ETV Bharat / state

ಬೆಂಗಳೂರಿನಲ್ಲಿ 1,370 ಸೋಂಕಿತರು ಪತ್ತೆ: 20 ದಿನದಲ್ಲಿ 2 ಲಕ್ಷಕ್ಕೂ ಹೆಚ್ಚು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಇಳಿಕೆ ಕಾಣುತ್ತಿದ್ದು, ಇಂದು 1,370 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ನಿನ್ನೆ 2,454 ಸೋಂಕಿತರು ಪತ್ತೆಯಾಗಿದ್ದರು.

bangalore corona cases
ಬೆಂಗಳೂರು ಕೊರೊನಾ ಪ್ರಕರಣಗಳು
author img

By

Published : Jun 13, 2021, 12:50 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತಿದೆ. ಇಂದು 1,370 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬೊಮ್ಮನಹಳ್ಳಿಯಲ್ಲಿ- 122, ದಾಸರಹಳ್ಳಿ- 40 , ಬೆಂಗಳೂರು ಪೂರ್ವ- 187 , ಮಹಾದೇವಪುರ- 187, ಆರ್‌ಆರ್ ನಗರ- 158, ಬೆಂಗಳೂರು ದಕ್ಷಿಣ- 136, ಬೆಂಗಳೂರು ಪಶ್ಚಿಮ- 130, ಯಲಹಂಕದಲ್ಲಿ 116 ಜನರಿಗೆ ಕೋವಿಡ್​​ ಪಾಸಿಟಿವ್ ವರದಿ ಬಂದಿದೆ.

bangalore corona cases
ಬೆಂಗಳೂರು ಕೊರೊನಾ ಪ್ರಕರಣಗಳು

ನಿನ್ನೆ ನಗರದಲ್ಲಿ 2,454 ಪ್ರಕರಣಗಳು ಪತ್ತೆಯಾಗಿ, 21 ಮಂದಿ ಮೃತಪಟ್ಟಿದ್ದರು. ಇಂದು ಸೋಂಕು ಪ್ರಕರಣಗಳ ಪ್ರಮಾಣ ಪತ್ತಷ್ಟು ಇಳಿಕೆಯಾಗಿದೆ. ಸದ್ಯ 88,795 ಸಕ್ರಿಯ ಪ್ರಕರಣಗಳಿವೆ. ಜೂನ್ 11 ರಂದು 42,657 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗಿತ್ತು. 1,02,409 ಜನರಿಗೆ ವ್ಯಾಕ್ಸಿನ್ ನೀಡಲಾಗಿತ್ತು. ಸದ್ಯ ಕೋವಿಡ್​​ ಪಾಸಿಟಿವಿಟಿ ಪ್ರಮಾಣ 3.49%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 3.93% ರಷ್ಟಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್‌ ಪಾಸಿಟಿವಿಟಿ ದರ 6.61%: 35 ದಿನಗಳ ಲಾಕ್​ ಡೌನ್​ ನಾಳೆ ಅಂತ್ಯ

ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ:

ಮೇ. 22ರಿಂದ ಈವರೆಗೆ ನಗರದಲ್ಲಿ 2,29,016 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಸರ್ಕಾರ ಗುರುತಿಸಿರುವ 22 ತಂಡಗಳ ಮುಂಚೂಣಿ ಕಾರ್ಯಕರ್ತರಾದ ಕಟ್ಟಡ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಆಟೋ ಚಾಲಕರು, ಸಿನಿಮಾ ಕಾರ್ಮಿಕರು ಕೂಡಾ ಇದರಲ್ಲಿ ಸೇರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.