಒಂದೆಡೆ ಒಟ್ಟಾಗಿ ಸೇರುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷದ ಅದ್ಧೂರಿ ಆಚರಣೆಗೆ ಅವಕಾಶವಿಲ್ಲ. ಈ ನಿಯಮಗಳನ್ನು ಪಾಲಿಸದಿದ್ದರೆ ಪ್ರತ್ಯೇಕ ದಂಡ ವಿಧಿಸಲಾಗುವುದು. ಅಪಾರ್ಟ್​​ಮೆಂಟ್​​ಗಳು, ಕ್ಲಬ್​ಹೌಸ್​​ನಲ್ಲಿ ಆಚರಣೆ ಮಾಡಬಹುದು. ಆದರೆ ಪಬ್​​, ರೆಸ್ಟೋರೆಂಟ್​ಗಳಲ್ಲಿ ಕೋವಿಡ್​​ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪಬ್​​, ಬಾರ್​​, ರೆಸ್ಟೋರೆಂಟ್​​ಗಳು ಎಂದಿನಂತೆ ಕಾರ್ಯನಿರ್ವಹಿಸಬಹುದು. ಪಬ್​, ಕ್ಲಬ್​​ಹೌಸ್​​ಗಳಲ್ಲಿ ಈವೆಂಟ್​​​ ಶೋ​,​ ಸಂಗೀತ ಬ್ಯಾಂಡ್​, ಮ್ಯೂಸಿಕ್​ ಡ್ಯಾನ್ಸ್​​ ಮಾಡುವ ಹಾಗಿಲ್ಲ.

'ನಿಷೇಧಿತ ಪ್ರದೇಶ'ದಲ್ಲಿ ನೋ ಎಂಟ್ರಿ!

ಎಂಜಿ ರೋಡ್​, ಬ್ರಿಗೇಡ್​ ರೋಡ್​​, ಚರ್ಚ್​​ಸ್ಟ್ರೀಟ್​, ಕೋರಮಂಗಲ, ಇಂದಿರಾನಗರದಲ್ಲಿ ಕಠಿಣ ನಿಯಮ ಜಾರಿಯಲ್ಲಿರಲಿದೆ. ಈ ಐದು ಸ್ಥಳಗಳು ಅಂದು 'ನೋ ಮ್ಯಾನ್​' ಝೋನ್​​ ಆಗಿರಲಿವೆ. ಬುಕ್ಕಿಂಗ್​​ ಕೂಪನ್​ ಇದ್ದರೆ ಮಾತ್ರ ಈ ಸ್ಥಳಗಳಲ್ಲಿರುವ ಪಬ್​​, ಬಾರ್​​, ರೆಸ್ಟೋರೆಂಟ್​ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.  

ಹೋಟೆಲ್​ಗಳಲ್ಲಿ ಶೇ. 50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ:

ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಶೇ. 50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇನ್ನಿತರ ಈವೆಂಟ್​​ಗಳನ್ನು ಮಾಡುವಂತಿಲ್ಲ.  

ವೀಲಿಂಗ್​ ಮಾಡುವವರ ಮೇಲೆ ನಿಗಾ:

ಬೆಂಗಳೂರು ನಗರದಲ್ಲಿ ಜಾಲಿ ರೈಡ್​​ ಮಾಡುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ವೀಲಿಂಗ್​, ಡ್ರ್ಯಾಗ್​ ರೇಸ್​ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಪ್ರಮುಖ ಫ್ಲೈಓವರ್​​ಗಳನ್ನು ಬಂದ್​ ಮಾಡಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಸುಖಾಸುಮ್ಮನೆ ಓಡಾಡಿದರೆ, ಕೊರೊನಾ ಮಾರ್ಗಸೂಚಿ ಉಲ್ಲಂಘಿಸುವುದು ಕಂಡು ಬಂದರೆ ಅಂಥವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕೋವಿಡ್​-19 ಭೀತಿ ಇರೋದ್ರಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸೋಣ ಎಂದು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​​ ಜನರಲ್ಲಿ ಮನವಿ ಮಾಡಿಕೊಂಡರು. 

ಓದಿ: ಸಿ.ಎಂ.ಇಬ್ರಾಹಿಂ ಜೆಡಿಎಸ್​​​ ಸೇರ್ಪಡೆ ವಿಷಯ ಅಚ್ಚರಿಯೇನಲ್ಲ: ವೈಎಸ್​​ವಿ ದತ್ತಾ

Last Updated : Dec 28, 2020, 9:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.