ಬೆಂಗಳೂರು: ರಾಜ್ಯದಲ್ಲಿಂದು 135 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2,418 ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,588 ಸಕ್ರಿಯ ಪ್ರಕರಣಗಳಿದ್ದು, ಹಾಗೂ 781 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಯಾದಗಿರಿ, ಬೀದರ್ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರಂತೆ ಒಟ್ಟು ಮೂವರು ಕೊರೊನಾದಿಂದ ಸಾವನ್ನಪ್ಪಿದ್ದು, ಒಟ್ಟು 49 ಕ್ಕೆ(2 ಅನ್ಯ ಕಾರಣ) ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಐಸಿಯುನಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಪರೀಕ್ಷೆಗೆ 60 ಲ್ಯಾಬ್ಗಳಿಗೆ ಅನುಮತಿ
ಕೊರೊನಾ ರಾಜ್ಯಕ್ಕೆ ಎಂಟ್ರಿ ಕೊಟ್ಟಾಗ ಮೊದಮೊದಲು ಸ್ಯಾಂಪಲ್ಸ್ಅನ್ನು ಪುಣೆಗೆ ಕಳುಹಿಸಲಾಗುತ್ತಿತ್ತು. ಆದರೆ ಅಲ್ಲಿಂದ ತಡವಾಗಿ ಬರುತ್ತಿದ್ದ ಕಾರಣದಿಂದಾಗಿ ಫೆಬ್ರುವರಿ 1 ರಂದು ಮೊದಲ ಲ್ಯಾಬ್ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಯಿತು. ಫೆಬ್ರುವರಿ ಕೊನೆಗೆ 2 ಲ್ಯಾಬ್, ಮಾರ್ಚ್ ಕೊನೆಗೆ 6 ಲ್ಯಾಬ್, ಏಪ್ರಿಲ್ ಕೊನೆಗೆ 16 ಲ್ಯಾಬ್ ಅನ್ನು ಸ್ಥಾಪಿಸಲಾಯಿತು. ಈ ತಿಂಗಳ ಕೊನೆಗೆ 60 ಲ್ಯಾಬ್ಗಳಿಗೆ ಅನುಮತಿ ಸಿಕ್ಕಿದೆ.
ಬಜೆಟ್ ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆದವರ ಸಂಖ್ಯೆ ಎಷ್ಟು..?
ಅಂತಾರಾಷ್ಟ್ರೀಯ ಹಾಗೂ ಅನ್ಯ ರಾಜ್ಯಗಳಿಂದ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು, ಅವರಿಗೆ ಅನುಕೂಲವಾಗುವಂತೆ ಅವರಿಷ್ಟದ ಹೋಟೆಲ್ ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಅಂದರಂತೆ 5 ಸ್ಟಾರ್ ಹೋಟೆಲ್ನಲ್ಲಿ 738 ಮಂದಿ, 3 ಸ್ಟಾರ್ ಹೋಟೆಲ್ನಲ್ಲಿ 1,096 ಮಂದಿ ಹಾಗೂ ಬಜೆಟ್ ಹೋಟೆಲ್‌ಗಳಲ್ಲಿ 434 ಮಂದಿ ಸೇರಿದಂತೆ ಒಟ್ಟು ಹೊರದೇಶ ಮತ್ತು ಹೊರ ರಾಜ್ಯದಿಂದ ಬಂದವರು 2,328 ಜನ ಪ್ರಯಾಣಿಕರು ಹೋಟೆಲ್‌ಗಳಲ್ಲಿ ಇದ್ದಾರೆ.